ETV Bharat / international

ಅರ್ಜೆಂಟೀನಾ, ಚಿಲಿಯಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ - 6.4 ರ ತೀವ್ರತೆಯ ಭೂಕಂಪ

ಅರ್ಜೆಂಟೀನಾ ಮತ್ತು ಚಿಲಿ ರಾಷ್ಟ್ರಗಳ ಗಡಿಭಾಗದಲ್ಲಿ 6.4 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಾವು-ನೋವು, ಆಸ್ತಿ-ಪಾಸ್ತಿ ಹಾನಿ ಬಗ್ಗೆ ಇನ್ನೂ ವರದಿಯಾಗಿಲ್ಲ.

Magnitude 6.4 quake shakes parts of Argentina and Chile
ಭೂಕಂಪ
author img

By

Published : Jan 19, 2021, 11:30 AM IST

Updated : Jan 19, 2021, 11:42 AM IST

ಸ್ಯಾಂಟಿಯಾಗೊ (ಚಿಲಿ): ಅರ್ಜೆಂಟೀನಾ ಮತ್ತು ಚಿಲಿ ರಾಷ್ಟ್ರಗಳ ಗಡಿಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಎರಡೂ ದೇಶಗಳ ಜನರನ್ನು ಬೆಚ್ಚಿಬೀಳಿಸಿದೆ.

ಸೋಮವಾರ ತಡರಾತ್ರಿ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 6.4 ರಷ್ಟು ತೀವ್ರತೆ ದಾಖಲಾಗಿದೆ. ಪೋರ್ಸಿಟೊ ನಗರದಿಂದ ನೈರುತ್ಯಕ್ಕೆ 27.6 ಕಿ.ಮೀ ದೂರದಲ್ಲಿ ಹಾಗೂ 14 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಸಾವು-ನೋವು, ಆಸ್ತಿ-ಪಾಸ್ತಿ ಹಾನಿ ಬಗ್ಗೆ ಯಾವುದೇ ಪ್ರಾಥಮಿಕ ವರದಿಗಳು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಇಂಡೋನೇಷ್ಯಾ ಭೂಕಂಪ - ಪ್ರವಾಹ: ಮೃತರ ಸಂಖ್ಯೆ 96ಕ್ಕೆ ಏರಿಕೆ, 70 ಸಾವಿರ ಮಂದಿ ಸ್ಥಳಾಂತರ

ಕಳೆದ ವಾರವಷ್ಟೇ ಇಂಡೋನೇಷ್ಯಾದ ಸುಲವೇಸಿ ಪ್ರಾಂತ್ಯದಲ್ಲಿ ಸಂಭವಿಸಿದ 6.2 ತೀವ್ರತೆಯ ಭೂಕಂಪದಿಂದಾಗಿ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ನಾಪತ್ತೆಯಾದವರಿಗಾಗಿ ಇನ್ನೂ ಶೋಧ ಕಾರ್ಯ ನಡೆಯುತ್ತಲೇ ಇದೆ.

Last Updated : Jan 19, 2021, 11:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.