ಖಾರ್ಟೌಮ್ (ಸುಡಾನ್): ಮ್ಯಾನ್ಮಾರ್, ಮಾಲಿ ದೇಶದ ಬಳಿಕ ಸುಡಾನ್ನಲ್ಲಿ ಮಿಲಿಟರಿ ಪಡೆ ದಂಗೆಯೆದ್ದಿದೆ. ಸುಡಾನ್‌ನ ಮಿಲಿಟರಿ ಆಡಳಿತವು ದೇಶದ ಅಧಿಕಾರವನ್ನು ಸೋಮವಾರ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ಪ್ರಧಾನಿ ಅಬ್ದುಲ್ಲಾ ಹಮ್ಡೋಕ್ ಸೇರಿದಂತೆ ಸಂಪುಟದ ಅನೇಕ ಸದಸ್ಯರನ್ನು ಬಂಧಿಸಿದೆ.
ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುವ ಸೇನಾ ದಂಗೆಯ ವಿರುದ್ಧ ಪ್ರತಿಭಟಿಸಲು ಸಾವಿರಾರು ಜನರು ರಾಜಧಾನಿ ಖಾರ್ಟೌಮ್ ಮತ್ತು ಅದರ ಅವಳಿ ನಗರವಾದ ಒಮ್ದುರ್ಮನ್‌ನಲ್ಲಿ ಬೀದಿಗಿಳಿದಿದ್ದಾರೆ. ಆದರೆ ಪ್ರತಿಭಟನಾಕಾರರ ಮೇಲೆ ಸೇನೆ ದಾಳಿ ನಡೆಸಿದ್ದು, 7 ಮಂದಿ ಮೃತಪಟ್ಟಿದ್ದಾರೆ. 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
-
Soldiers in Sudan fired live rounds at pro-democracy protesters after the military dissolved the government and took over in an apparent coup.
— AJ+ (@ajplus) October 25, 2021 " class="align-text-top noRightClick twitterSection" data="
The military arrested civilian leaders, ending a joint civilian-military council that has ruled since Pres. al-Bashir's ouster in 2019. pic.twitter.com/AiVtygk8CI
">Soldiers in Sudan fired live rounds at pro-democracy protesters after the military dissolved the government and took over in an apparent coup.
— AJ+ (@ajplus) October 25, 2021
The military arrested civilian leaders, ending a joint civilian-military council that has ruled since Pres. al-Bashir's ouster in 2019. pic.twitter.com/AiVtygk8CISoldiers in Sudan fired live rounds at pro-democracy protesters after the military dissolved the government and took over in an apparent coup.
— AJ+ (@ajplus) October 25, 2021
The military arrested civilian leaders, ending a joint civilian-military council that has ruled since Pres. al-Bashir's ouster in 2019. pic.twitter.com/AiVtygk8CI
ಏನಿದರ ಹಿನ್ನೆಲೆ?
1983 ರಿಂದ 30 ವರ್ಷಗಳ ಸುದೀರ್ಘ ಆಡಳಿತದ ಬಳಿಕ ನಿರಂಕುಶಾಧಿಕಾರಿ ಒಮರ್ ಅಲ್-ಬಶೀರ್ ನೇತೃತ್ವದ ಸರ್ಕಾರ 2019ರಲ್ಲಿ ಅಧಿಕಾರ ಕಳೆದುಕೊಂಡಿತ್ತು. ಬಶೀರ್ ಕೂಡ ಸೇನಾ ದಂಗೆಯ ಮೂಲವೇ ಅಧಿಕಾರಕ್ಕೆ ಬಂದವರಾಗಿದ್ದರು. 2019ರ ಆಗಸ್ಟ್ನಲ್ಲಿ ಅಬ್ದುಲ್ಲಾ ಹಮ್ಡೋಕ್ ಅವರು ಸುಡಾನ್ ನಾಗರಿಕ ಸರ್ಕಾರದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಹೊಸದಾಗಿ ಸ್ಥಾಪನೆಯಾಗಿದ್ದ ಅಬ್ದೆಲ್ ಫತ್ಹಾ ಅಲ್ ಬುರ್ಹಾನ್ ನೇತೃತ್ವದ ಸಾರ್ವಭೌಮತ್ವ ಮಂಡಳಿ ಜೊತೆ ಸುಡಾನ್ ಅಧಿಕಾರ ಹಂಚಿಕೆಯಾಗಿತ್ತು. ಎರಡೇ ವರ್ಷದಲ್ಲಿ ಈ ಸರ್ಕಾರವೂ ಪತನವಾಗಿದ್ದು, ಮಿಲಿಟರಿ ಮುಖ್ಯಸ್ಥರೂ ಆಗಿರುವ ಅಬ್ದೆಲ್ ಫತ್ಹಾ ಅಲ್ ಬುರ್ಹಾನ್ ಇಡೀ ದೇಶವನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ತುರ್ತು ಪರಿಸ್ಥಿತಿ
