ETV Bharat / international

ಕೊರೊನಾ ತಂದಿಟ್ಟ ಆತಂಕ... ಆರ್ಥಿಕ ಬಿಕ್ಕಟ್ಟಿನಿಂದ ವಿಶ್ವದಲ್ಲಿ ತಲ್ಲಣವೆಂದ ಮೂಡೀಸ್ - Moody's

ಪ್ರಪಂಚದಾದ್ಯಂತ ಕೋವಿಡ್​-19 ತಂದಿಟ್ಟ ಆತಂಕದಿಂದಾಗಿ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾರಿ ಬಿಕ್ಕಟ್ಟು ಸೃಷ್ಟಿಸಿದೆ. ಆರ್ಥಿಕತೆಯ ಹೊಡೆತ ಬೀಳುತ್ತಿದೆ ಎಂದು ಮೂಡೀಸ್ ಇನ್ವೆಸ್ಟರ್ ಸರ್ವಿಸ್ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ.

Moody's
ಮೂಡೀಸ್
author img

By

Published : Mar 23, 2020, 4:20 PM IST

ನ್ಯೂಯಾರ್ಕ್(ಅಮೆರಿಕಾ): ಕಳೆದ ಎರಡು ವಾರಗಳಲ್ಲಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅತಿ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನಿಂದ ಬಂದ್​ ಆಗುತ್ತಿರುವ ಮಾರುಕಟ್ಟೆಗಳು ಹಾಗೂ ಸಾಮಾಜಿಕ ಸಂಪರ್ಕಗಳ ಮೇಲಿನ ನಿರ್ಬಂಧದ ಕಾರಣದಿಂದ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಭಾರಿ ಹೊಡೆತ ಬೀಳುತ್ತಿದೆ ಎಂದು ಹಣಕಾಸು ವಿಶ್ಲೇಷಣಾ ಸಂಸ್ಥೆ ಮೂಡೀಸ್ ಇನ್ವೆಸ್ಟರ್ ಸರ್ವಿಸ್ ತಿಳಿಸಿದೆ.

ಎರಡನೇ ತ್ರೈಮಾಸಿಕದಲ್ಲಿ ವಿಶ್ವ ಆರ್ಥಿಕ ವ್ಯವಸ್ಥೆ ಗಣನೀಯವಾಗಿ ಕುಸಿತ ಕಂಡಿದೆ. ಎಷ್ಟು ಸಮಯದಲ್ಲಿ ಕೊರೊನಾ ಬಿಕ್ಕಟ್ಟಿಗೆ ತೆರೆ ಬೀಳಲಿದೆ ಹಾಗೂ ಅದರಿಂದ ಉಂಟಾಗುವ ಹಣಕಾಸು ನಷ್ಟದಿಂದ ಕುಟುಂಬಗಳು ಹಾಗೂ ಉದ್ಯಮಗಳು ಹೇಗೆ ಮೇಲೇಳಲಿವೆ ಎಂಬುದನ್ನಾಧರಿಸಿ ಮುಂದಿನ ಕೆಲ ತಿಂಗಳುಗಳವರೆಗೆ ಆರ್ಥಿಕತೆ ಜರ್ಜರಿತವಾಗಲಿದೆ ಎಂದು ಮೂಡೀಸ್​ ಅಂದಾಜಿಸಿದೆ.

ಕಳೆದ ಬಾರಿಯ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿನ ಪರಿಸ್ಥಿತಿ ಮರುಕಳಿಸಿದ್ದು, ಉದ್ಯಮ ವಲಯದಲ್ಲಿನ ಆತಂಕದಿಂದ ಷೇರು ಮಾರುಕಟ್ಟೆಗಳು ವಿಪರೀತ ಏರಿಳಿತ ಕಾಣುತ್ತಿವೆ. ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 30 ಡಾಲರ್​ನಲ್ಲಿ ಬಹುಕಾಲ ಸ್ಥಿರವಾಗಿದ್ದರೆ, ತೈಲ ಉತ್ಪಾದನಾ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ಮತ್ತಷ್ಟು ಕುಸಿಯಲಿದೆ ಎಂದು ಮೂಡೀಸ್ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.