ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ದೂರವಾಣಿ ಕರೆ ಮಾಡಿ ಸಂವಹನ ನಡೆಸಿದ ನಂತರ ಟ್ರಂಪ್ ಒಪ್ಪಂದವೊಂದನ್ನು ಪ್ರಕಟಿಸಿದ್ದಾರೆ. ಈ ಮೂವರು ನಾಯಕರು ಸಂಕ್ಷಿಪ್ತವಾಗಿ ಆರು ಪ್ಯಾರಾಗ್ರಾಫ್ನ ಜಂಟಿ ಹೇಳಿಕೆಯನ್ನು ನೀಡಿ, ಒಪ್ಪಂದವನ್ನು ದೃಢಪಡಿಸಿದ್ದಾರೆ.
ಬಹ್ರೇನ್ ಇಸ್ರೇಲ್ನೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸುವುದಾಗಿ ಅಧ್ಯಕ್ಷ ಟ್ರಂಪ್ ಪ್ರಕಟಿಸಿದ್ದಾರೆ. ಟ್ರಂಪ್ ಟ್ವಿಟರ್ನಲ್ಲಿ ಈ ಬಗ್ಗೆ ಬಹ್ರೇನ್ ಮತ್ತು ಇಸ್ರೇಲ್ ಜೊತೆ ಜಂಟಿ ಅಧೀಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಕ್ರಮವನ್ನು "ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಶಾಂತಿಗಾಗಿ ಐತಿಹಾಸಿಕ ಪ್ರಗತಿ" ಎಂದು ಈ ಒಪ್ಪಂದವನ್ನು ಕರೆದಿದ್ದಾರೆ.
ಈ ಒಪ್ಪಂದಕ್ಕೆ ಟ್ರಂಪ್ ಅಳಿಯ ಜೇರೆಡ್ ಕುಶ್ನರ್ ತಮ್ಮದೇ ಆದ ಸೇವೆ ಸಲ್ಲಿದ್ದಾರೆ. ಹಾಗೆಯೇ ಈ ಒಬ್ಬಂದ ಸೆಪ್ಟೆಂಬರ್ 11, 2001 ರ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ನಡೆದಿದ್ದು, ಹುತಾತ್ಮರಾದ ಅಮೆರಿಕನ್ನರನ್ನು ಗೌರವಿಸುತ್ತದೆ ಎಂದಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗಲೇ ಟ್ರಂಪ್‌ಗೆ ರಾಜತಾಂತ್ರಿಕ ಗೆಲುವು ಸಿಕ್ಕಿದಂತಾಗಿದೆ. ಕೊಸೊವೊ ಇಸ್ರೇಲ್ ಅನ್ನು ಗುರುತಿಸಲು ಮತ್ತು ಸೆರ್ಬಿಯಾ ತನ್ನ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೆಮ್‌ಗೆ ಸ್ಥಳಾಂತರಿಸಲು ಕಳೆದ ವಾರವಷ್ಟೇ ಟ್ರಂಪ್ ತಾತ್ವಿಕವಾಗಿ ಒಪ್ಪಂದಗಳನ್ನು ಘೋಷಿಸಿದ್ದರು.
ಈ ಒಪ್ಪಂದ 'ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಶಾಂತಿಗಾಗಿ ಐತಿಹಾಸಿಕ ಪ್ರಗತಿ' ಎಂದು ಟ್ರಂಪ್, ನೆತನ್ಯಾಹು ಮತ್ತು ರಾಜ ಹಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಎರಡು ಕ್ರಿಯಾತ್ಮಕ ಸಮಾಜಗಳು ಮತ್ತು ಮುಂದುವರಿದ ಆರ್ಥಿಕತೆಗಳ ನಡುವೆ ನೇರ ಸಂವಾದ ಮತ್ತು ಸಂಬಂಧಗಳನ್ನು ಮುಕ್ತ ಮಾಡುವುದರಿಂದ ಮಧ್ಯಪ್ರಾಚ್ಯದ ಸಕಾರಾತ್ಮಕ ರೂಪಾಂತರವು ಮುಂದುವರಿಯುತ್ತದೆ ಮತ್ತು ಆ ಪ್ರದೇಶದಲ್ಲಿ ಸ್ಥಿರತೆ, ಸುರಕ್ಷತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಭಲವಾಗಿ ನಂಬಲಾಗಿದೆ. ಯುಎಇ ಒಪ್ಪಂದದಂತೆ, ಬಹ್ರೇನ್-ಇಸ್ರೇಲ್ ಒಪ್ಪಂದವು ಉಭಯ ದೇಶಗಳ ನಡುವಿನ ರಾಜತಾಂತ್ರಿಕ, ವಾಣಿಜ್ಯ, ಭದ್ರತೆ ಮತ್ತು ಇತರ ಸಂಬಂಧಗಳನ್ನು ಸಾಮಾನ್ಯಗೊಳಿಸುತ್ತದೆ.