ETV Bharat / international

ಜಗತ್ತನ್ನೇ ಅಂಗೈನಲ್ಲಿ ತೋರಿಸಿದ ಗೂಗಲ್​ಗೂ ಕಾಡುತ್ತಿದೆ ಕೊರೊನಾ ಭೀತಿ - ಕರೊನಾ ವೈರಸ್​​ ಸೋಂಕಿನ ಹಿನ್ನೆಲೆ

ಕರೊನಾ ವೈರಸ್​​ ಸೋಂಕಿನ ಹಿನ್ನೆಲೆ, ವಿಶ್ವದೆಲ್ಲೆಡೆ ಹಲವಾರು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗೂಗಲ್​ ಸಂಸ್ಥೆ ಸಹ ಸೋಂಕು ತಡೆಗಟ್ಟುವ ನಿಟ್ಟನಲ್ಲಿ ಗೂಗಲ್​​ ಪ್ರಧಾನ ಕಚೇರಿಗೆ ಹೊರಗಿನವರಿಗೆ ಪ್ರವೇಶ ನಿರ್ಬಂಧಿಸಿದೆ.

Google restricts visits to curb coronavirus
ಕೊರೊನಾಗೆ ಬೆಚ್ಚಿದ ಗೂಗಲ್
author img

By

Published : Mar 10, 2020, 12:47 PM IST

ಸ್ಯಾನ್​​ ಫ್ರಾನ್ಸಿಸ್ಕೋ: ಜಗತ್ತನ್ನ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್​​, ಇದೀಗ ಗೂಗಲ್​​ ಕಚೇರಿಗೂ ಇದರ ಬಿಸಿ ತಟ್ಟಿದ್ದು, ಸಿಬ್ಬಂದಿ ಹೊರತುಪಡಿಸಿ ಬೇರಾರಿಗೂ ಕಚೇರಿಯೊಳಗೆ ಬಾರದಂತೆ ನಿರ್ಬಂಧ ಹೇರಲಾಗಿದೆ.

ನ್ಯೂ ಯಾರ್ಕ್​ನ ಸಿಲಿಕಾನ್​ ವ್ಯಾಲಿ ಪ್ರದೇಶದಲ್ಲಿರುವ ಗೂಗಲ್​ ಕೇಂದ್ರ ಕಚೇರಿಯಿಂದ ಈ ಆದೇಶ ಹೊರಡಿಸಲಾಗಿದ್ದು, ಕೊರೊನಾ ವೈರಸ್​ ಸೋಂಕು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಪಂಚವನ್ನೇ ನಡುಗಿಸಿದ ಕೊರೊನಾ ವೈರಸ್​ ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗೂಗಲ್​ ಸಂಸ್ಥೆ ಸಹ ಈ ಸೋಂಕಿನ ತಡೆಗೆ ಯತ್ನಿಸುತ್ತಿದ್ದು, ಕಂಪನಿಯ ನೌಕರರಿಗೆ ಮನೆಯಲ್ಲೇ ಕುಳಿತು(ವರ್ಕ್​ ಫ್ರಮ್​ ಹೋಮ್​​) ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದೆ.

ಗೂಗಲ್​ ಕಂಪನಿಯು ಈಗಾಗಲೇ ನಿಗದಿಪಡಿಸಿದ ಸಂದರ್ಶನಗಳನ್ನು ರದ್ದುಗಳಿಸಿದ್ದು, ಕಂಪನಿಯೇತರರಾಗಿ ಗೂಗಲ್​ ಕೇಂದ್ರ ಕಚೇರಿಗೆ ಭೇಟಿ ನೀಡುವ ಡೆಲಿಗೇಟ್ಸ್​ಗಳಿಗೂ ನಿರ್ಬಂಧ ಹೇರಿದೆ. ಅದಲ್ಲದೇ ಏಪ್ರಿಲ್​ ನಲ್ಲಿ ಆಯೋಜನೆಗೊಂಡಿದ್ದ ಟಿಇಡಿ ಕಾನ್ಫರೆನ್ಸ್​ಗೂ ಸಹ ಗೂಗಲ್​ ಬ್ರೇಕ್​ ಹಾಕಿದೆ.

ಗೂಗಲ್ ಸೇರಿದಂತೆ ಫೇಸ್​ಬುಕ್​​, ಆ್ಯಪಲ್​​, ಅಮೆಜಾನ್​​, ಮೈಕ್ರೋಸಾಫ್ಟ್​​, ಟ್ವಿಟರ್​ ಕಂಪನಿಗಳು ಸಹ ಕೊರೊನಾ ಸೋಂಕು ತಗಡೆಗಟ್ಟುವ ಸಲುವಾಗಿ ತನ್ನ ನೌಕರರಿಗೆ ವರ್ಕ್​ ಫ್ರಮ್​ ಹೋಮ್​​ ಮಾಡುವಂತೆ ನಿರ್ದೇಶನ ನೀಡಿದೆ.

ಪ್ರತಿ ವರ್ಷ ನಡೆಯುತ್ತಿದ್ದ ಗೂಗಲ್​ ಐ/ಒ, ಎಫ್​​-8 ಹಾಗೂ ಜಾಗತಿಕ ಕಾನ್ಫರೆನ್ಸ್​​ಗಳನ್ನು ಈ ಬಾರಿ ಗೂಗಲ್​ ನಡೆಸದಂತೆ ತೀರ್ಮಾನಿಸಿದ್ದು, ಟೆಕ್ಸಾಸ್​​ ಮತ್ತು ಆಸ್ಟಿನ್​​ನಲ್ಲಿ ನಡೆಯಬೇಕಿದ್ದ ಸೌತ್​ವೆಸ್ಟ್​​ ಕಲ್ಚರಲ್​ ಕಾನ್ಫರೆನ್ಸ್ ಸಹ ಕೊರೊನಾ ವೈರಸ್​​ ಸೋಂಕಿನ ಭೀತಿಯಿಂದಾಗಿ ಗೂಗಲ್​​ ಸ್ಥಗಿತಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.