ETV Bharat / international

ಕೋವಿಡ್ ಬಗ್ಗೆ ಚೀನಾ ಹೇಳುವ ಮೊದಲೇ ತಿಳಿದಿತ್ತು: ಹಾಂಗ್​ಕಾಂಗ್ ವೈರಾಲಜಿಸ್ಟ್ ಅಚ್ಚರಿ ಹೇಳಿಕೆ - ಡಬ್ಲ್ಯುಎಚ್​ಒ

ಕೋವಿಡ್ -19 ಅಧ್ಯಯನ ಮಾಡಿದ ವಿಶ್ವದ ಮೊದಲ ವಿಜ್ಞಾನಿಗಳಲ್ಲಿ ಒಬ್ಬರಾದ ಲಿ ಮೆಂಗ್ ಯಾನ್ ಅವರು, ಹಾಂಗ್ ಕಾಂಗ್ ಸೇರಿದಂತೆ ವಿದೇಶಿ ತಜ್ಞರನ್ನು ಚೀನಾದಲ್ಲಿ ಸಂಶೋಧನೆ ನಡೆಸಲು ಚೀನಾ ಸರ್ಕಾರ ನಿರಾಕರಿಸಿದೆ ಎಂದು ಫಾಕ್ಸ್​ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Covid
ಕೊರೊನಾ ವೈರಸ್​
author img

By

Published : Jul 11, 2020, 9:55 PM IST

ವಾಷಿಂಗ್ಟನ್​: ಪ್ರಪಂಚದಾದ್ಯಂತ 12 ದಶಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್-19 ಸೋಂಕು ತಗುಲಿದ ಸಮಯದಲ್ಲಿ ಹಾಂಗ್ ಕಾಂಗ್‌ನ ವಿಜ್ಞಾನಿಯೊಬ್ಬರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. 'ಚೀನಾ ಸರ್ಕಾರವು ಮಾರಣಾಂತಿಕ ವೈರಸ್ ಬಗ್ಗೆ ಹೇಳಿಕೊಳ್ಳುವ ಮೊದಲೇ ತಿಳಿದಿತ್ತು' ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಹಾಂಗ್​ಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ವೈರಾಲಜಿ ಮತ್ತು ಇಮ್ಯುನೊಲಾಜಿಯಲ್ಲಿ ಪರಿಣತಿ ಹೊಂದಿರುವ ಲಿ ಮೆಂಗ್ ಯಾನ್, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಸ್ಥಾನಮಾನವನ್ನು ತನ್ನ ಗಮನದಲ್ಲಿ ಇಟ್ಟುಕೊಂಡು ಇನ್​ಫ್ಲ್ಯೂಯೆಂಜಾ ವೈರಸ್ ಮತ್ತು ಸಾಂಕ್ರಾಮಿಕ ರೋಗಗಳಲ್ಲಿ ಪರಿಣತಿ ಹೊಂದಿರುವ ಉಲ್ಲೇಣಿತ ಪ್ರಯೋಗಾಲಯ, ವಿಶೇಷವಾಗಿ 2020ರ ಆರಂಭಿಕ ದಿನಗಳಲ್ಲಿ ವೈರಸ್ ಹರಡಲು ಪ್ರಾರಂಭಿಸಿತು ಎಂಬುದರ ಬಗ್ಗೆ ಹೇಳಬಹುದಿತ್ತು ಎಂದು ಫಾಕ್ಸ್​ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಕ್ಷೇತ್ರದ ಉನ್ನತ ತಜ್ಞರು, ಮೇಲ್ವಿಚಾರಕರು ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ ಅವರು ಮಾಡುತ್ತಿರುವ ಸಂಶೋಧನೆಗಳನ್ನು ಸಹ ನಿರ್ಲಕ್ಷಿಸಿದ್ದಾರೆ ಎಂದಿದ್ದಾರೆ.

ಕೋವಿಡ್ -19 ಅಧ್ಯಯನ ಮಾಡಿದ ವಿಶ್ವದ ಮೊದಲ ವಿಜ್ಞಾನಿಗಳಲ್ಲಿ ಯಾನ್ ಕೂಡ ಒಬ್ಬರು. ಹಾಂಗ್ ಕಾಂಗ್ ಸೇರಿದಂತೆ ವಿದೇಶಿ ತಜ್ಞರನ್ನು ಚೀನಾದಲ್ಲಿ ಸಂಶೋಧನೆ ನಡೆಸಲು ಚೀನಾ ಸರ್ಕಾರ ನಿರಾಕರಿಸಿದೆ ಎಂದು ಹೇಳಿದರು.

ಚೀನಾದಾದ್ಯಂತದ ತನ್ನ ಸಹೋದ್ಯೋಗಿಗಳು ವಿಚಿತ್ರ ವೈರಸ್ ಬಗ್ಗೆ ಚರ್ಚಿಸಿದರು. ಆದರೆ, ತಕ್ಷಣದಲ್ಲಿ ಅವರ ಮಾತಿನ ತೀವ್ರತೆಯಲ್ಲಿ ಬದಲಾವಣೆಯನ್ನು ಕಂಡಿದ್ದೇನೆ. ವೈರಸ್ ಬಗ್ಗೆ ಬಹಿರಂಗವಾಗಿ ಚರ್ಚಿಸುತ್ತಿದ್ದ ವೈದ್ಯರು ಮತ್ತು ಸಂಶೋಧಕರು ಇದ್ದಕ್ಕಿದ್ದಂತೆ ಕುಗ್ಗಿದರು. ವುಹಾನ್ ನಗರದವರು ಇದು ನಂತರ ಸೋಂಕಿನ ಕೇಂದ್ರವಾಗಲಿದೆ ಎನುತ್ತಿದ್ದಂತೆ ಮೌನವಾದರು. ಇತರರ ವಿವರಗಳನ್ನು ಕೇಳದಂತೆ ಎಚ್ಚರಿಕೆ ನೀಡಿದರು ಎಂದು ಯಾನ್​ ಹೇಳಿದರು.

ನಾವು ಇದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಆದರೆ ನಾವು ಮುಖಗವಸುಗಳನ್ನು ಧರಿಸಬೇಕಾಗಿದೆ. ಮಾನವನಿಂದ ಮನುಷ್ಯನಿಗೆ ಹರಡುವ ಪ್ರಕರಣಗಳ ಸಂಖ್ಯೆಯು ಅಪಾಯಕಾರಿಯಾಗಿ ಬೆಳೆಯಲು ಪ್ರಾರಂಭಿಸಿತು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.