ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಸೇವೆ ವಾಟ್ಸ್ಆ್ಯಪ್ ಬುಧವಾರ ವಿಶ್ವದಾದ್ಯಂತ ಎರಡು ಶತಕೋಟಿಗೂ ಹೆಚ್ಚು ಬಳಕೆದಾರರನ್ನು ತನ್ನದಾಗಿಸಿಕೊಂಡಿದೆ.
2014 ರಲ್ಲಿ ಫೇಸ್‌ಬುಕ್ ಸ್ವಾಧೀನಪಡಿಸಿಕೊಂಡಿರುವ ವಾಟ್ಸ್ಆ್ಯಪ್ , ಫೇಸ್‌ಬುಕ್ ಕುಟುಂಬದ ಅಪ್ಲಿಕೇಶನ್‌ಗಳಲ್ಲಿ ಹೆಚ್ಚು ಬಳಕೆಯಾಗುವ ಸೇವೆಗಳಲ್ಲಿ ಒಂದಾಗಿದೆ. ವಾಟ್ಸ್ಆ್ಯಪ್ ನಲ್ಲಿ ಕರೆ ಮತ್ತು ವೀಡಿಯೊ ಕರೆಗಳ ಜೊತೆಗೆ ಉಚಿತ ಮೆಸೇಜ್ ಸಹ ಮಾಡಬಹುದು. ಒಂದು ಕಾಲದಲ್ಲಿ ಮುಖಾಮುಖಿಯಾಗಿ ಮಾತ್ರ ಸಾಧ್ಯವಿರುವ ಖಾಸಗಿ ಸಂಭಾಷಣೆಗಳು ಈಗ ಎಷ್ಟೇ ದೂರವಿದ್ದರೂ ತ್ವರಿತ ಚಾಟ್‌ಗಳು ಮತ್ತು ವೀಡಿಯೊ ಕರೆಗಳ ಮಾಡಬಹುದಾಗಿದೆ ಎಂದು ವಾಟ್ಸ್ಆ್ಯಪ್ ಬ್ಲಾಗ್ ಪೋಸ್ಟ್ ಹೇಳಿದೆ.
ವಾಟ್ಸ್ಆ್ಯಪ್ ಬಳಕೆದಾರರ ಭದ್ರತೆಗೆ ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.