ETV Bharat / international

ಒಬಾಮ ಹೇಲ್ತ್ ಕೇರ್‌ ಪ್ರಶ್ನಿಸಿದ್ದ ಅರ್ಜಿ ಅಮೆರಿಕ ಸುಪ್ರೀಂಕೋರ್ಟ್‌ನಲ್ಲಿ ವಜಾ - ವಾಷಿಂಗ್ಟನ್

ಅಮೆರಿಕದಲ್ಲಿ ಕಡಿಮೆ ಆದಾಯ ಇರುವವರು ಹಾಗೂ ಅತೀ ಕಡಿಮೆ ವೇತನ ಪಡೆಯುತ್ತಿದ್ದವರಿಗೂ ಉತ್ತಮ ಆರೋಗ್ಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ಬರಾಕ್‌ ಒಬಾಮ ಅವರು ಆಡಳಿತದಲ್ಲಿ ಜಾರಿಗೆ ತಂದಿದ್ದ ಆರೋಗ್ಯ ರಕ್ಷಣಾ ಕಾನೂನನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಅಲ್ಲಿನ ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

Supreme Court dismisses challenge to Obama health law
ಒಬಮಾ ಹೇಲ್ತ್ ಕೇರ್‌ ಪ್ರಶ್ನಿಸಿದ್ದ ಅರ್ಜಿ ಯುಎಸ್‌ ಸುಪ್ರೀಂಕೋರ್ಟ್‌ನಲ್ಲಿ ವಜಾ
author img

By

Published : Jun 17, 2021, 9:58 PM IST

ವಾಷಿಂಗ್ಟನ್‌: ಅಮೆರಿಕದ ಲಕ್ಷಾಂತರ ಮಂದಿಗೆ ವಿಮಾ ರಕ್ಷಣೆ ನೀಡುವ ಆರೋಗ್ಯ ರಕ್ಷಣಾ ಕಾನೂನನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ನ್ಯಾಯಮೂರ್ತಿಗಳು 7-2 ಮತಗಳ ಬಳಿಕ ಅರ್ಜಿ ವಜಾ ಮಾಡುವ ನಿರ್ಧಾರಕ್ಕೆ ಬಂದಿದೆ.

ಬರಾಕ್‌ ಒಬಾಮ ಅವರ ಆಡಳಿತದ ಅವಧಿಯಲ್ಲಿ ಆರೋಗ್ಯ ರಕ್ಷಣಾ ಕಾನೂನನ್ನು ಜಾರಿಗೆ ತರಲಾಗಿತ್ತು. ಟೆಕ್ಸಾಸ್, ಇತರ ರಿಪಬ್ಲಿಕನ್ ಆಡಳಿತದ ರಾಜ್ಯಗಳು ಮತ್ತು ಇಬ್ಬರು ವ್ಯಕ್ತಿಗಳು ಫೆಡರಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಅರ್ಜಿಗೆ ಕೋರ್ಟ್‌ ಯಾವುದೇ ಮಾನ್ಯತೆ ನೀಡಿಲ್ಲ.

ಕಾನೂನಿನ ಪ್ರಮುಖ ನಿಬಂಧನೆಗಳೆಂದರೆ, ಮೊದಲೇ ಅಸ್ತಿತ್ವದಲ್ಲಿರುವ ಜನರಿಗೆ ಆರೋಗ್ಯದ ರಕ್ಷಣೆ, ಯಾವುದೇ ವೆಚ್ಚ ಇಲ್ಲದ ಸೇವೆಗಳು ಮತ್ತು ಕಡಿಮೆ ಆದಾಯದ ಜನರು, ಕಡಿಮೆ ವೇತನ ಪಡೆಯುವವರಿಗೆ ವಿಮೆ ನೀಡುವ ಮೆಡಿಕೈಡ್ ಕಾರ್ಯಕ್ರಮದಲ್ಲಿ ಆರೋಗ್ಯ ವಿಮಾ ಯೋಜನೆ ವಿಸ್ತರಿಸಲಾಗಿತ್ತು. ಜನರು ಆರೋಗ್ಯ ವಿಮೆ ಹೊಂದಿದ್ದಾರೆ ಅಥವಾ ವಿಮೆ ಹೊಂದಿಲ್ಲದಿದ್ದರೆ ದಂಡ ಪಾವತಿಸಬೇಕು ಎಂಬುದು ಕಾನೂನಿನಲ್ಲಿದೆ. 2017ರಲ್ಲಿ ದಂಡವನ್ನು ಶೂನ್ಯಕ್ಕೆ ಇಳಿಸಿದಾಗ ಕಾಂಗ್ರೆಸ್ ಆ ನಿಬಂಧನೆ ಅಪ್ರಸ್ತುತಗೊಳಿಸಿತ್ತು.

ದಂಡವನ್ನು ತೆಗೆದುಹಾಕುವಿಕೆಯು ಟೆಕ್ಸಾಸ್ ಮತ್ತು ಇತರ ರಿಪಬ್ಲಿಕನ್ ನೇತೃತ್ವದ ರಾಜ್ಯಗಳು ಮತ್ತು ಟ್ರಂಪ್ ಆಡಳಿತವು ಇಡೀ ಕಾನೂನಿನ ಮೇಲೆ ಆಕ್ರಮಣ ಮಾಡಲು ಬಳಸಿಕೊಂಡಿತು. 2010ರಲ್ಲಿ ಅಂಗೀಕಾರವಾದಾಗ ಕಾನೂನಿಗೆ ಆಧಾರವಿಲ್ಲದ, ಉಳಿದ ಕಾನೂನು ಕೂಡ ಬೀಳಬೇಕು ಎಂದು ಟ್ರಂಪ್‌ ಸರ್ಕಾರ ವಾದಿಸಿತ್ತು. ಬರಾಕ್‌ ಒಬಾಮ ಜನರ ಆರೋಗ್ಯದ ರಕ್ಷಣೆಗಾಗಿ ಒಬಾಮಾ ಕೇರ್ ಜಾರಿಗೆ ತಂದಾಗ ಪ್ರತಿಪಕ್ಷದ ಕೆಲವು ಸದಸ್ಯರು ಇದನ್ನು ವಿರೋಧಿಸಿದ್ದರು. ಜೊತೆಗೆ ಕೋರ್ಟ್‌ ಮೊರೆ ಕೂಡಾ ಹೋಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.