ETV Bharat / international

1 ಗಂಟೆ 25 ನಿಮಿಷಗಳ ಕಾಲ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್​​ - ಅಮೆರಿಕ ನ್ಯೂಸ್

ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Kamala Harris
ಕಮಲಾ ಹ್ಯಾರಿಸ್​​
author img

By

Published : Nov 20, 2021, 1:19 PM IST

ವಾಷಿಂಗ್ಟನ್​​: ಅಮೆರಿಕದ ಉಪಾಧ್ಯಕ್ಷೆ ಆಗಿರುವ ಕಮಲಾ ಹ್ಯಾರಿಸ್(Kamala Harris)​​​ 1 ಗಂಟೆ 25 ನಿಮಿಷಗಳ ಕಾಲ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಇತಿಹಾಸ ಬರೆದಿದ್ದಾರೆ. ಈ ವಿಷಯವನ್ನು ಶ್ವೇತ ಭವನ ತಿಳಿಸಿದೆ.

57 ವರ್ಷದ ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ವತಃ ಅಮೆರಿಕದ ಅಧ್ಯಕ್ಷ ಜೋ ಬೈಡನ್ ( President Joe Biden)​​ ಅವರು ಅಧಿಕಾರ ಹಸ್ತಾಂತರಿಸಿದ್ದರು. ಅಧ್ಯಕ್ಷ ಜೋ ಬೈಡನ್​ ಅವರಿಗೆ ಅರವಳಿಕೆ ಔಷಧಿ ನೀಡಿದ್ದ ಹಿನ್ನೆಲೆ ತಾತ್ಕಾಲಿಕವಾಗಿ ಅಧಿಕಾರ ಹಸ್ತಾಂತರವಾಗಿತ್ತು.

ಏತಕ್ಕಾಗಿ ಈ ನಿರ್ಧಾರ?:

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರ ವಾರ್ಷಿಕ ಆರೋಗ್ಯ ತಪಾಸಣೆ ಹಿನ್ನೆಲೆ, ಅಧಿಕಾರ ಹಸ್ತಾಂತರಿಸಿ ಆರೋಗ್ಯ ತಪಾಸಣೆಗೆ ತೆರಳಿದ್ದರು. ಹೀಗಾಗಿ ಅವರು ಆರೋಗ್ಯ ತಪಾಸಣೆ ವೇಳೆಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಕಮಲಾ ಹ್ಯಾರಿಸ್​ ಅಧಿಕಾರ ಚಲಾಯಿಸುವ ಅವಕಾಶ ಪಡೆದಿದ್ದರು.

ಇದನ್ನೂ ಓದಿ: ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್​​ ಆಗ್ತಿದ್ದ ಮೋಸ್ಟ್​ ವಾಂಟೆಡ್​ ಮಾಜಿ ಅಧಿಕಾರಿ ಶೂಟೌಟ್​​​ನಲ್ಲಿ ಮಟಾಷ್​

2002 ಮತ್ತು 2007ರಲ್ಲಿ ಅಧ್ಯಕ್ಷ ಜಾರ್ಜ್​ ಡಬ್ಲ್ಯೂ ಬುಶ್​ ಕೂಡ ಆರೋಗ್ಯ ತಪಾಸಣೆ ಹಿನ್ನೆಲೆ ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದ್ದರು. ಇದೀಗ ಬೋ ಬೈಡನ್​ ಕೂಡ 1 ಗಂಟೆ 25 ನಿಮಿಷ ಕಾಲ ಆಡಳಿತ ನಡೆಸಲು ಕಮಲಾ ಹ್ಯಾರಿಸ್​​ಗೆ ಅಧಿಕಾರ ಹಸ್ತಾಂತರಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.