ವಾಷಿಂಗ್ಟನ್: ಕೊರೊನಾ ಮುಂದೆ ಜಗತ್ತೇ ಮಂಡಿಯೂರಿದೆ. ಜಾಗತಿಕ ಅಂಕಿ-ಅಂಶಗಳು ದಿನದಿಂದ ದಿನಕ್ಕೆ ಶಾಕ್ ನೀಡುತ್ತಿದ್ದು, ಸೋಂಕಿತರ ಸಂಖ್ಯೆಯ ಏರಿಕೆಯ ಜೊತೆಗೆ ಸಾವನ್ನಪ್ಪಿದವರ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಜಗತ್ತಿನಾದ್ಯಂತ ಈವರೆಗೆ ಒಟ್ಟು 10,16, 370ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈವರೆಗೆ 53,162 ಜನ ಸಾವನ್ನಪ್ಪಿದ್ದಾರೆ. ಇನ್ನು 2,11,649 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಭಾರಿ ಮುಂದಿದ್ದು, 2,45,000ಕ್ಕೂ ಹೆಚ್ಚು ಜನರಿಗೆ ಸೋಂಕು ಇರುವುದು ದೃಢವಾಗಿದೆ. ಅಲ್ಲದೆ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ 6000 ದಾಟಿದೆ.
ಇಟಲಿ ಹಾಗೂ ಸ್ಪೇನ್ನಲ್ಲೂ ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದು, ಇಟಲಿಯಲ್ಲಿ 1,15,000ಕ್ಕೂ ಹೆಚ್ಚು ಹಾಗೂ ಸ್ಪೇನ್ನಲ್ಲಿ 1,12,000ಕ್ಕೂ ಹೆಚ್ಚು ಜನ ಸೋಂಕಿಗೊಳಗಾಗಿದ್ದಾರೆ.
ಇನ್ನೊಂದೆಡೆ ಇಟಲಿಯಲ್ಲಿ ಸಾವಿನ ಸಂಖ್ಯೆ 13 ಸಾವಿರ ದಾಟಿದ್ದು, ಸ್ಪೇನ್ನಲ್ಲೂ 10 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಮೆರಿಕಾದಲ್ಲಿ 6000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.