ETV Bharat / international

ಕೀನ್ಯಾಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್

author img

By

Published : Jun 12, 2021, 5:06 PM IST

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇಂದು ಕೀನ್ಯಾಕ್ಕೆ ಆಗಮಿಸಿದ್ದಾರೆ. ಜೈಶಂಕರ್​ ಭಾರತ - ಕೀನ್ಯಾ ಜಂಟಿ ಆಯೋಗದ 3 ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಇದು ದ್ವಿಪಕ್ಷೀಯ ಸಂಬಂಧದ ಎಲ್ಲ ಅಂಶಗಳನ್ನು ಪರಿಶೀಲಿಸುತ್ತದೆ.

MEA Jaishankar arrives in Kenya on bilateral visit to strengthen ties
ಕೀನ್ಯಾಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್

ಕೀನ್ಯಾ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಮೂರು ದಿನಗಳ ವಿದೇಶಿ ಪ್ರವಾಸದ ನಿಮಿತ್ತ ಇಂದು ಕೀನ್ಯಾಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಹಲವಾರು ಸಭೆಗಳನ್ನು ನಡೆಸಲಿದ್ದಾರೆ.

ಜೈಶಂಕರ್ ಅವರನ್ನು ಕೀನ್ಯಾ ಗಣರಾಜ್ಯದ ವಿದೇಶಾಂಗ ವ್ಯವಹಾರಗಳ ಮುಖ್ಯ ಆಡಳಿತ ಕಾರ್ಯದರ್ಶಿ (ಸಿಎಎಸ್) ಅಬಾಬು - ನಮ್ಮವಾಂಬ ಅವರು ಸ್ವಾಗತಿಸಿದರು. "ಕೀನ್ಯಾದೊಂದಿಗಿನ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಅವರು ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಇಂದು (ಶನಿವಾರ) ಕೀನ್ಯಾದ ವಿದೇಶಾಂಗ ಸಚಿವ ರೇಚೆಲ್ ಒಮಾಮೊ ಅವರೊಂದಿಗಿನ ಸಭೆಯೊಂದಿಗೆ ಅದು ಪ್ರಾರಂಭವಾಗಲಿದೆ" ಎಂದು ಇಲ್ಲಿನ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.

ಜೈಶಂಕರ್​ ಭಾರತ-ಕೀನ್ಯಾ ಜಂಟಿ ಆಯೋಗದ 3 ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಇದು ದ್ವಿಪಕ್ಷೀಯ ಸಂಬಂಧದ ಎಲ್ಲ ಅಂಶಗಳನ್ನು ಪರಿಶೀಲಿಸುತ್ತದೆ. ಜಂಟಿ ಆಯೋಗದ ಕೊನೆಯ ಸಭೆ 2019 ರ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ನಡೆಯಿತು.

ಭಾರತ - ಕೀನ್ಯಾ ಸಂಬಂಧವನ್ನು ಮುಂದುವರಿಸಲು ಜೈಶಂಕರ್ ಕೀನ್ಯಾದ ಸರ್ಕಾರದ ಇತರ ಸಚಿವರನ್ನೂ ಭೇಟಿ ಮಾಡಲಿದ್ದಾರೆ. "ಅಭಿವೃದ್ಧಿಯ ಸಹಭಾಗಿತ್ವವು ಉಭಯ ದೇಶಗಳ ನಡುವಿನ ಸಂಬಂಧದ ಒಂದು ಪ್ರಮುಖ ಅಂಶವಾಗಿದೆ. ಈ ಭೇಟಿಯು ಸಂಬಂಧ ವೃದ್ಧಿಗೆ ಪ್ರಯತ್ನಿಸುತ್ತದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಉಭಯ ದೇಶಗಳ ನಡುವಿನ ಪ್ರಮುಖ ಸೇತುವೆಯಾದ ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಮೂಲದ ಸಮುದಾಯದೊಂದಿಗೆ ಸಚಿವರು ಸಂವಹನ ನಡೆಸಲಿದ್ದಾರೆ. ಕೀನ್ಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಗಳ ಸಮುದಾಯವಿದೆ.

ಭಾರತ ಮತ್ತು ಕೀನ್ಯಾ ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿವೆ. ಅವರು ಕಾಮನ್‌ವೆಲ್ತ್‌ನ ಸದಸ್ಯರೂ ಹೌದು. ಕೀನ್ಯಾ ಆಫ್ರಿಕನ್ ಒಕ್ಕೂಟದ ಸಕ್ರಿಯ ಸದಸ್ಯರಾಗಿದ್ದು, ಇದರೊಂದಿಗೆ ಭಾರತವು ದೀರ್ಘಕಾಲದ ಸಂಬಂಧ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.