ETV Bharat / international

ಮಹಾತ್ಮ ಗಾಂಧಿಗೆ ಅಮೆರಿಕ ಅತ್ಯುನ್ನತ ಪುರಸ್ಕಾರ ನೀಡಲು ಸಂಸದನಿಂದ ಮಸೂದೆ ಮಂಡನೆ

author img

By

Published : Aug 14, 2021, 10:45 AM IST

ಜಾರ್ಜ್ ವಾಷಿಂಗ್ಟನ್, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಮದರ್ ತೆರೇಸಾ ಮುಂತಾದವರಿಗೆ ನೀಡಿರುವ ಅಮೆರಿಕನ್ ಕಾಂಗ್ರೆಸ್​ನ ಚಿನ್ನದ ಪದಕವನ್ನು ಮಹಾತ್ಮ ಗಾಂಧಿಗೂ ನೀಡಬೇಕೆಂದು ಮಸೂದೆ ಮಂಡನೆ ಮಾಡಲಾಗಿದೆ.

Resolution reintroduced in US Congress to posthumously award Congressional Gold Medal to Mahatma Gandhi
ಬಾಪೂಜಿ ಮಹಾತ್ಮ ಗಾಂಧಿಗೆ ಅಮೆರಿಕ ಅತ್ಯುನ್ನತ ಪುರಸ್ಕಾರ ನೀಡಲು ಅಲ್ಲಿನ ಸಂಸದನಿಂದ ಮಸೂದೆ ಮಂಡನೆ

ವಾಷಿಂಗ್ಟನ್(ಅಮೆರಿಕ): ದೇಶ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಈ ಬೆನ್ನಲ್ಲೇ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ಅಮೆರಿಕದ ಪ್ರಭಾವಿ ಸಂಸದರೊಬ್ಬರು ಅಲ್ಲಿನ ಪಾರ್ಲಿಮೆಂಟ್​ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಅಮೆರಿಕ ಕಾಂಗ್ರೆಸ್​ನ ಗೋಲ್ಡ್​ ಮೆಡಲ್ (Congressional Gold Medal) ನೀಡಬೇಕೆಂಬ ಮಸೂದೆ ಮಂಡಿಸಿದ್ದಾರೆ.

ಶಾಂತಿ ಮತ್ತು ಅಹಿಂಸೆಗೆ ಮಹಾತ್ಮ ಗಾಂಧಿಯವರು ನೀಡಿರುವ ಕೊಡುಗೆಗಾಗಿ ಕಾಂಗ್ರೆಸ್​ನ ಗೋಲ್ಡ್​ ಮೆಡಲ್ ನೀಡಬೇಕೆಂಬ ಮಸೂದೆಯನ್ನು ಪ್ರಭಾವಿ ಸಂಸದರಾದ ಕ್ಯಾರೊಲಿನ್ ಬಿ. ಮಲೋನಿ ಮರು ಮಂಡನೆ ಮಾಡಿದ್ದಾರೆ.

ಕಾಂಗ್ರೆಸ್ ಚಿನ್ನದ ಪದಕವು ಅಮೆರಿಕದ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿದೆ. ಮಹಾತ್ಮ ಗಾಂಧಿಯವರ ಐತಿಹಾಸಿಕ ಸತ್ಯಾಗ್ರಹ, ಅಹಿಂಸಾತ್ಮಕ ನೀತಿ ಜಗತ್ತಿಗೆ ಸ್ಫೂರ್ತಿ ನೀಡಿದೆ. ನಮ್ಮನ್ನು ಇತರರ ಸೇವೆಗೆ ಮುಡಿಪಾಗಿಡಲು ಅವರ ಆದರ್ಶಗಳು ನಮಗೆ ಶಕ್ತಿ ತುಂಬುತ್ತವೆ ಎಂದು ಕ್ಯಾರೊಲಿನ್ ಬಿ. ಮಲೋನಿ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರು ಜನಾಂಗೀಯ ಸಮಾನತೆಗಾಗಿ, ನೆಲ್ಸನ್ ಮಂಡೇಲಾ ಅವರು ವರ್ಣಭೇದ ನೀತಿಯ ವಿರುದ್ಧವಾಗಿ ಹೋರಾಡಿದ್ದು, ವಿಶ್ವದಾದ್ಯಂತ ನಾಗರಿಕ ಹಕ್ಕುಗಳ ಚಳವಳಿಗಳಿಗೆ ಸ್ಫೂರ್ತಿ ನೀಡಿದೆ ಎಂದೂ ಈ ವೇಳೆ ಮಲೋನಿ ಹೇಳಿದ್ದಾರೆ.

ಈವರೆಗೆ ಜಾರ್ಜ್ ವಾಷಿಂಗ್ಟನ್, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಮದರ್ ತೆರೇಸಾ ಮತ್ತು ರೋಸಾ ಪಾರ್ಕ್ಸ್ ಮುಂತಾದ ಮಹಾನ್ ವ್ಯಕ್ತಿಗಳಿಗೆ ಕಾಂಗ್ರೆಸ್​ನಲ್​ ಗೋಲ್ಡ್ ಮೆಡಲ್ ಅನ್ನು ನೀಡಲಾಗಿದೆ.

ಇದನ್ನೂ ಓದಿ: ಅಬಕಾರಿ ಸುಂಕ ಕಡಿತ : ತಮಿಳುನಾಡಿನಲ್ಲಿ 100 ಗಡಿಯಿಂದ ಕೆಳಗಿಳಿದ ಪೆಟ್ರೋಲ್ ದರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.