ಜಿನೆವಾ: ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ರೂಪಾಂತರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಆಕ್ಸ್‌ಫರ್ಡ್ - ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಿದ್ಧಪಡಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿರ್ಧರಿಸಿದೆ.
ಅಸ್ಟ್ರಾಜೆನೆಕಾ ಲಸಿಕೆಯು ಕೇವಲ ಮೂಲ ಕೊರೊನಾ ವೈರಸ್‌ನ ವಿರುದ್ಧ ಪರಿಣಾಮಕಾರಿಯಾಗಿತ್ತು. ಆದರೆ, ರೂಪಾಂತರಗೊಂಡ ಕೊರೊನಾದ ಮೇಲೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಅಭಿಯಾನ ಸ್ಥಗಿತಗೊಳಿಸಿ, ಕೋವಿಡ್ ಲಸಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಿದ್ಧಪಡಿಸಲು ಡಬ್ಲ್ಯುಎಚ್‌ಒ ನಿರ್ಧರಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್‌ನ ಪ್ರಕರಣಗಳು ಹೆಚ್ಚಾಗಿದೆ. ಇದಕ್ಕೆ ಅಸ್ಟ್ರಾಜೆನೆಕಾ ಲಸಿಕೆಯು ಸ್ವಲ್ಪ ಮಟ್ಟದ ಸುರಕ್ಷತೆಯನ್ನು ಮಾತ್ರ ನೀಡುತ್ತದೆ. ಇನ್ನು ಈಗಾಗಲೇ ಕ್ಲಿನಿಕಲ್ ಟ್ರಯಲ್‌ಗೆ 2,000 ಮಂದಿಯನ್ನು ಒಳಪಡಿಸಲಾಗಿದೆ. ಇದರಲ್ಲಿ ಭಾಗಿಯಾದವರು ಹೆಚ್ಚಿನವರು ಯುವಕರಾಗಿದ್ದಾರೆ.