ಕೇಪ್ ಟೌನ್ (ಸೌತ್ ಆಫ್ರಿಕಾ): ಕೊರೊನಾ ವೈರಸ್ ಲಸಿಕೆ ತಯಾರಿಕೆಯನ್ನು ಪ್ರಾರಂಭಿಸಲು ದಕ್ಷಿಣ ಆಫ್ರಿಕಾದ ಔಷಧೀಯ ಕಂಪನಿ ಆಸ್ಪೆನ್ ಫಾರ್ಮಾ ಕೇರ್, ಜಾನ್ಸನ್ ಅಂಡ್ ಜಾನ್ಸನ್‌ನ ಎರಡು ಅಂಗ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
"ಆಸ್ಪೆನ್ನ ದಕ್ಷಿಣ ಆಫ್ರಿಕಾದ ಅಂಗ ಸಂಸ್ಥೆಗಳಲ್ಲಿ ಒಂದಾದ ಫಾರ್ಮಾ ಕೇರ್ ಲಿಮಿಟೆಡ್, ಜಾನ್ಸನ್ ಅಂಡ್ ಜಾನ್ಸನ್‌ನ ಎರಡು ಔಷಧೀಯ ಕಂಪನಿಗಳಾದ ಜಾನ್ಸನ್ ಫಾರ್ಮಾಸ್ಯುಟಿಕಲ್ಸ್ ಇಂಕ್ ಮತ್ತು ಜಾನ್ಸನ್ ಫಾರ್ಮಾಸ್ಯುಟಿಕಾ ಎನ್ವಿಯೊಂದಿಗೆ ಪ್ರಾಥಮಿಕ ಒಪ್ಪಂದ ಮಾಡಿಕೊಂಡಿದೆ ಎಂದು ಘೋಷಿಸಲು ಸಂತೋಷವಾಗುತ್ತಿದೆ." ಎಂದು ಆಸ್ಪೆನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಒಪ್ಪಂದದ ಭಾಗವಾಗಿ, ಆಸ್ಪೆನ್ ಸೌತ್ ಆಫ್ರಿಕಾದ ಸಿಟಿ ಪೋರ್ಟ್ ಎಲಿಜಬೆತ್ ಮೂಲದ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಕಂಪನಿ ಹೇಳಿದೆ. ಔಷಧಿಗಳ ತಯಾರಿಕೆ ಮತ್ತು ಪ್ಯಾಕೇಜಿಂಗ್ ಸೌಲಭ್ಯಕ್ಕಾಗಿ 184 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಾಗಿದೆ.
ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದರೆ 2021ರ ಆರಂಭದಲ್ಲಿ ಇದು ಲಭ್ಯವಾಗುವಂತೆ ಜಾನ್ಸನ್ ಅಂಡ್ ಜಾನ್ಸನ್ ಆಶಿಸಿದೆ.