ETV Bharat / international

ಜಗತ್ತಿನ ಅತಿದೊಡ್ಡ ಏರ್‌ಲಿಫ್ಟ್‌: ಇಲ್ಲಿಯವರೆಗೆ ಅಫ್ಘಾನಿಸ್ತಾನದಿಂದ 82 ಸಾವಿರ ಜನರ ಸ್ಥಳಾಂತರ

ಕಳೆದ ಮಂಗಳವಾರದಿಂದ ಬುಧವಾರದವರೆಗಿನ 24 ಗಂಟೆಗಳ ಅವಧಿಯಲ್ಲಿ 90 ಯುಎಸ್ ಮಿಲಿಟರಿ ಮತ್ತು ಒಕ್ಕೂಟದ ವಿಮಾನಗಳಲ್ಲಿ ಸುಮಾರು 19,000 ಜನರ ಸ್ಥಳಾಂತರ ನಡೆದಿದೆ. ಈ ಮೂಲಕ ಆಗಸ್ಟ್ 14 ರಿಂದ ಇಲ್ಲಿಯವರೆಗೆ 82,300ಕ್ಕೂ ಹೆಚ್ಚು ಜನರನ್ನು ಕಾಬೂಲ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

Afghanistan
ಪ್ರಜೆಗಳನ್ನು ಅಫ್ಘನ್​ನಿಂದ ಸ್ಥಳಾಂತರಿಸಿದ ಯುಎಸ್
author img

By

Published : Aug 26, 2021, 8:10 AM IST

ವಾಷಿಂಗ್ಟನ್: ಜಗತ್ತಿನ ಇತಿಹಾಸದಲ್ಲೇ ಅತಿದೊಡ್ಡ ಏರ್​ಲಿಫ್ಟ್​ ಕಳೆದ 24 ಗಂಟೆಯಲ್ಲಿ ಮಾಡಲಾಗಿದೆ. ನಿನ್ನೆ ಒಂದೇ ದಿನ ಉಗ್ರರ ನಾಡಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 19,000 ಜನರನ್ನು ಕಾಬೂಲ್‌ನಿಂದ ಯುಎಸ್​ಗೆ ಕರೆತರಲಾಗಿದೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು 82,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಯುಎಸ್​ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಹೇಳಿದ್ದಾರೆ.

"ಆಗಸ್ಟ್ 14 ರಿಂದ 82,300ಕ್ಕೂ ಹೆಚ್ಚು ಜನರನ್ನು ಕಾಬೂಲ್‌ನಿಂದ ಸುರಕ್ಷಿತವಾಗಿ ಕರೆತರಲಾಗಿದೆ. ಮಂಗಳವಾರದಿಂದ ಬುಧವಾರದವರೆಗಿನ 24 ಗಂಟೆಗಳ ಅವಧಿಯಲ್ಲಿ 90 ಯುಎಸ್ ಮಿಲಿಟರಿ ಮತ್ತು ಒಕ್ಕೂಟದ ವಿಮಾನಗಳಲ್ಲಿ ಸುಮಾರು 19,000 ಜನರನ್ನು ಸ್ಥಳಾಂತರಿಸಲಾಗಿದೆ. ಈ ಪ್ರಮಾಣದ ಮತ್ತು ಸಂಕೀರ್ಣತೆಯ ಕೆಲಸವನ್ನು ಮಾಡಲು ಯುಎಸ್​ನಿಂದ ಮಾತ್ರ ಸಾಧ್ಯ" ಎಂದು ಹೇಳಿದ್ದಾರೆ.

  • The dedication of our partners and Allies to support the evacuation efforts from Afghanistan demonstrates the strength that is at the foundation of our relationships. I am grateful to all those standing up to support the transportation of Americans and at-risk Afghans to safety. pic.twitter.com/CC7byiyKpG

    — Secretary Antony Blinken (@SecBlinken) August 25, 2021 " class="align-text-top noRightClick twitterSection" data=" ">

"ಇತಿಹಾಸದ ಅತಿದೊಡ್ಡ ಏರ್‌ಲಿಫ್ಟ್‌ಗಳಲ್ಲಿ ಇದೂ ಕೂಡಾ ಒಂದು. ಅಷ್ಟೇ ಅಲ್ಲದೆ, ಬೃಹತ್ ಮಿಲಿಟರಿ, ರಾಜತಾಂತ್ರಿಕ, ಭದ್ರತೆ ಮತ್ತು ಮಾನವೀಯ ಕಾರ್ಯವಾಗಿದೆ" ಎಂದರು.

"ಕಳೆದ 24 ಗಂಟೆಗಳಿಂದ ನಾವು ಅಫ್ಘಾನಿಸ್ತಾನದ ವಿವಿಧೆಡೆ ಇರುವ 500ಕ್ಕೂ ಹೆಚ್ಚು ಅಮೆರಿಕನ್ನರ ಜೊತೆ ನೇರ ಸಂಪರ್ಕ ಹೊಂದಿದ್ದೇವೆ. ಅವರಿಗೆ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಹೇಗೆ ಹೋಗುವುದು ಎಂಬುದರ ಕುರಿತು ನಿರ್ದಿಷ್ಟ ಸೂಚನೆಗಳನ್ನು ಒದಗಿಸಿದ್ದೇವೆ" ಎಂದು ಅವರು ಹೇಳಿದರು.

ಬ್ರಿಟನ್​ ಕಾರ್ಯಾಚರಣೆ: ಅಮೆರಿಕದಂತೆ ಬ್ರಿಟನ್​ ದೇಶವೂ ಸಹ ತನ್ನ ಮಿಲಿಟರಿ ಸಹಾಯದಿಂದ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸುತ್ತಿದೆ. ಯುಕೆ ಮಿಲಿಟರಿ ವಿಮಾನಗಳು ಇಲ್ಲಿಯವರೆಗೆ 11,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿವೆ. ಇದರಲ್ಲಿ 7 ಸಾವಿರಕ್ಕಿಂತಲೂ ಹೆಚ್ಚು ಅಫ್ಘನ್​ ಪ್ರಜೆಗಳಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಅಫ್ಘಾನಿಸ್ತಾನದಲ್ಲಿರುವ ಯುಕೆ ಪ್ರಜೆಗಳನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರುವಂತೆ ಎಚ್ಚರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.