ನ್ಯೂಯಾರ್ಕ್: ಟೈಮ್ ನಿಯತಕಾಲಿಕೆ ಈ ವರ್ಷದ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ರಿಲೀಸ್ ಮಾಡಿದೆ.
ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸೀರಂ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲ ಸ್ಥಾನ ಪಡೆದುಕೊಂಡಿದ್ದಾರೆ.
ತಾಲಿಬಾನ್ ನಾಯಕನಿಗೆ ಪ್ರಭಾವಿಗಳಲ್ಲಿ ಸ್ಥಾನ:
ಇವರಲ್ಲದೆ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಚೀನಾ ಅಧ್ಯಕ್ಷ ಕ್ಸಿ ಜಿಂಗ್ಪಿಂಗ್, ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಗೆ ತಾಲಿಬಾನ್ ರಾಜಕೀಯ, ಮಿಲಿಟರಿ ತಂತ್ರಗಾರ ಹಾಗೂ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಪಟ್ಟಿಯಲ್ಲಿರುವುದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ರೀತಿ ಭಾರತವನ್ನು ಸೋಲಿಸುವೆವು: ಪಾಕ್ ಕ್ರಿಕೆಟಿಗನ ಕನಸು
ಟೈಮ್ ಪ್ರೊಫೈಲ್ನಲ್ಲಿ ಮೋದಿ ಬಗ್ಗೆ ಗುಣಗಾನ ಮಾಡಲಾಗಿದ್ದು, ಭಾರತ ಸ್ವತಂತ್ರರಾಷ್ಟ್ರವಾಗಿ 74 ವರ್ಷಗಳಲ್ಲಿ ಪ್ರಮುಖ ಮೂವರು ನಾಯಕರನ್ನು ಹೊಂದಿದ್ದು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಇದೀಗ ಪ್ರಧಾನಿ ನರೇಂದ್ರ ಮೋದಿ ಮೂರನೇಯವರಾಗಿದ್ದಾರೆ ಎಂದಿದೆ. ಮಮತಾ ಬ್ಯಾನರ್ಜಿ ಕೂಡ ಭಾರತೀಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಟೈಮ್ ತಿಳಿಸಿದೆ.
ಪೂನಾವಾಲ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಿಯತಕಾಲಿಕೆ, ಕೇವಲ 40 ವರ್ಷದ ಉದ್ಯಮಿ ಪೂನಾವಾಲ ಕೋವಿಡ್ ಮಹಾಮಾರಿ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ವ್ಯಾಕ್ಸಿನೇಷನ್ ಅಭಿವೃದ್ಧಿಪಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದಿದೆ.
ಕಳೆದ ವರ್ಷ ರಿಲೀಸ್ ಆಗಿದ್ದ ನಿಯತಕಾಲಿಕೆಯಲ್ಲೂ ನರೇಂದ್ರ ಮೋದಿ, ನಟ ಆಯುಷ್ಮಾನ್ ಖುರಾನಾ ಸೇರಿದಂತೆ ಐವರು ಭಾರತೀಯರಿಗೆ ಸ್ಥಾನ ದೊರೆತಿತ್ತು.