ETV Bharat / international

ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ... ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ಅಸಾಧ್ಯ ಎಂದ ಟ್ರಂಪ್..! - ಡೊನಾಲ್ಡ್ ಟ್ರಂಪ್​​ ಮಧ್ಯಸ್ಥಿಕೆ

ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ಮಾಡಲು ಸಿದ್ಧರಿರುವುದಾಗಿ ಕೆಲ ವಾರಗಳ ಹಿಂದೆ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಈ ವಿಚಾರದಿಂದ ಇದೀಗ ಹಿಂದೆ ಸರಿದಿದ್ದಾರೆ.

ಪಾಕಿಸ್ತಾನ
author img

By

Published : Aug 13, 2019, 12:51 PM IST

ವಾಷಿಂಗ್ಟನ್​: ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧಕ್ಕೆ ಮುಳ್ಳಾಗಿರುವ ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ಇದೀಗ ಈ ವಿಚಾರದಿಂದ ಹಿಂದೆ ಸರಿದಿದೆ.

ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧರಿರುವುದಾಗಿ ಕೆಲ ವಾರಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಹೇಳಿದ್ದರು. ಮಧ್ಯಸ್ಥಿಕೆಗೆ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದರು ಎಂದು ಇದೇ ವೇಳೆ ಹೇಳಿ ಅಚ್ಚರಿ ಮೂಡಿಸಿದ್ದರು.

ಪಾಕಿಸ್ತಾನದ ಬೆಂಬಲಕ್ಕೆ ಯಾವ ದೇಶಗಳು ಮುಂದೆ ಬರುತ್ತಿಲ್ಲ... ಪಾಕ್​ ವಿದೇಶಾಂಗ ಸಚಿವನ ಅಳಲು

ಟ್ರಂಪ್​ ಹೇಳಿಕೆ ವಿಶ್ವಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದಕ್ಕೆ ಉತ್ತರಿಸಿದ್ದ ಭಾರತೀಯ ವಿದೇಶಾಂಗ ಇಲಾಖೆ, ಪ್ರಧಾನಿ ಮೋದಿ ಅಂತಹ ಯಾವುದೇ ಮನವಿ ಮಾಡಿಲ್ಲ, ಟ್ರಂಪ್ ಹೇಳಿಕೆ ಶುದ್ಧ ಸುಳ್ಳು ಎಂದಿತ್ತು. ಜೊತೆಗೆ ಮೋದಿ ಇಂತಹ ಮನವಿ ಮಾಡುವ ಸಾಧ್ಯತೆಯೇ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು.

ಪಾಕ್​ಗೆ ನುಂಗಲಾರದ ತುತ್ತಾದ ಆರ್ಟಿಕಲ್​ 370 ರದ್ದು... ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಎಳ್ಳು-ನೀರು!

ಈ ಎಲ್ಲ ಬೆಳವಣಿಗೆ ನಡೆದು ಸುಮಾರು ಎರಡು ವಾರದ ಬಳಿಕ ಕಾಶ್ಮೀರ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಗೊಳಿಸಿತ್ತು. ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿತ್ತು. ಇದೇ ಕಾರಣಕ್ಕೆ ರಾಜತಾಂತ್ರಿಕ ಸಂಬಂಧವನ್ನೂ ಪಾಕಿಸ್ತಾನ ಕಡಿದುಕೊಂಡಿತ್ತು.

'ಕಾಶ್ಮೀರ ಎಂದೂ ನಿಮ್ಮದಾಗಲ್ಲ'....ಪಾಕಿಸ್ತಾನಕ್ಕೆ ಏಟು ಕೊಟ್ಟ ಇಸ್ಲಾಮಿಕ್​ ವಿದ್ವಾಂಸ!

ಸದ್ಯ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಯಾವುದೇ ವಿಚಾರವೂ ನಮ್ಮ ಮುಂದಿಲ್ಲ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ ಎಂದು ಅಮೆರಿಕದ ಭಾರತೀಯ ರಾಯಭಾರಿ ಹರ್ಷವರ್ಧನ್​ ಶ್ರಿಂಗ್ಲಾ ಹೇಳಿದ್ದಾರೆ.

Intro:Body:

ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಿಚಾರ: 

ವಾಷಿಂಗ್ಟನ್​: ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧಕ್ಕೆ ಮುಳ್ಳಾಗಿರುವ ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದಾ ವಿಶ್ವದ ದೊಡ್ಡಣ್ಣ ಅಮೆರಿಕ ಇದೀಗ ಈ ವಿಚಾರದಿಂದ ಹಿಂದೆ ಸರಿದಿದೆ.

ಕಾಶ್ಮೀರ ಸಮಸ್ಯೆಗೆ ಮಧ್ಯಸ್ಥಿಕೆ ಮಾಡಲು ಸಿದ್ಧರಿರುವುದಾಗಿ ಕೆಲ ವಾರಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಹೇಳಿದ್ದರು. ಮಧ್ಯಸ್ಥಿಕೆಗೆ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದರು ಎಂದು ಇದೇ ವೇಳೆ ಹೇಳಿ ಅಚ್ಚರಿ ಮೂಡಿಸಿದ್ದರು.

ಟ್ರಂಪ್​ ಹೇಳಿಕೆ ವಿಶ್ವಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದಕ್ಕೆ ಉತ್ತರಿಸಿದ್ದ ಭಾರತೀಯ ವಿದೇಶಾಂಗ ಇಲಾಖೆ, ಪ್ರಧಾನಿ ಮೋದಿ ಅಂತಹ ಯಾವುದೇ ಮನವಿ ಮಾಡಿಲ್ಲ, ಟ್ರಂಪ್ ಹೇಳಿಕೆ ಶುದ್ಧ ಸುಳ್ಳು ಎಂದಿತ್ತು. ಜೊತೆಗೆ ಮೋದಿ ಇಂತಹ ಮನವಿ ಮಾಡುವ ಸಾಧ್ಯತೆಯೇ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿತ್ತು.

ಈ ಎಲ್ಲ ಬೆಳವಣಿಗೆ ನಡೆದ ಸುಮಾರು ಎರಡು ವಾರದ ಬಳಿಕ ಕಾಶ್ಮೀರ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಗೊಳಿಸಿತ್ತು. ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿತ್ತು. ರಾಜತಾಂತ್ರಿಕ ಸಂಬಂಧವನ್ನೂ ಕಡಿದುಕೊಂಡಿತ್ತು.

ಸದ್ಯ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಯಾವುದೇ ವಿಚಾರವೂ ನಮ್ಮ ಮುಂದಿಲ್ಲ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ ಎಂದು ಅಮೆರಿಕದ ಭಾರತೀಯ ರಾಯಭಾರಿ ಹರ್ಷವರ್ಧನ್​ ಶ್ರಿಂಗ್ಲಾ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.