ETV Bharat / international

ಭಾರತಕ್ಕೆ ವೈದ್ಯಕೀಯ ಉಪಕರಣ ಪೂರೈಕೆ: ಸಿಬ್ಬಂದಿ ಶ್ರಮಕ್ಕೆ ಅಮೆರಿಕ​ ಮೆಚ್ಚುಗೆ - ಯುಎಸ್​ ಸಂಬಂಧಿತ ಸುದ್ದಿ

ಭಾರತಕ್ಕೆ ಯುಎಸ್​ನಿಂದ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡುವಾಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಪ್ರಯತ್ನಕ್ಕೆ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

US
ಸಿಬ್ಬಂದಿ ಶ್ರಮಕ್ಕೆ ಯುಎಸ್​ ಮೆಚ್ಚುಗೆ
author img

By

Published : May 6, 2021, 7:49 AM IST

ವಾಷಿಂಗ್ಟನ್: ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ವೈದ್ಯಕೀಯ ಉಪಕರಣಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ಅಮೆರಿಕ ಕಳುಹಿಸಿಕೊಡುತ್ತಿದೆ. ಈವರೆಗೆ ಅಮೆರಿಕದ ನಾಲ್ಕು ಮಿಲಿಟರಿ ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಈ ವೇಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಪ್ರಯತ್ನಕ್ಕೆ ಯುಎಸ್​ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಇಲ್ಲಿಯವರೆಗೆ ನಾವು 4 ಮಿಲಿಟರಿ ವಿಮಾನಗಳನ್ನು ಭಾರತಕ್ಕೆ ಕಳುಹಿಸಿದ್ದೇವೆ. ಇದರಲ್ಲಿ 1ಎಂ ರಾಪಿಡ್ ಡಯಾಗ್ನೋಸ್ಟಿಕ್ ಟೆಸ್ಟ್, 545 ಆಕ್ಸಿಜನ್ ಸಾಂದ್ರಕಗಳು, 1,600,300 ಎನ್ 95 ಮಾಸ್ಕ್, 457 ಆಕ್ಸಿಜನ್ ಸಿಲಿಂಡರ್, 440 ರೆಗ್ಯುಲೇಟರ್, 220 ಪಲ್ಸ್ ಆಕ್ಸಿಮೀಟರ್ ಮತ್ತು 1 ಡಿಪ್ಲಾಯಬಲ್ ಆಕ್ಸ್ ಹೊಂದಿದೆ. ಇದನ್ನು ಸಾಗಾಟ ಮಾಡಲು ನಮ್ಮ ಸಿಬ್ಬಂದಿ ಶ್ರಮಪಟ್ಟಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

  • So far, we've sent 4 gray tails to India, containing 1m Rapid Diagnostic Tests, 545 Oxygen Concentrators, 1,600,300 N95 masks, 457 Oxygen cylinders, 440 regulators, 220 pulse oximeters and 1 Deployable Ox. Concentration System. It's been a heroic effort from all involved. pic.twitter.com/RJuxJ0KOOf

    — Secretary of Defense Lloyd J. Austin III (@SecDef) May 5, 2021 " class="align-text-top noRightClick twitterSection" data=" ">

"ಯುಎಸ್ ಜೊತೆ ಸಹಕಾರ ಮುಂದುವರೆದಿದೆ. ಯುಎಸ್ಎಯಿಂದ ಮತ್ತೊಂದು ವಿಮಾನವು 1000 ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್​, ರೆಗ್ಯುಲೇಟರ್​ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತು ಭಾರತಕ್ಕೆ ಆಗಮಿಸುತ್ತಿದೆ. ಇದು 2 ದಿನಗಳ ಅವಧಿಯಲ್ಲಿ ಆಮ್ಲಜನಕದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾವು ಯುಎಸ್ ಬೆಂಬಲ ನೀಡಿದಕ್ಕಾಗಿ ಕೃತಜ್ಞರಾಗಿರಬೇಕು" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.