ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೂ ಕಿಯ ಬೆಂಬಲಿಗರಾದ ಸೆನೆಟ್ನ ಅಲ್ಪಸಂಖ್ಯಾತ ಮುಖಂಡ ಮಿಚ್ ಮೆಕ್ಕಾನ್ನೆಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟ್ರಂಪ್ ತಮ್ಮ ರಾಜಕೀಯ ಕ್ರಿಯಾ ಸಮಿತಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮೆಕ್ಕಾನ್ನೆಲ್ ವಿರುದ್ಧ ಹರಿಹಾಯ್ದಿದ್ದಾರೆ. ಮಿಚ್ ಒಬ್ಬ ದುರ್ಬಲ ನಾಯಕ, ರಾಜಕೀಯ ಹ್ಯಾಕರ್ ಎಂದು ಆರೋಪಿಸಿದ್ದಾರೆ.
ಜನವರಿ 6 ರಂದು ಕ್ಯಾಪಿಟಲ್ನಲ್ಲಿ ನಡೆದ ಮಾರಣಾಂತಿಕ ಹಲ್ಲೆಗೆ ಟ್ರಂಪ್ ಕಾರಣ. ಅವರ ಬೆಂಬಲಿಗರನ್ನು ಟ್ರಂಪ್ ಪ್ರಚೋದಿದ್ದಾರೆ ಎಂದು ಮೆಕ್ಕಾನ್ನೆಲ್ ಭಾಷಣ ಮಾಡುವ ಮೂಲಕ ಟ್ರಂಪ್ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದರು. ಇದೀಗ ಮೆಕ್ಕಾನ್ನೆಲ್ ಹೇಳಿಕೆಗಳಿಗೆ ಟ್ರಂಪ್ ಪ್ರತ್ಯುತ್ತರ ನೀಡಿದ್ದಾರೆ.
ಇನ್ನು ಅಮೆರಿಕದ ಕ್ಯಾಪಿಟಲ್ ಹಿಲ್ನಲ್ಲಿನ ಮಾರಣಾಂತಿಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೊಣೆಗಾರನ್ನಾಗಿ ಮಾಡುವ ಡೆಮಾಕ್ರಟಿಕ್ ಪ್ರಯತ್ನಕ್ಕೆ ಬ್ರೇಕ್ ಬಿದ್ದಿದೆ. ಶನಿವಾರ ನಡೆದ ಎರಡನೇ ಬಾರಿಯ ದೋಷರೋಪಣೆ ವಿಚಾರಣೆಯಲ್ಲಿ ಸೆನೆಟ್, ಟ್ರಂಪ್ ಅವರನ್ನು ಖುಲಾಸೆಗೊಳಿಸಿದೆ.