ವಾಷಿಂಗ್ಟನ್: 2000 ಇಸವಿಯಲ್ಲಿ ಅಮೆರಿಕದ ನಿರ್ಗಮಿತ ಅಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಬಿಲ್ ಕ್ಲಿಂಟನ್ ಅಧಿಕಾರ ಹಸ್ತಾಂತರಕ್ಕೆ ಹಿಂದೇಟು ಹಾಕಿದ್ದರು. ಈ ವೇಳೆ ನೂತನವಾಗಿ ಆಯ್ಕೆಯಾಗಿದ್ದ ರಿಪಬ್ಲಿಕ್ ಪಕ್ಷದ ಜಾರ್ಜ್ ಡಬ್ಲ್ಯೂ ಬುಷ್ ರಾಷ್ಟ್ರೀಯ ಭದ್ರತೆ ಹಾಗೂ ಗುಪ್ತಚರ ಇಲಾಖೆಗೆ ಸಂಬಂಧಿಸಿದ ಅತಿ ಮುಖ್ಯವಾದ ರಹಸ್ಯಗಳನ್ನು ದಿನನಿತ್ಯ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದರು.
ಇದೀಗ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡೆಮಾಕ್ರಟಿಕ್ ಪಕ್ಷದ ಬಿಲ್ ಕ್ಲಿಂಟನ್ ಅವರ ನಡೆಯನ್ನು ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವಿನ ಫಲಿತಾಂಶವನ್ನು ಟ್ರಂಪ್ ಒಪ್ಪಿಕೊಳ್ಳುತ್ತಿಲ್ಲ.
ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ದಿನ ನಿತ್ಯದ ಸುದ್ದಿಗೋಷ್ಠಿ ನಡೆಸಿ ದೇಶದ ಬೆಳವಣಿಗೆಗಳು ಹಾಗೂ ಆಡಳಿತ ಕುರಿತು ಮಾಹಿತಿ ನೀಡಲಿದ್ದಾರೆ. ಇದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳು ಎನ್ನಲಾಗುತ್ತಿದೆ.
ಡೊನಾಲ್ಡ್ ಟ್ರಂಪ್ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬಹದು ಎಂದು ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರಿಗೆ ಅಧಿಕಾರ ಹಸ್ತಾಂತರಿಸುವ ನಿರ್ಧಾರ ಕೈಗೊಳ್ಳಬೇಕು. ಆರಂಭದ ದಿನದಿಂದಲೇ ರಾಷ್ಟ್ರೀಯ ಭದ್ರತಾ ವಿಷಯಗಳ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲು ಸಂಪೂರ್ಣವಾಗಿ ಸಿದ್ಧರಾಗಲು ಬೈಡನ್‌ಗೆ ಸಹಕರಿಸಬೇಕು ಎಂದಿದ್ದಾರೆ.
ಗುಪ್ತಚರ ಸಮಿತಿ ಮುಖ್ಯಸ್ಥರಾಗಿದ್ದ ಮೈಕ್ ರೋಜರ್ ಪ್ರತಿಕ್ರಿಯಿಸಿ, ನಮ್ಮ ಸಲಹೆಗಳನ್ನು ಪಡೆಯುವವರೆಗೆ ಅಧಿಕಾರ ಹಸ್ತಾಂತರಕ್ಕೆ ಟ್ರಂಪ್ ಕಾಯುವುದು ಬೇಡ ಎಂದಿದ್ದಾರೆ.
ಜೋ ಬೈಡನ್‌ಗೆ ವಿದೇಶಾಂಗ ವ್ಯವಹಾರಗಳು ಮತ್ತು ರಾಷ್ಟ್ರೀಯ ಭದ್ರತೆ ನಿರ್ವಹಣೆಯಲ್ಲಿ ದಶಕಗಳ ಅನುಭವ ಇದೆ. ಆದರೆ ಸದ್ಯ ಅಮೆರಿಕ ಇರಾನ್ ನೊಂದಿಗೆ ನಡೆಸುತ್ತಿರುವ ಬೆಳವಣಿಗೆಗಳು ಅಥವಾ ರಷ್ಯಾ, ಚೀನಾ ಸೈಬರ್ ದಾಳಿ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಚೀನಾ ಹಾಂಕಾಂಗ್ ವಿಚಾರ ತಾರಕಕ್ಕೇರಿದೆ. ಜೊತೆಗೆ ಇಸ್ಲಾಮಿಕ್ ಸಂಘಟನೆಗಳಿಂದ ಬೆದರಿಕೆಗಳು ಇವೆ.
ಈ ಎಲ್ಲಾ ಬೆಳವಣಿಗೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಸವಾಲುಗಳು ಜೋ ಬೈಡನ್ ಮುಂದಿವೆ. ಆದ್ರೆ ಸುಗಮವಾಗಿ ಆಡಳಿತದ ಚುಕ್ಕಾಣಿ ಹಿಡಿಯು ಸವಾಲು ಎದುರಿಗಿದೆ. ಇದನ್ನು ಯಾವ ರೀತಿಯ ಪರಿಹರಿಸಿಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕು.