ETV Bharat / international

ಕ್ಯಾಪಿಟಲ್ ದುರಂತ: 70ಕ್ಕೂ ಹೆಚ್ಚು  ಜನರ ಮೇಲೆ ಎಫ್​​ಬಿಐ ಜಾರ್ಜ್​ಶೀಟ್​

author img

By

Published : Jan 13, 2021, 11:32 AM IST

ಕ್ಯಾಪಿಟಲ್ ದುರಂತ ಘಟನೆ ನಡೆದ ಕೆಲವು ದಿನಗಳ ನಂತರ ನಾವು 170 ಕ್ಕೂ ಹೆಚ್ಚು ಜನರ ಮೇಲೆ ಕೇಸ್​ ದಾಖಲಾಗಿದೆ. ಅಂದರೆ ಈ ವ್ಯಕ್ತಿಗಳನ್ನು ಕ್ಯಾಪಿಟಲ್ ಮೈದಾನದ ಒಳಗೆ ಮತ್ತು ಹೊರಗೆ ಅಪರಾಧದ ಮೇಲೆ ಅಪರಾಧ ಮಾಡಿದ ವ್ಯಕ್ತಿಗಳಾಗಿ ಗುರುತಿಸಲಾಗಿದೆ ಎಂದು ಎಫ್​​​ಬಿಐ ತಿಳಿಸಿದೆ.

FBI opens over 170 cases after Capitol violence, over 70 charged
ಕ್ಯಾಪಿಟಲ್ ದುರಂತ: 170 ಕ್ಕೂ ಹೆಚ್ಚು ಪ್ರಕರಣಗಳ ಫೈಲ್​ಗಳನ್ನು ತೆರೆದ ಎಫ್​​ಬಿಐ

ವಾಷಿಂಗ್ಟನ್ (ಯುಎಸ್): ಜ. 6 ರಂದು ಯುಎಸ್ ಕ್ಯಾಪಿಟಲ್​​ನಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್​​ಬಿಐ) 70ಕ್ಕೂ ಹೆಚ್ಚು ಜನರ ಮೇಲೆ ಆರೋಪ ಹೊರಿಸಿದೆ ಮತ್ತು 170 ಕ್ಕೂ ಹೆಚ್ಚು ಜನರ ಮೇಲೆ ಕೇಸ್​ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೈಕೆಲ್ ಶೆರ್ವಿನ್, ಕ್ಯಾಪಿಟಲ್ ದುರಂತ ಘಟನೆ ನಡೆದ ಕೆಲವು ದಿನಗಳ ನಂತರ ನಾವು 170 ಕ್ಕೂ ಹೆಚ್ಚು ಅಪರಾಧ ಫೈಲ್‌ಗಳನ್ನು ತೆರೆದಿದ್ದೇವೆ. ಅಂದರೆ, ಈ ವ್ಯಕ್ತಿಗಳನ್ನು ಕ್ಯಾಪಿಟಲ್ ಮೈದಾನದ ಒಳಗೆ ಮತ್ತು ಹೊರಗೆ ಅಪರಾಧದ ಮೇಲೆ ಅಪರಾಧ ಮಾಡಿದ ವ್ಯಕ್ತಿಗಳಾಗಿ ಗುರುತಿಸಲಾಗಿದೆ ಎಂದರು.

ಹಿನ್ನೆಲೆ:

ಕಳೆದ ವಾರ ಕ್ಯಾಪಿಟಲ್ ದುರಂತಕ್ಕೆ ಸಾಕ್ಷಿಯಾಯಿತು. ಅಲ್ಲಿ ಹಲವಾರು ರೀತಿಯ ಹಿಂಸಾತ್ಮಕ ಚಟುವಟಿಕೆಗಳು ನಡೆದವು. ಟ್ರಂಪ್ ಅವರ ಬೆಂಬಲಿಗರು ಎಲೆಕ್ಟರೋಲ್​ ಕಾಲೇಜಿನ ಮತಗಳ ವಿರುದ್ಧ ಆಕ್ರೋಶಗೊಂಡು ಅಲ್ಲಿಗೆ ಬೀಗ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಟ್ರಂಪ್​ ಬೆಂಬಲಿಗರು ಮುಖಾಮುಖಿಯಾಗಬೇಕಾಯಿತು.

ಈ ಸುದ್ದಿಯನ್ನೂ ಓದಿ: ಕ್ಯಾಪಿಟಲ್ ಗಲಭೆ: ತಮ್ಮ ಭಾಷಣ ಸಮರ್ಥಿಸಿಕೊಂಡ ಟ್ರಂಪ್​

ನವೆಂಬರ್​ನಲ್ಲಿ ನಡೆದ ಮತದಾನದಲ್ಲಿ ಬೈಡನ್​ ಅವರ ವಿಜಯವನ್ನು ಕಾಂಗ್ರೆಸ್ ಪ್ರಮಾಣೀಕರಿಸುತ್ತಿದ್ದರಿಂದ ಚುನಾವಣಾ ಫಲಿತಾಂಶಗಳ ವಿರುದ್ಧ ಹೋರಾಡಲು ಟ್ರಂಪ್ ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ್ದರು. ಈ ಕಾರಣಕ್ಕಾಗಿಯೇ ಕ್ಯಾಪಿಟಲ್​ನಲ್ಲಿ ಹಿಂದೆಂದೂ ಆಗದ ಘಟನೆಗಳು ಜರುಗಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.