ETV Bharat / international

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಸಮೀಕ್ಷೆಯಲ್ಲಿ ಟ್ರಂಪ್ ವಿರುದ್ಧ ಬಿಡೆನ್​ಗೆ ಮೇಲುಗೈ

ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತಂತೆ ಹೊರಬಿದ್ದಿರುವ ಸಮೀಕ್ಷೆ ಪ್ರಕಾರ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಬಿಡೆನ್ ಅವರು ಹಾಲಿ ಅಧ್ಯಕ್ಷ ಡೋನಾಲ್ಡ್​​ ಟ್ರಂಪ್​ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

author img

By

Published : Aug 30, 2020, 7:10 AM IST

Joe Biden's lead over Trump narrows after Republican National Convention: poll
ಅಮೆರಿಕ ಚುನಾವಣೆ

ವಾಷಿಂಗ್ಟನ್: ಈ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಭಾರಿ ಕುತೂಹಲ ಮೂಡಿಸಿದೆ. ಚುನಾವಣೆ ಪೂರ್ವ ಸಮೀಕ್ಷೆಯೊಂದು ಹಾಲಿ ಅಧ್ಯಕ್ಷ ಟ್ರಂಪ್​ಗೆ ಶಾಕ್​ ನೀಡಿದೆ.

ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತಂತೆ ಸಮೀಕ್ಷೆಯೊಂದು ಹೊರಬಿದ್ದಿದ್ದು, ಹಾಲಿ ಅಧ್ಯಕ್ಷ ಡೋನಾಲ್ಡ್​​ ಟ್ರಂಪ್​ ವಿರುದ್ಧ ಜೋ ಬಿಡೆನ್​ ಮೇಲುಗೈ ಸಾಧಿಸಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮುನ್ನ, ಇದೇ ವಾರದಲ್ಲಿ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ನಡೆದಿತ್ತು. ಈಗ ದಿ ಹಿಲ್ ವರದಿ ಮಾಡಿದ ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ, ಬಿಡೆನ್​ಗೆ ಶೇ. 50ಷ್ಟು ಮತ ಬೆಂಬಲವಿದ್ದರೆ, ಟ್ರಂಪ್​ಗೆ ಶೇ.44ರಷ್ಟು ಮತಗಳು ಸಿಗಲಿವೆ. ಇನ್ನುಳಿದ ಶೇ. 7ರಷ್ಟು ಮತಗಳು ಯಾರ ಪಾಲಾಗಲಿವೆ ಎಂಬುದು ತಿಳಿದಿಲ್ಲ. 4,035 ಮತದಾರರನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗಿದೆ.

ಇದಕ್ಕೂ ಮುನ್ನ ರಿಪಬ್ಲಿಕನ್ ಸಮಾವೇಶ ಆರಂಭದ ಹಿಂದಿನ ದಿನ ಆ. 23ರಂದು ನಡೆದ ಸಮೀಕ್ಷೆಯಲ್ಲಿ ಬಿಡೆನ್ ಹಾಗೂ ಟ್ರಂಪ್​ ನಡುವಿನ ಮತಗಳ ಶೇ. ಅಂತರ 52-42 ಆಗಿತ್ತು. ಅದಕ್ಕೆ ಹೋಲಿಸಿದರೆ ಬಿಡೆನ್​ರ ಮತಗಳ ಗಳಿಕೆಯಲ್ಲಿ ಶೇ.2ರಷ್ಟು ಪ್ರಮಾಣದ ಇಳಿಕೆಯಾಗಿದೆ.

ಯುಎಸ್ ಅಧ್ಯಕ್ಷೀಯ ಚುನಾವಣೆಯು ಈ ವರ್ಷ ನವೆಂಬರ್ 3ರಂದು ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.