ಮಿನ್ನಿಯಾಪೋಲಿಸ್ (ಅಮೆರಿಕ): ಯು.ಎಸ್. ಮಾರ್ಷಲ್ಸ್ ಕಾರ್ಯಪಡೆಯ ಸದಸ್ಯರು ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರು ಮಿನ್ನಿಯಾ ಪೊಲೀಸ್‌ನಲ್ಲಿ ಅಧಿಕಾರಿಗಳೊಂದಿಗೆ ಗಲಾಟೆ ನಡೆಸಿದ್ದಾರೆ.
ವಿನ್ಸ್ಟನ್ ಬೂಗೀ ಸ್ಮಿತ್ ಜೂನಿಯರ್ (32) ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ಈ ಘಟನೆ ಖಂಡಿಸಿ ರಾತ್ರಿಯಿಡೀ ರಸ್ತೆಯ ಮೇಲೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಗಿತ್ತು. ಇದನ್ನು ತಡೆಯಲು ಬಂದ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ನಡುವೆ ಗಲಾಟೆ ನಡೆದಿದೆ. ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.
ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆಯ ಮೇಲೆ ಸ್ಮಿತ್ ಮೇಲೆ ಗುಂಡು ಹಾರಿಸಲಾಗಿದೆ. ಪೊಲೀಸರು ಗುಂಡು ಹಾರಿಸುವ ಮೊದಲು ಆತನೇ ಗುಂಡು ಹಾರಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯು.ಎಸ್. ಮಾರ್ಷಲ್ಸ್ ಫಜಿಟಿವ್ ಟಾಸ್ಕ್ ಫೋರ್ಸ್ ಸದಸ್ಯರು ಸ್ಮಿತ್ ಬಂದೂಕು ಹೊಂದಿದ್ದ ಅಪರಾಧಿಯೆಂದು ಆರೋಪಿಸಿ ವಾರಂಟ್ ಜಾರಿಗೊಳಿಸಿ ಆತನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದರು.
ಗಲಭೆ, ಹಲ್ಲೆ, ಅಗ್ನಿಸ್ಪರ್ಶ ಮತ್ತು ಆಸ್ತಿಪಾಸ್ತಿಗೆ ಹಾನಿ ಸೇರಿದಂತೆ ಹಲವು ದುಷ್ಕೃತ್ಯ ನಡಸಿದ ಆರೋಪದ ಮೇಲೆ ಒಂಬತ್ತು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.