ವಾಷಿಂಗ್ಟನ್: ನಾಸಾದ ಮಾರ್ಸ್ 2020 ಪರ್ಸೆವೆರೆನ್ಸ್ ರೋವರ್ ಮಿಷನ್ 470.8 ಮಿಲಿಯನ್ ಕಿಲೋ ಮೀಟರ್ ಪೂರ್ಣಗೊಳಿಸಲು ಕೆಲವೇ ದಿನಗಳು ಬಾಕಿಯಿವೆ. ಇದೇ ಫೆಬ್ರವರಿ 18 ರಂದು ರೋವರ್ ಮಂಗಳ ಗ್ರಹಕ್ಕೆ ಇಳಿಯಲಿದೆ. ಕಳೆದ ವರ್ಷ ಜುಲೈ 30 ರಂದು ಪ್ರಾರಂಭವಾದ ರೋವರ್, ಪ್ರತಿ ಸೆಕೆಂಡ್ಗೆ ಎರಡೂವರೆ ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿದೆ ಎಂದು ನಾಸಾ ಹೇಳಿದೆ.
ಮಂಗಳ ಗ್ರಹದ ಮೇಲ್ಭಾಗದಲ್ಲಿ ಸೂರ್ಯನ ಮೇಲ್ಮೈಗೆ ಸಮನಾದ ತಾಪಮಾವಿದೆ. ಹಾಗಾಗಿ ರೋವರ್ ಲ್ಯಾಂಡ್ ಆಗಲು ಕನಿಷ್ಠ ಏಳು ನಿಮಿಷಗಳನ್ನು ತೆಗೆದುಕೊಳ್ಳಲಿದೆ. ಈ ರೋವರ್, ಅಲ್ಲಿನ ವಾತಾವರಣದ ಬಗ್ಗೆ ಮಾಹಿತಿ, ಮಾದರಿಗಳನ್ನು ಸಂಗ್ರಹಿಸಿ, ಅಂತಿಮವಾಗಿ ಭೂಮಿಗೆ ಮರಳುತ್ತದೆ. 1965 ರ ಜುಲೈನಲ್ಲಿ ಮ್ಯಾರಿನರ್ 4 ಫ್ಲೈ ಬೈ ಪ್ರದರ್ಶಿಸಿದ ಅಂದಿನಿಂದ ನಾಸಾ ಮಂಗಳ ಗ್ರಹದಲ್ಲಿ ಅನ್ವೇಷಿಸುತ್ತಿದೆ ಎಂದು ನಾಸಾದ ಸೈನ್ಸ್ ಮಿಷನ್ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಥಾಮಸ್ ಜುರ್ಬುಚೆನ್ ಹೇಳಿದ್ದಾರೆ.
ಪ್ರಾಚೀನ ಸೂಕ್ಷ್ಮಜೀವಿಯ ಕುರುಹು ಪತ್ತೆ ಹಚ್ಚಲು ಜೆಜೆರೊ ಕ್ರೇಟರ್ ಸೂಕ್ತ ಸ್ಥಳವೆಂದು ನಂಬಲಾಗಿದೆ. ಜೆಜೆರೊದಿಂದ ಪರ್ಸೆವೆರೆನ್ಸ್ ಸ್ಯಾಂಪಲ್ ಕ್ಯಾಶಿಂಗ್ ಸಿಸ್ಟಮ್ ಸಂಗ್ರಹಿಸುವ ರಾಕ್ ಅಂಡ್ ರೆಗೋಲಿತ್ (ಮುರಿದ ಬಂಡೆ ಮತ್ತು ಧೂಳು), ಭೂಮಿಯಾಚೆಗೆ ಮನುಷ್ಯರ ಜೀವನದ ಅಸ್ತಿತ್ವದ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡುತ್ತದೆ.