ವಾಷಿಂಗ್ಟನ್: ಅಮೆಜಾನ್ ಇ-ಕಾಮರ್ಸ್ ಸಂಸ್ಥೆಯ ಸಿಇಒ ಸ್ಥಾನದಿಂದ ಜೆಫ್ ಬೆಜೋಸ್ (57) ನಾಳೆ ಕೆಳಗಿಳಿಯಲಿದ್ದಾರೆ. ಈ ಹುದ್ದೆಯಿಂದ ಕೆಳಗಿಳಿದ ನಂತರ ತಮ್ಮ ಆದ್ಯತೆಯನ್ನು ಖಾಸಗಿ ಬಾಹ್ಯಾಕಾಶ ಪರಿಶೋಧನಾ ಸಂಸ್ಥೆ, ಸಾಮಾಜಿಕ ಕೆಲಸಗಳು ಮತ್ತು ಇತರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಅಮೆಜಾನ್ ಸಿಇಒ ಸ್ಥಾನವನ್ನು ಜುಲೈ 5ರಂದು ಆ್ಯಂಡಿ ಜಾಸಿ ಅವರಿಗೆ ಹಸ್ತಾಂತರಿಸಲಿರುವ ಅವರು, ಅಮೆಜಾನ್ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸುಮಾರು 27 ವರ್ಷಗಳ ಹಿಂದೆ ಬೆಜೋಸ್ ಸ್ಥಾಪಿಸಿದ್ದ ಅಮೆಜಾನ್ ಸಂಸ್ಥೆ ತದನಂತರ ಇ-ಕಾಮರ್ಸ್ ಕ್ಷೇತ್ರದಲ್ಲಿ ಬೃಹದಾಕಾರವಾಗಿ ಬೆಳೆದಿದೆ. ಇಂದು ಅಮೆಜಾನ್ ಸಂಸ್ಥೆಯ ಮಾರುಕಟ್ಟೆ ಬೆಲೆ 1.7 ಟ್ರಿಲಿಯನ್ ಡಾಲರ್ಗಿಂತಲೂ ಅಧಿಕವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಅಮೆರಿಕಕ್ಕೆ 245ನೇ ಸ್ವಾತಂತ್ರೋತ್ಸವ ಸಂಭ್ರಮ: ಪ್ರಧಾನಿ ಮೋದಿ ಶುಭಾಶಯ