ETV Bharat / international

ಫೈಝರ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಅಮೆರಿಕದ ಎಫ್​ಡಿಎ - ಎಫ್​ಡಿಎನ ಲಸಿಕೆ ಸಲಹಾ ಸಮಿತಿ

ಫೈಝರ್ ಹಾಗೂ ಬಯೋಎನ್​ಟೆಕ್‌ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಎಫ್​ಡಿಎ ಅನುಮತಿ ನೀಡಿದೆ. 16 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮಾತ್ರ ತುರ್ತು ಪರಿಸ್ಥಿತಿಯಿದ್ದಲ್ಲಿ ಲಸಿಕೆ ಬಳಸುವಂತೆ ಸಲಹೆ ನೀಡಿದೆ.

Pfizer vaccine
ಫೈಝರ್ ಲಸಿಕೆ
author img

By

Published : Dec 11, 2020, 12:40 PM IST

ವಾಷಿಂಗ್ಟನ್: 'ಫೈಝರ್' ಕೋವಿಡ್​-19 ಲಸಿಕೆಯ ತುರ್ತು ಬಳಕೆಗೆ ಅಮೆರಿಕದ ಎಫ್​ಡಿಎ (ಫುಡ್​ &​ ಡ್ರಗ್​ ಅಡ್ಮಿನಿಸ್ಟ್ರೇಷನ್​) ಅನುಮೋದನೆ ನೀಡಿದೆ.

ಫೈಝರ್ ಹಾಗೂ ಬಯೋಎನ್​ಟೆಕ್‌ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ತುರ್ತು ಬಳಕೆ ಕುರಿತು ಎಫ್​ಡಿಎನ ಲಸಿಕೆ ಸಲಹಾ ಸಮಿತಿಯು ಸಭೆ ನಡೆಸಿತ್ತು. ಸಭೆಯಲ್ಲಿ 17 ಮಂದಿ ತುರ್ತು ಬಳಕೆ ಪರವಾಗಿ ಮತಚಲಾಯಿಸಿದರೆ, ನಾಲ್ವರು ಇದರ ವಿರುದ್ಧವಾಗಿ ವೋಟ್​ ಮಾಡಿದ್ದಾರೆ. ಒಬ್ಬರು ಮಾತ್ರ ಗೈರಾಗಿದ್ದರು.

ತುರ್ತು ಬಳಕೆ ಪರ ಬಹುಮತವಿದ್ದ ಕಾರಣ ಫೈಝರ್​​ ಮನವಿಗೆ ಎಫ್​ಡಿಎ ಅಸ್ತು ಎಂದಿದೆ. 16 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮಾತ್ರ ತುರ್ತು ಪರಿಸ್ಥಿತಿಯಿದ್ದಲ್ಲಿ ಲಸಿಕೆ ಬಳಸುವಂತೆ ಸಮಿತಿಯು ಸಲಹೆ ನೀಡಿದೆ.

ಓದಿ: ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ಪಡೆದ ದೇಶದ ಮೊದಲ ಆರ್‌ಎನ್‌ಎ ಕೋವಿಡ್ ಲಸಿಕೆ

ಈಗಾಗಲೇ ಇಂಗ್ಲೆಂಡ್​, ಕೆನಡಾ, ಬಹ್ರೇನ್ ಮತ್ತು ಸೌದಿ ಅರೇಬಿಯಾದಲ್ಲಿ ಫೈಝರ್ ಲಸಿಕೆ ಬಳಕೆಗೆ ಅನುಮತಿ ದೊರೆತಿದೆ. ಅಮೆರಿಕದಲ್ಲಿ ಬುಧವಾರ ಒಂದೇ ದಿನದಲ್ಲಿ 3,000ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಬಲಿಯಾಗಿದ್ದರು. ಹೀಗಾಗಿ ಅಮೆರಿಕದಲ್ಲಿ ಲಸಿಕೆಯ ತುರ್ತು ಬಳಕೆ ಅನಿವಾರ್ಯವಾಗಿವೆ. ದೇಶದ ಜನಸಂಖ್ಯೆಯ ಶೇ.70 ರಷ್ಟು ಮಂದಿಗೆ ಲಸಿಕೆ ಹಾಕಿಸುವ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.