ನಿನ್ನೆ ಮಧ್ಯಾಹ್ನ ಮಿಲಿಟರಿ ಮುಖ್ಯಸ್ಥ ಜನರಲ್ ಅಬ್ದೆಲ್-ಫತ್ತಾಹ್ ಬುರ್ಹಾನ್ ಅವರು ರಾಷ್ಟ್ರೀಯ ಟಿವಿಯಲ್ಲಿ ನಾಗರಿಕ ಸರ್ಕಾರ ಮತ್ತು ಸಾರ್ವಭೌಮ ಮಂಡಳಿಯನ್ನು ವಿಸರ್ಜಿಸುವುದಾಗಿ, 2023ರ ಜುಲೈನಲ್ಲಿ ನಡೆಯಲಿರುವ ಚುನಾವಣೆವರೆಗೂ ತಾವೇ ಅಧಿಕಾರ ವಹಿಸಿಕೊಳ್ಳುವುದಾಗಿ ಹೇಳಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ರಾಜಕೀಯ ಬಣಗಳ ನಡುವಿನ ಜಗಳಗಳು ಸೇನೆಯನ್ನು ಮಧ್ಯಪ್ರವೇಶಿಸಲು ಪ್ರೇರೇಪಿಸಿತು. ಚುನಾವಣೆ ವೇಳೆ ದೇಶವನ್ನು ಮುನ್ನಡೆಸಲು ತಾಂತ್ರಿಕ ಸರ್ಕಾರವನ್ನು ಮಿಲಿಟರಿ ನೇಮಿಸಲಿದೆ. ಆದರೆ ದೇಶವು ಮಿಲಿಟರಿ ಹಿಡಿತದಲ್ಲೇ ಇರುತ್ತದೆ ಎಂದು ಜನರಲ್ ಬುರ್ಹಾನ್ ಹೇಳಿದ್ದಾರೆ.
ದೇಶದ ನಾಯಕತ್ವವನ್ನು ನಾಗರಿಕ, ಚುನಾಯಿತ ಸರ್ಕಾರಕ್ಕೆ ಹಸ್ತಾಂತರಿಸುವವರೆಗೆ ಸಶಸ್ತ್ರ ಪಡೆಗಳು ಪ್ರಜಾಪ್ರಭುತ್ವದ ಪರಿವರ್ತನೆಯನ್ನು ಪೂರ್ಣಗೊಳಿಸುವುದನ್ನು ಮುಂದುವರಿಸುತ್ತವೆ. ದೇಶದ ಸಂವಿಧಾನವನ್ನು ಪುನಃ ಬರೆಯಲಾಗುವುದು. ಕ್ರಾಂತಿಯನ್ನು ಮಾಡಿದ ಯುವಕರು ಮತ್ತು ಯುವತಿಯ ಭಾಗವಹಿಸುವಿಕೆಯೊಂದಿಗೆ ಶಾಸಕಾಂಗ ಸಂಸ್ಥೆಯನ್ನು ರಚಿಸಲಾಗುವುದು ಎಂದು ಬುರ್ಹಾನ್ ಹೇಳಿದ್ದಾರೆ.
-
Sudan's PM Abdalla Hamdok is under house arrest for refusing to support a military coup attempt, says information ministry ⤵️
— Al Jazeera English (@AJEnglish) October 25, 2021 " class="align-text-top noRightClick twitterSection" data="
🔴 Follow our LIVE blog for the latest updates: https://t.co/AwjM0PEBkN pic.twitter.com/7aQBXzTUsi
">Sudan's PM Abdalla Hamdok is under house arrest for refusing to support a military coup attempt, says information ministry ⤵️
— Al Jazeera English (@AJEnglish) October 25, 2021
🔴 Follow our LIVE blog for the latest updates: https://t.co/AwjM0PEBkN pic.twitter.com/7aQBXzTUsiSudan's PM Abdalla Hamdok is under house arrest for refusing to support a military coup attempt, says information ministry ⤵️
— Al Jazeera English (@AJEnglish) October 25, 2021
🔴 Follow our LIVE blog for the latest updates: https://t.co/AwjM0PEBkN pic.twitter.com/7aQBXzTUsi
ಆದರೆ ಇತರ ರಾಷ್ಟ್ರಗಳು ಸುಡಾನ್ ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೂಡ ಇಂದು ಈ ಬಗ್ಗೆ ಸಭೆ ನಡೆಸಿ ಚರ್ಚಿಸಲು ಮುಂದಾಗಿದೆ.