ವಿಲ್ಮಿಂಗ್ಟನ್: ಕೋವಿಡ್ ಡೆಲ್ಟಾ ರೂಪಾಂತರ ಹೆಚ್ಚಳದಿಂದಾಗಿ ಅಮೆರಿಕ ಅನಗತ್ಯ ಸಂಕಟಕ್ಕೆ ಸಿಲುಕಿದೆ ಎಂದು ರಾಷ್ಟ್ರದ ಉನ್ನತ ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನಾವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಲಸಿಕೆ ಪಡೆದವರೂ ಇನ್ಮುಂದೆ ಮಾಸ್ಕ್ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಡಾ.ಆಂಥೋನಿ ಫೌಸಿ ಹೇಳಿದ್ದಾರೆ. ಅಲ್ಲದೇ, ವ್ಯಾಕ್ಸಿನ್ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದಕ್ಕೆ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಸೂಚಿಸಬಹುದು ಎಂದು ಫೌಸಿ ತಿಳಿಸಿದ್ದಾರೆ.
ಅಧ್ಯಕ್ಷ ಜೋ ಬೈಡನ್ ಅವರ ಮುಖ್ಯ ವೈದ್ಯಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಫೌಸಿ, ಈವರೆಗೆ ಮಾಸ್ಕ್ ವಿಚಾರವಾಗಿದ್ದ ಮಾರ್ಗಸೂಚಿಗಳನ್ನು ಬದಲಾಯಿಸಬೇಕಿದೆ ಎಂದಿದ್ದಾರೆ. ಈ ಹಿಂದೆ ಅಮೆರಿಕದಲ್ಲಿ ವ್ಯಾಕ್ಸಿನ್ ಪಡೆದವರು ಮಾಸ್ಕ್ ಧರಿಸುವಂತಿಲ್ಲ ಎಂಬ ಆದೇಶವಿತ್ತು.
ಇದನ್ನೂ ಓದಿ: COVID ಹೆಚ್ಚಳ: ಇಲ್ಲಿ ಒಳಾಂಗಣಗಳಲ್ಲೂ ಮಾಸ್ಕ್ ಧರಿಸುವಿಕೆ ಕಡ್ಡಾಯ!
ಲಾಸ್ ಏಂಜಲೀಸ್ ಕೌಂಟಿಯಲ್ಲಿ ನಿರಂತರವಾಗಿ ಕೋವಿಡ್ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ, ಅಲ್ಲಿನ ಸ್ಥಳೀಯ ಆಡಳಿತ ಜನರು ಒಳಾಂಗಣದಲ್ಲೂ ಮಾಸ್ಕ್ ಧರಿಸಬೇಕಿದೆ ಎಂಬ ಆದೇಶ ಹೊರಡಿಸಿದೆ. ಅಮೆರಿಕದಲ್ಲಿ ಈವರೆಗೆ ಶೇಕಡಾ 49 ರಷ್ಟು ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಅನ್ನು ಅರ್ಹರೆಲ್ಲರಿಗೂ ನೀಡಲಾಗುವುದು ಎಂದು ಫೌಸಿ ಹೇಳಿದ್ದಾರೆ.
ಲಸಿಕೆ ಪಡೆದ ಬಹುತೇಕ ನಾಯಕರು ಜನರಿಗೆ ವ್ಯಾಕ್ಸಿನ್ ಪಡೆಯಲು ಕರೆ ನೀಡಿದ್ದಾರೆ. ಹಾಗಾಗಿ ಜನತೆ ಹುಮ್ಮಸ್ಸಿನಿಂದ ಬಂದು ಲಸಿಕೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.