ವಾಷಿಂಗ್ಟನ್: ಹೊಸ ವೈರ್‌ಲೆಸ್ 5ಜಿ ಸೇವೆಯು ವಾಯುಯಾನ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಯುಎಸ್ ಕಾರ್ಗೋ ಮತ್ತು ಪ್ಯಾಸೆಂಜರ್ ಏರ್‌ಕ್ರಾಫ್ಟ್ ಆಪರೇಟರ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (ಸಿಇಒಗಳು) ಎಚ್ಚರಿಸಿದ್ದಾರೆ.
ಈ ಪ್ರಮುಖ ಅಮೆರಿಕ ಏರ್‌ಲೈನ್ಸ್ ಕಂಪನಿಗಳ ಪ್ರಕಾರ, ಹೊಸ ಸೇವೆಯು ಹೆಚ್ಚಿನ ಸಂಖ್ಯೆಯ ವೈಡ್ ಬಾಡಿ ಪ್ಲೇನ್‌ಗಳನ್ನು ನಿಷ್ಪ್ರಯೋಜಕವಾಗಿಸಬಹುದು ಎಂದು ಹೇಳುತ್ತಿವೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ಇದು ಅಲ್ಟಿಮೀಟರ್‌ಗಳು ಮತ್ತು ಕಡಿಮೆ ಗೋಚರತೆಯ ಕಾರ್ಯಾಚರಣೆಗಳಂತಹ ಸೂಕ್ಷ್ಮ ವಿಮಾನ ಉಪಕರಣಗಳ ಮೇಲೂ ಪರಿಣಾಮ ಬೀರಬಹುದು. ಅಂತಹ ಸ್ಥಿತಿಯಲ್ಲಿ ವಿಮಾನವನ್ನು ನಿರ್ವಹಿಸುವುದು ಅಪಾಯಕಾರಿ ಎಂದು ಎಚ್ಚರಿಸುತ್ತಿದೆ.
ಓದಿ: 12 ಸಾವಿರಕ್ಕೂ ಹೆಚ್ಚು ಮಂದಿಗೆ ಲಿಬಿಯಾದಲ್ಲಿ ಅಕ್ರಮ ಬಂಧನ: ವಿಶ್ವಸಂಸ್ಥೆ ಕಳವಳ
ಸಮಸ್ಯೆ ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ: ಅಮೆರಿಕನ್ ಕಂಪನಿ AT&T ಮತ್ತು ವೆರಿಝೋನ್ ಕಳೆದ ವರ್ಷ ಹರಾಜಿನಲ್ಲಿ $80 ಬಿಲಿಯನ್ ಬೆಟ್ಟಿಂಗ್ ಮಾಡುವ ಮೂಲಕ C-ಬ್ಯಾಂಡ್ ಸ್ಪೆಕ್ಟ್ರಮ್ ಬಿಡ್ ಅನ್ನು ಪಡೆದವು. ಈಗ ಅವರು 5G ನೆಟ್‌ವರ್ಕ್‌ಗಾಗಿ ಟವರ್‌ಗಳನ್ನು ಸ್ಥಾಪಿಸಬೇಕಾಗಿದೆ. ರನ್‌ವೇ ಸುತ್ತಲೂ 5ಜಿ ನೆಟ್‌ವರ್ಕ್‌ನ ಪರಿಣಾಮ ಕಂಡುಬಂದರೆ, ತಾಂತ್ರಿಕವಾಗಿ ದೊಡ್ಡ ವಿಮಾನಗಳಿಗೆ ತೊಂದರೆಯಾಗಲಿದೆ. ಹೀಗಾಗಿ ವಿಮಾನ ನಿಲ್ದಾಣದ ರನ್‌ವೇಯ ಸುಮಾರು 2 ಮೈಲಿಗಳಿಂದ (3.2 ಕಿ.ಮೀ) 5G ಟವರ್‌ಗಳನ್ನು ಮುಕ್ತಗೊಳಿಸಬೇಕು ಎಂದು ಪ್ರಮುಖ ವಿಮಾನಯಾನ ಕಂಪನಿಗಳು ಹೇಳುತ್ತವೆ.
ನವೆಂಬರ್ ಆರಂಭದಲ್ಲಿ FAA ವಿಮಾನಗಳ ಮೇಲೆ 5G ಸಂಭಾವ್ಯ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿತು. ಇದರ ನಂತರ, ಅಧ್ಯಕ್ಷ ಜೋ ಬೈಡನ್ ಆಡಳಿತದ ಹಸ್ತಕ್ಷೇಪದ ನಂತರ C-ಬ್ಯಾಂಡ್ ಸ್ಪೆಕ್ಟ್ರಮ್ ಬಳಕೆಯನ್ನು ಜನವರಿ 5ರ ವರೆಗೆ ಮುಂದೂಡಲಾಯಿತು. ಬಳಿಕ ಅದನ್ನು ಜನವರಿ 19ರ ವರೆಗೆ ವಿಸ್ತರಿಸಲಾಯಿತು. 50 ವಿಮಾನ ನಿಲ್ದಾಣಗಳಿಗೆ ತಾತ್ಕಾಲಿಕ ಬಫರ್ ವಲಯಗಳನ್ನು ರಚಿಸಲು ಸಹ ಒಪ್ಪಿಗೆ ನೀಡಲಾಗಿದೆ. ಈಗ ಒಪ್ಪಂದದ ಪ್ರಕಾರ, AT&T ಮತ್ತು ವೆರಿಝೋನ್ ಬುಧವಾರದಿಂದ ಸೇವೆಯನ್ನು ಪ್ರಾರಂಭಿಸಲಿವೆ. ಆದ್ದರಿಂದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತೆ ತಾಂತ್ರಿಕ ತೊಂದರೆಗಳು ಮತ್ತು ಸಂಭಾವ್ಯ ಅಪಾಯಗಳ ಬಗ್ಗೆ ಪುನರುಚ್ಚರಿಸಿದೆ.
ಅಮೆರಿಕನ್ ಏರ್‌ಲೈನ್ಸ್, ಡೆಲ್ಟಾ ಏರ್ ಲೈನ್ಸ್, ಯುನೈಟೆಡ್ ಏರ್‌ಲೈನ್ಸ್‌ನ ಸಿಇಒಗಳು ಅಪಾಯದ ಕಾರಣದಿಂದಾಗಿ 1,100 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಬಹುದು. ಇದು ಲಕ್ಷಾಂತರ ಪ್ರಯಾಣಿಕರ ಮೇಲೆ ಪರಿಣಾಮ ಬೀರಬಹುದು. ಅವರು ಟಿಕೆಟ್‌ಗಳನ್ನು ರದ್ದುಗೊಳಿಸಲು ಒತ್ತಾಯಿಸಲಾಗುತ್ತದೆ ಎಂದು ವಿಮಾನ ಕಂಪನಿಗಳು ಎಚ್ಚರಿಸುತ್ತಿವೆ.