ವಾಷಿಂಗ್ಟನ್: ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡು ಮಿಲಿಯನ್ಗಿಂತಲೂ ಹೆಚ್ಚಿರುವ ಭಾರತೀಯ ಅಮೆರಿಕನ್ನರನ್ನು ತಮ್ಮತ್ತ ಸೆಳೆಯಲು ಟ್ರಂಪ್ ಅಭಿಯಾನ ತಂಡವು ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅಹಮದಾಬಾದ್‌ನಲ್ಲಿ ನಡೆಸಿದ ಐತಿಹಾಸಿಕ ಭಾಷಣದ ತುಣುಕಗಳನ್ನು ಬಿಡುಗಡೆ ಮಾಡಿದೆ.
ಈ ವರ್ಷದ ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಅಹಮದಾಬಾದ್‌ನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಟ್ರಂಪ್ ಮತ್ತು ಮೋದಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಟ್ರಂಪ್ ಭಾರತ ಭೇಟಿ ವೇಳೆ, ಪತ್ನಿ ಮೆಲಾನಿಯಾ, ಮಗಳು ಇವಾಂಕಾ, ಸೊಸೆ ಜೇರೆಡ್ ಕುಶ್ನರ್ ಮತ್ತು ಆಡಳಿತದ ಉನ್ನತಾಧಿಕಾರಿಗಳು ಆಗಮಿಸಿದ್ದರು.
ವಿಡಿಯೋ ಬಿಡಗಡೆ ಬಳಿಕ ಟ್ವೀಟ್ ಮಾಡಿರುವ ಟ್ರಂಪ್ ವಿಕ್ಟರಿ ಫೈನಾನ್ಸ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷ ಕಿಂಬರ್ಲಿ ಗಿಲ್ಫಾಯ್ಲ್, "ಅಮೆರಿಕವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಮತ್ತು ನಮ್ಮ ಅಭಿಯಾನವು ಭಾರತೀಯ-ಅಮೆರಿಕನ್ನರಿಂದ ಹೆಚ್ಚಿನ ಬೆಂಬಲವನ್ನು ಪಡೆಯುತ್ತದೆ ಎಂದಿದ್ದಾರೆ.
-
America enjoys a great relationship with India and our campaign enjoys great support from Indian Americans! 👍🏻🇺🇸 pic.twitter.com/bkjh6HODev
— Kimberly Guilfoyle (@kimguilfoyle) August 22, 2020 " class="align-text-top noRightClick twitterSection" data="
">America enjoys a great relationship with India and our campaign enjoys great support from Indian Americans! 👍🏻🇺🇸 pic.twitter.com/bkjh6HODev
— Kimberly Guilfoyle (@kimguilfoyle) August 22, 2020America enjoys a great relationship with India and our campaign enjoys great support from Indian Americans! 👍🏻🇺🇸 pic.twitter.com/bkjh6HODev
— Kimberly Guilfoyle (@kimguilfoyle) August 22, 2020
ಅಭಿಯಾನವನ್ನು ಮುನ್ನಡೆಸುತ್ತಿರುವ ಮತ್ತು ಭಾರತೀಯ-ಅಮೆರಿಕನ್ ಸಮುದಾಯದೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಕೂಡ ಇದನ್ನು ಮರು ಟ್ವೀಟ್ ಮಾಡಿದ್ದಾರೆ. ವಿಡಿಯೋ ಬಿಡುಗಡೆ ಮಾಡಿದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಸುಮಾರು 66 ಸಾವಿರ ಜನ ಟ್ವಿಟ್ಟರ್ನಲ್ಲಿ ವಿಡಿಯೋ ವೀಕ್ಷಿಸಿದ್ದಾರೆ.
'ಇನ್ನೂ ನಾಲ್ಕು ವರ್ಷ' ಎಂಬ ಶೀರ್ಷಿಕೆಯೊಂದಿಗೆ 107 ಸೆಕೆಂಡುಗಳ ವಿಡಿಯೋ ಪ್ರಾರಂಭವಾಗುತ್ತದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ವೇಳೆ ಹೂಸ್ಟನ್ನ ಎನ್ಆರ್ಜಿ ಕ್ರೀಡಾಂಗಣದಲ್ಲಿ ಹೌಡಿ ಮೋದಿ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮೋದಿ-ಟ್ರಂಪ್ ಪರಸ್ಪರ ಹಸ್ತಲಾಘವ ಮಾಡುವ ತುಣುಕು ವಿಡಿಯೋದ ಆರಂಭದಲ್ಲಿ ಇದೆ.