ETV Bharat / international

ಟ್ರಂಪ್ ವಾಗ್ದಂಡನೆ ವಿಚಾರಣೆ ಕಡಿಮೆ ಅವಧಿಯಲ್ಲಿ ಮುಗಿಸಲು ಬೈಡನ್​ ಸೂಚನೆ - former President Donald Trump's impeachment tria

ಫೆ.8 ರಿಂದ ಡೊನಾಲ್ಡ್​ ಟ್ರಂಪ್​ ಅವರ ದೋಷಾರೋಪಣೆ ವಿಚಾರಣೆ ನಡೆಯಲಿದ್ದು, ಆದಷ್ಟು ಕಡಿಮೆ ಅವಧಿಯಲ್ಲಿ ವಿಚಾರಣೆ ಅಂತ್ಯಗೊಳಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್​​ ಸೆನೆಟ್​ಗೆ ಸೂಚಿಸಿದ್ದಾರೆ.

Biden
ಜೋ ಬೈಡನ್​​
author img

By

Published : Jan 31, 2021, 12:55 PM IST

ವಾಷಿಂಗ್ಟನ್​: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಮೇಲಿನ ದೋಷಾರೋಪಣೆ ವಿಚಾರಣೆಯನ್ನು ಆದಷ್ಟು ಕಡಿಮೆ ಅವಧಿಯಲ್ಲಿ ಮುಗಿಸುವಂತೆ ಯುಎಸ್​ ಕಾಂಗ್ರೆಸ್​ನ ಮೇಲ್ಮನೆಯಾದ ಸೆನೆಟ್​ಗೆ ಅಧ್ಯಕ್ಷ ಜೋ ಬೈಡನ್​​ ಆಗ್ರಹಿಸಿದ್ದಾರೆ.

ವಾಗ್ದಂಡನೆ ವಿಚಾರಣೆಯು ಬೈಡನ್​​ ಹಾಗೂ ಅವರ ಕೆಲವು ಅಜೆಂಡಾಗಳಿಗೆ ಕೆಡಕು ಉಂಟುಮಾಡಬಹುದೆಂದು ಡೆಮಾಕ್ರಟಿಕ್​ ಪಕ್ಷದ ನಾಯಕರು ಎಚ್ಚರಿಕೆ ನೀಡಿದ್ದು, ವಿಚಾರಣೆ ವೇಳೆ ಬೈಡನ್​​ ಹಾಜರಾಗುವುದಿಲ್ಲ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿಚಾರಣೆಯನ್ನು ಬೇಗ ಮುಗಿಸಿ, ತಮ್ಮ ಅಜೆಂಡಾ ದಾರಿ ತಪ್ಪದಂತೆ ನೋಡಿಕೊಳ್ಳಿ ಎಂದು ಸೆನೆಟ್​ಗೆ ಬೈಡನ್​ ಸೂಚಿಸಿದ್ದಾರೆ.

ಜನವರಿ 6 ರಂದು ಕ್ಯಾಪಿಟಲ್​ ಹಿಲ್ ಮೇಲೆ​ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಮಹಿಳೆ, ಪೊಲೀಸ್​ ಸಿಬ್ಬಂದಿ ಸೇರಿ ಐವರು ಮೃತಪಟ್ಟಿದ್ದರು. ದಾಳಿ ನಡೆಸಲು ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಟ್ರಂಪ್ ವಿರುದ್ಧ ದೋಷಾರೋಪಣೆ ಪಟ್ಟಿ ಸಿದ್ಧವಾಗಿದ್ದು, ಫೆ.8 ರಿಂದ ಇದರ ವಿಚಾರಣೆಗಳು ಆರಂಭವಾಗಲಿವೆ.

ಇದನ್ನೂ ಓದಿ: ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಒಪ್ಪಂದಕ್ಕೆ ಪಾಕಿಸ್ತಾನ ಬದ್ಧವಾಗಿಲ್ಲ: ಪಾಕ್ ವಿದೇಶಾಂಗ ಕಚೇರಿಯ ವಕ್ತಾರ

ಅಮೆರಿಕದ ಇತಿಹಾಸದಲ್ಲಿಯೇ ಎರಡು ಬಾರಿ ವಾಗ್ದಂಡನೆಗೆ ಒಳಗಾದ ಅಧ್ಯಕ್ಷ ಎಂಬ ಅಪಕೀರ್ತಿಗೆ ಡೊನಾಲ್ಡ್ ಟ್ರಂಪ್ ಒಳಗಾಗಿದ್ದಾರೆ. ಈ ಆರೋಪ ಸಾಬೀತಾದರೆ ಟ್ರಂಪ್​​ ಇನ್ನು ಮುಂದೆ ಯಾವುದೇ ಸಾರ್ವಜನಿಕ ಹುದ್ದೆ ಅಲಂಕರಿಸುವಂತಿಲ್ಲ. ಸೆನೆಟ್​ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವ​ರನ್ನು ನುರಿತ ವಕೀಲ ಬುಚ್​ ಬೋವರ್ಸ್ ಸಮರ್ಥಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.