ವಾಷಿಂಗ್ಟನ್: ಅಫ್ಘಾನ್ ಮೇಲೆ ಕಳೆದ ಭಾನುವಾರದಿಂದ ತಾಲಿಬಾನ್ ಸಂಪೂರ್ಣ ಹಿಡಿತ ಸಾಧಿಸಿದ ನಂತರ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಬೈಡನ್ ಮತ್ತು ಜಾನ್ಸನ್ ಚರ್ಚೆಯ ವೇಳೆ ತಮ್ಮ ಮಿಲಿಟರಿ ಮತ್ತು ನಾಗರಿಕ ಸಿಬ್ಬಂದಿಯ ಧೈರ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. ತಮ್ಮ ದೇಶಗಳ ನಾಗರಿಕರು ಮತ್ತು ಮಿತ್ರ ದೇಶಗಳ ನಾಗರಿಕರನ್ನು ಅಫ್ಘಾನ್‌ನಿಂದ ಸ್ಥಳಾಂತರಿಸಲು ಕೆಲಸ ಮಾಡುತ್ತಿರುವ ಬಗ್ಗೆ ವಿಷಯ ವಿನಿಮಯ ಮಾಡಿಕೊಂಡರು.
ಇದನ್ನೂ ಓದಿ: ತಾಲಿಬಾನ್ ನಡೆ ಸಮರ್ಥಿಸಿದ ಎಸ್‌ಪಿ ಸಂಸದ ಶಫಿಕರ್ ರೆಹಮಾನ್‌ಗೆ ಯುಪಿ ಸಿಎಂ ತಿರುಗೇಟು
ಈಗ ತಾಲಿಬಾನ್ ಉಸ್ತುವಾರಿಯಲ್ಲಿರುವ ಕಾರಣ ಅಫ್ಘಾನಿಸ್ತಾನಕ್ಕೆ ನೆರವು ಮತ್ತು ಬೆಂಬಲದ ಭವಿಷ್ಯದ ಬಗ್ಗೆ ಮಿತ್ರರಾಷ್ಟ್ರಗಳೊಂದಿಗೆ ನಿಕಟ ಸಮನ್ವಯದ ಅಗತ್ಯತೆಯನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಶ್ವೇತಭವನ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಪ್ರಸಕ್ತ ವಿದ್ಯಮಾನಗಳನ್ನು ಚರ್ಚಿಸಲು ಮುಂದಿನ ವಾರ ಗ್ರೂಪ್ ಆಫ್ ಸೆವೆನ್ ವೆಲ್ತ್ ಡೆಮಾಕ್ರಸಿಸ್‌ನ ವರ್ಚುವಲ್ ಸಭೆಯನ್ನು ಜಾನ್ಸನ್ ಕರೆಯಲಿದ್ದಾರೆ.