ETV Bharat / international

'ಲಸಿಕೆಯೊಂದೇ ಭಾರತದಲ್ಲಿನ ಕೋವಿಡ್ ಬಿಕ್ಕಟ್ಟಿಗೆ ದೀರ್ಘಕಾಲೀನ ಪರಿಹಾರ'

ಆಮ್ಲಜನಕವಿಲ್ಲದೇ ಜನರು ಸಾಯುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಭಾರತದಲ್ಲಿ ಪ್ರಸ್ತುತ ಕೋವಿಡ್​ -19 ಬಿಕ್ಕಟ್ಟಿಗೆ ಜನರಿಗೆ ಲಸಿಕೆ ನೀಡುವುದೇ ದೀರ್ಘಕಾಲೀನ ಪರಿಹಾರವಾಗಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್​ ಅವರ ಮುಖ್ಯ ವೈದ್ಯಕೀಯ ಸಲಹೆಗಾರರು ಹೇಳಿದ್ದಾರೆ.

Fauci
ಡಾ. ಆಂಥೋನಿ ಫೌಸಿ
author img

By

Published : May 10, 2021, 2:05 PM IST

ವಾಷಿಂಗ್ಟನ್: ಭಾರತದಲ್ಲಿ ಪ್ರಸ್ತುತ ಕೋವಿಡ್​ -19 ಬಿಕ್ಕಟ್ಟು ಎದುರಿಸಲು ಜನರಿಗೆ ಲಸಿಕೆ ನೀಡುವುದೇ ಏಕೈಕ ದೀರ್ಘಕಾಲೀನ ಪರಿಹಾರವಾಗಿದೆ ಎಂದು ಅಮೆರಿಕದ ಹಿರಿಯ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಆಂಥೋನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡನ್​ ಅವರ ಮುಖ್ಯ ವೈದ್ಯಕೀಯ ಸಲಹೆಗಾರರೂ ಆಗಿರುವ ಆಂಥೋನಿ ಫೌಸಿ, ಭಾರತವು ಲಸಿಕೆ ಉತ್ಪಾದಿಸುವ ವಿಶ್ವದ ಅತಿದೊಡ್ಡ ದೇಶವಾಗಿದೆ. ಲಸಿಕೆ ಉತ್ಪಾದನೆ ಹೆಚ್ಚಿಸಲು ದೇಶೀಯವಾಗಿ ಮಾತ್ರವಲ್ಲದೇ ಜಾಗತಿಕವಾಗಿಯೂ ಸಂಪನ್ಮೂಲಗಳನ್ನು ಪಡೆಯಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 3.66 ಲಕ್ಷ ಕೋವಿಡ್​ ಕೇಸ್​, 3,754 ಸಾವು ವರದಿ

ಕಳೆದ ವರ್ಷ ಚೀನಾ ಮಾಡಿದಂತೆ ಭಾರತವು ತಾತ್ಕಾಲಿಕ ಕ್ಷೇತ್ರ ಆಸ್ಪತ್ರೆಗಳನ್ನು ತಕ್ಷಣ ನಿರ್ಮಿಸುವ ಅಗತ್ಯವಿದೆ. ಲಸಿಕೆ ನೀಡುವುದರೊಂದಿಗೆ ದೇಶಾದ್ಯಂತ ಲಾಕ್​​ಡೌನ್ ಮಾಡುವ ಅಗತ್ಯವನ್ನು ಫೌಸಿ ಒತ್ತಿ ಹೇಳಿದ್ದಾರೆ.

ಆಮ್ಲಜನಕವಿಲ್ಲದೇ ಜನರು ಸಾಯುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಆಸ್ಪತ್ರೆಗಳಲ್ಲಿ ಬೆಡ್​ ಇಲ್ಲವೆಂದು ರೋಗಿಗಳನ್ನು ರಸ್ತೆಯಲ್ಲಿ ನಿಲ್ಲಿಸಲು ಆಗುವುದಿಲ್ಲ. ಅಷ್ಟಕ್ಕೂ ಅಲ್ಲಿ ಏನು ನಡೆಯುತ್ತಿದೆ ಎಂದು ಆಂಥೋನಿ ಫೌಸಿ ಭಾರತದ ಕೋವಿಡ್​ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.