ETV Bharat / international

ಕೋವಿಶೀಲ್ಡ್ ಡೋಸ್​​ ಪಡೆಯುವ ಅಂತರ ಹೆಚ್ಚಿಸಿದ್ದು ಒಳ್ಳೆಯ ನಿರ್ಧಾರ: ಫೌಸಿ

author img

By

Published : May 14, 2021, 11:45 AM IST

ಲಸಿಕೆಗಳ ಕೊರತೆಯಿರುವಾಗ ಡೋಸ್​ಗಳನ್ನು ಪಡೆಯುವ ಅಂತರ ಹೆಚ್ಚಿಸುವುದು ಪ್ರಯೋಜನಕಾರಿಯಾಗಿದೆ ಎಂದು ಅಮೆರಿಕದ ಹಿರಿಯ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಆಂಥೋನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ.

ವಾಷಿಂಗ್ಟನ್: ಭಾರತದಲ್ಲಿನ ಕೋವಿಡ್​ ಬಿಕ್ಕಟ್ಟನ್ನು ಕೊನೆಗೊಳಿಸಲು ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚಿಸುವುದು ಹಾಗೂ ಕೋವಿಶೀಲ್ಡ್​ ಲಸಿಕೆಯ 2ನೇ ಡೋಸ್ ಪಡೆಯುವ ಅಂತರವನ್ನು ವಿಸ್ತರಿಸುವುದು ಸಮಂಜಸವಾದ ವಿಧಾನ ಎಂದು ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

"ನೀವು ಭಾರತದಲ್ಲಿ ತೀರ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ, ಸಾಧ್ಯವಾದಷ್ಟು ಜನರಿಗೆ ಲಸಿಕೆ ಹಾಕುವ ಮಾರ್ಗಗಳನ್ನು ಕಂಡುಹಿಡಿಯಬೇಕು, ಪ್ರಯತ್ನಿಸಬೇಕು. ನಿಮ್ಮಲ್ಲಿ ಲಸಿಕೆಗಳ ಕೊರತೆಯಿರುವಾಗ ಡೋಸ್​ಗಳನ್ನು ಪಡೆಯುವ ಅಂತರ ಹೆಚ್ಚಿಸುವುದು ಪ್ರಯೋಜನಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್​ 2ನೇ ಡೋಸ್​ ಪಡೆಯುವ ಅಂತರ 12-16 ವಾರಗಳಿಗೆ ಹೆಚ್ಚಿಸಲು ಶಿಫಾರಸು

ಸೇನಾ ಶಕ್ತಿ ಬಳಸಿ

"ಕೊರೊನಾಗೆ ಸಂಬಂಧಿಸಿದಂತೆ ಖಾಸಗಿ ವಲಯದಲ್ಲಿ ನಿಮಗೆ ಸಾಧ್ಯವಾಗದಂತಹ ಕೆಲಸಗಳನ್ನು ತ್ವರಿತವಾಗಿ ಮಾಡಲು ಸಾಧ್ಯವಾಗದಿದ್ದಾಗ ಮಿಲಿಟರಿಯನ್ನು (ದೇಶದ ಸೇನಾ ಶಕ್ತಿ) ಬಳಸಬಹುದು. ಉದಾಹರಣೆಗೆ, ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿರುವಾಗ ಮಿಲಿಟರಿ ಪಡೆಗಳು ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಬಹುದು. ಯುದ್ಧದ ಸಮಯದಲ್ಲಿ ಸೇನಾ ಪಡೆ ಇಂತಹ ಕಾರ್ಯನಿರ್ವಹಿಸುತ್ತದೆ" ಎಂದು ಫೌಸಿ ಸಲಹೆ ನೀಡಿದ್ದಾರೆ. ಇದೇ ವೇಳೆ, ಭಾರತಕ್ಕೆ ಪ್ರಯಾಣವನ್ನು ಪುನರಾರಂಭಿಸುವ ಪ್ರಶ್ನೆಗೆ ಉತ್ತರಿಸಿದ ಅವರು, ಇದು ನಿಜವಾಗಿಯೂ ಸೋಂಕಿನ ಮಟ್ಟವನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದರು.

ನಿನ್ನೆಯಷ್ಟೇ ಭಾರತ ಸರ್ಕಾರವು, 28 ರಿಂದ 56 ದಿನಗಳ ಅಂತರವಿದ್ದ ಕೋವಿಶೀಲ್ಡ್​ ಲಸಿಕೆಯ 2ನೇ ಡೋಸ್ ಪಡೆಯುವ ಅವಧಿಯನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸಲು ಶಿಫಾರಸು ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.