ಸ್ಯಾನ್ ಫ್ರಾನ್ಸಿಸ್ಕೋ : ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸುವುದಾಗಿ ಫೇಸ್‌ಬುಕ್ ಸಂಸ್ಥೆ ತಿಳಿಸಿದೆ.
ಪ್ರಮುಖ ಮಾಧ್ಯಮಗಳು ಅಮೆರಿಕ ಎಲೆಕ್ಷನ್ನ ವಿಜೇತರು ಯಾರೆಂದು ಸ್ಪಷ್ಟಪಡಿಸಿದ ಬಳಿಕ ಫೇಸ್‌ಬುಕ್ ಘೋಷಿಸಲಿದೆ. ಮತದಾನ ಮಾಹಿತಿ ಕೇಂದ್ರದ ಲಿಂಕ್ ನೀಡಲಿದ್ದು, ಇದನ್ನು ಬಳಸಿ ಅಧ್ಯಕ್ಷೀಯ ಅಭ್ಯರ್ಥಿಗಳ ಮಾಹಿತಿ ಪಡೆಯಬಹುದಾಗಿದೆ.
ಇನ್ನೂ ಕೆಲ ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸಲು ನಾವು ಬಯಸಿದ್ದೇವೆ.
ಮಾಧ್ಯಮಗಳು ವಿಜೇತರ ಕುರಿತು ದೃಢಪಡಿಸಿದ ಬಳಿಕ ನಾವು ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ನೋಟಿಫಿಕೇಶನ್ ನೀಡಲಿದ್ದೇವೆ ಎಂದು ಫೇಸ್‌ಬುಕ್ ಟ್ವೀಟ್ ಮಾಡಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕರಿತು ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಗಟ್ಟಲು ಫೇಸ್‌ಬುಕ್ ಈ ಕ್ರಮವನ್ನು ತೆಗೆದುಕೊಂಡಿದೆ.