ರಿಯೋ ಡಿ ಜನೈರೊ(ಬ್ರೆಜಿಲ್): ಮನೆಯ ಛಾವಣಿ ಮೇಲೆ 'ನಾಯಿಯ ತಲೆ' ನೋಡಿರುವ ಮನೆ ಮಾಲೀಕರೊಬ್ಬರು ದಿಢೀರ್ ಶಾಕ್ ಆದ್ರು. ಆದರೆ, ಸ್ವಲ್ಪ ಸಮಯದ ನಂತರ ಅದೇನು ಅನ್ನೋದು ಅವರ ಅರಿವಿಗೆ ಬಂತು.
ಬ್ರೆಜಿಲ್ನ ರಿಯೋ ಡಿ ಜನೈರೊದಲ್ಲಿ ಇಂಥದ್ದೊಂದು ಇಂಟರೆಸ್ಟಿಂಗ್ ಘಟನೆ ನಡೆಯಿತು. ಕ್ಯಾಮರಾಮ್ಯಾನ್ ಒಬ್ಬ ಸೆರೆಹಿಡಿದ ಫೋಟೋ ಅರೆ, ಇದೆಂಥಾ ಇಲ್ಯೂಶನ್? ಅನ್ನಿಸುವಂತಿತ್ತು.
ಛಾವಣಿ ಮೇಲೆ ಮಲಗಿದ್ದ ಪ್ರಾಣಿ ನಾಯಿಯಲ್ಲ, ಬದಲಿಗೆ ಅಲ್ಲಿದ್ದಿದ್ದು ಬೆಕ್ಕಿನ ಮರಿ. ಇದು ನೋಡಲು ಥೇಟ್ ನಾಯಿಯ ತಲೆಯಂತೆ ಕಂಡಿದೆ. ಇದನ್ನು ನೋಡಿರುವ ಮನೆ ಮಾಲೀಕ ಕಕ್ಕಾಬಿಕ್ಕಿಯಾಗಿದ್ದರು.
ಇದನ್ನೂ ಓದಿ: ₹530 ಕೋಟಿ ವೆಚ್ಚದ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಕ್ಯಾಂಪನ್ ಉದ್ಘಾಟಿಸಿದ ಮೋದಿ
ತಕ್ಷಣ ಈ ಫೋಟೋ ನೋಡುವ ಎಲ್ಲರಿಗೂ ಇಲ್ಲಿರುವುದು ನಾಯಿಯ ತಲೆಯಂತೆ ಭಾಸವಾಗುತ್ತದೆ. ಆದರೆ, ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಅದು ಬೆಕ್ಕಿನ ಮರಿ ಎಂಬುದು ತಿಳಿಯುತ್ತದೆ. ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬೆಕ್ಕು ತನ್ನ ಬಾಲದ ಎರಡು ಬದಿಯಲ್ಲಿ ಕಪ್ಪು ಮಚ್ಚೆ ಹೊಂದಿರುವ ಕಾರಣಕ್ಕೆ ನೋಡುಗರಿಗೆ ನಾಯಿಯ ತಲೆ ಎಂದು ಅನ್ನಿಸುತ್ತದೆ.