ಬ್ರೆಜಿಲಿಯಾ, ಬ್ರೆಜಿಲ್: ಭಾರತದಿಂದ ಕೊರೊನಾ ವೈರಸ್ ಲಸಿಕೆಯಾದ ಕೋವಾಕ್ಸಿನ್ ಖರೀದಿಸುವಾಗ ಹೆಚ್ಚಿನ ಬೆಲೆ ನಿಗದಿಪಡಿಸಲಾಗಿದೆ ಎಂಬ ಆರೋಪ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ವಿರುದ್ಧ ಕೇಳಿಬರುತ್ತಿದೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಆರೋಪ ಹೆಚ್ಚಾಗುತ್ತಿದ್ದಂತೆ ಈ ಕುರಿತು ತನಿಖೆ ನಡೆಸಲು ಅಲ್ಲಿನ ಸುಪ್ರೀಂ ಫೆಡರಲ್ ಕೋರ್ಟ್ ಅನುಮತಿ ನೀಡಿದೆ ಎಂದು ಜಿ1 ವೆಬ್ಸೈಟ್ ವರದಿ ಮಾಡಿದೆ.
ಬ್ರೆಜಿಲ್ ಭಾರತದಿಂದ 20 ಮಿಲಿಯನ್ ಲಸಿಕೆ ಪಡೆಯಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಒಂದು ಲಸಿಕೆಗೆ 15 ಡಾಲರ್ ಪಾವತಿಸಬೇಕಿತ್ತು. ಆದರೆ ಕೇವಲ 1.34 ಡಾಲರ್ಗೆ ಅಂದರೆ ನೂರು ರೂಪಾಯಿ ಕೋವಾಕ್ಸಿನ್ನ ವಾಸ್ತವ ಬೆಲೆ ಎಂದು ಭಾರತದಲ್ಲಿನ ಬ್ರೆಜಿಲ್ ರಾಯಭಾರ ಕಚೇರಿ ರಹಸ್ಯ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ ಎಂಬುದರ ಆಧಾರದ ಮೇಲೆ ಅಲ್ಲಿನ ವಿರೋಧ ಪಕ್ಷಗಳು ಅಧ್ಯಕ್ಷರ ವಿರುದ್ಧ ತನಿಖೆಗೆ ಆಗ್ರಹಿಸಿವೆ.
ಇದನ್ನೂ ಓದಿ: ಶೀಲ ಶಂಕಿಸಿ, ಪತ್ನಿಯನ್ನು ಕೊಂದ: ಹೂತಿಟ್ಟ ಮೃತದೇಹ ಹೊರತೆಗೆದಾಗ ಗೊತ್ತಾಯ್ತು ಪಾಪಿ ಕೃತ್ಯ..
ಈ ಹಿನ್ನೆಲೆಯಲ್ಲಿ ಬೋಲ್ಸನಾರೋ ವಿರುದ್ಧ ತನಿಖೆಗೆ ಅಲ್ಲಿನ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಈಗ ಅಲ್ಲಿನ ಎಡಪಂಥೀಯ, ಸೆಂಟ್ರಿಸ್ಟ್ ಪಕ್ಷಗಳು ರಾಷ್ಟ್ರಾಧ್ಯಕ್ಷರ ಮಹಾಭಿಯೋಗಕ್ಕೆ ಆಗ್ರಹಿಸುವ ಸಾಧ್ಯತೆ ದಟ್ಟವಾಗಿದೆ.