ವಾಷಿಂಗ್ಟನ್: ಅಮೆರಿಕ ಸಂಸತ್ತಿನ (ಯುಸ್ ಕಾಂಗ್ರೆಸ್) 249 ಸದಸ್ಯರಲ್ಲಿ 27 ಮಂದಿ ಮಾತ್ರ ಜೋ ಬೈಡನ್ ಅವರು ಅಧ್ಯಕ್ಷೀಯ ಚುನಾವಣೆಯ ವಿಜೇತರೆಂದು ಪರಿಗಣಿಸುತ್ತಾರೆ ಎಂದು ವಾಷಿಂಗ್ಟನ್ ಪೋಸ್ಟ್ ನಡೆಸಿದ ಸಮೀಕ್ಷೆ ತಿಳಿಸಿದೆ.
ರಿಪಬ್ಲಿಕನ್ ಪಕ್ಷದ ಇಬ್ಬರು ಮಾತ್ರ ಡೊನಾಲ್ಡ್ ಟ್ರಂಪ್ ಸೋಲನ್ನು ಒಪ್ಪಿಕೊಂಡಿಲ್ಲ. ಆದರೆ ಸಾಕ್ಷ್ಯಾಧಾರಗಳಿದ್ದರೂ ರಿಪಬ್ಲಿಕನ್ ಪಕ್ಷದ ಉಳಿದ ಸದಸ್ಯರು ಚುನಾವಣೆಯಲ್ಲಿ ಯಾರು ಗೆದ್ದರು ಎಂಬ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಸಂಸತ್ತಿನ 27 ಸದಸ್ಯರು ಮಾತ್ರ ಚುನಾಯಿತ ಅಧ್ಯಕ್ಷ ಜೋ ಬೈಡನ್ ಎಂದು ಒಪ್ಪಿಕೊಂಡಿರುವುದಾಗಿ ಸಮೀಕ್ಷೆ ಬಹಿರಂಗಪಡಿಸಿದೆ.
ಓದಿ: ನಾನು ಖಂಡಿತವಾಗಿಯೂ ಶ್ವೇತ ಭವನ ತೊರೆಯುತ್ತೇನೆ: ಯುಎಸ್ ನಿರ್ಗಮಿತ ಅಧ್ಯಕ್ಷ ಟ್ರಂಪ್
ಚುನಾವಣೆ ನಡೆದ ಒಂದು ತಿಂಗಳ ನಂತರ ಬೈಡನ್ರನ್ನು ಚುನಾವಣೆಯಲ್ಲಿ ಸೋಲಿಸಿರುವುದಾಗಿ ಹಾಲಿ ಅಧ್ಯಕ್ಷ ಟ್ರಂಪ್ ಬುಧವಾರ 46 ನಿಮಿಷಗಳ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಸಮೀಕ್ಷೆ ನಡೆಸಲಾಗಿತ್ತು.
ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ವಿರುದ್ಧ ಸುಮಾರು 1,50,000 ಮತಗಳ ಅಂತರದಿಂದ ಟ್ರಂಪ್ ಸೋತಿದ್ದರು. ರಿಪಬ್ಲಿಕನ್ ಭದ್ರಕೋಟೆಯಲ್ಲೇ ಟ್ರಂಪ್ ಹಿನ್ನಡೆ ಕಂಡಿದ್ದರು. ಆದರೆ, ಫಲಿತಾಂಶ ಬಂದಾಗಿನಿಂದ ಇಂದಿನವರೆಗೂ ಟ್ರಂಪ್ ತಮ್ಮ ಸೋಲನ್ನು-ಬೈಡನ್ ಗೆಲುವನ್ನು ಒಪ್ಪಲು ನಿರಾಕರಿಸುತ್ತಲೇ ಬಂದಿದ್ದಾರೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸುತ್ತಾ ಬಂದಿದ್ದಾರೆ.