ವಾಷಿಂಗ್ಟನ್: ಸೂಕ್ತ ದಾಖಲೆಗಳಿಲ್ಲದೆ ಅಮೆರಿಕಕ್ಕೆ ಬಂದು ನೆಲೆಸಿದ ಪೋಷಕರ ವಲಸಿಗ ಮಕ್ಕಳಿಗೆ ಕೆಲಸದ ಅನುಮತಿ ಮತ್ತು ಇತರ ರಕ್ಷಣೆ ಒದಗಿಸುವ ವಿಚಾರವನ್ನು ಅಮೆರಿಕದ ಹೊಸ ವಲಸೆ ನೀತಿ ಒಳಗೊಳ್ಳಲಿದೆ. ಈ ಹೊಸ ಕಾನೂನು ಸುಮಾರು 7 ಲಕ್ಷ ವಲಸಿಗರ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ
ಅರ್ಹತೆ ಆಧಾರದಲ್ಲಿ ಕಾನೂನು ಉನ್ನತ ಪದವೀಧರರು ಮತ್ತು ಆಯಾ ವೃತ್ತಿಗಳಿಗೆ ಅರ್ಹತೆ ಇರುವವರಿಗೆ ಸುಲಭವಾಗಿ ವೀಸಾ ದೊರೆಯುವಂತಾಗುತ್ತದೆ. ಇದು ಗ್ರೀನ್ ಕಾರ್ಡ್ ವ್ಯವಸ್ಥೆಯಲ್ಲಿಯೂ ಬದಲಾವಣೆ ತರಲಿದೆ. ಸದ್ಯ ಹೆಚ್ಚಿನ ಗ್ರೀನ್ ಕಾರ್ಡ್ಗಳನ್ನು ಕುಟುಂಬದ ಸಂಬಂಧಿಕರಿಗೆ ನೀಡಲಾಗುತ್ತಿದೆ. ಅರ್ಹತೆ ಆಧಾರದ ನಿಯಮ ಬಂದರೆ ಕೌಶಲ್ಯಾಧಾರಿತವಾಗಿ ಹೆಚ್ಚಿನ ಗ್ರೀನ್ ಕಾರ್ಡ್ ಅಥವಾ ವೀಸಾ ಲಭ್ಯವಾಗಲಿದೆ.
ಶ್ವೇತ ಭವನದ ರೋಸ್ ಗಾರ್ಡನ್‌ನಲ್ಲಿ ಹೇಳಿಕೆ ನೀಡಿದ ಟ್ರಂಪ್ ಶೀಘ್ರದಲ್ಲೇ ಅರ್ಹತೆ ಆಧಾರಿತ ಹೊಸ ವಲಸೆ ನೀತಿಯನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.