ETV Bharat / international

ಈ ದೇಶದಲ್ಲೀಗ 1ಲಕ್ಷಕ್ಕೂ ಅಧಿಕ ಮಂದಿ ಕೋವಿಡ್​ಗೆ ಬಲಿ - ಅರ್ಜೆಂಟೀನಾ ಕೋವಿಡ್​ ಕೇಸ್

ಅರ್ಜೆಂಟೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 614 ಜನರು ಕೋವಿಡ್​ಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,00,250ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Argentina logs 1,00,000 virus deaths
ಅರ್ಜೆಂಟೀನಾದಲ್ಲಿ ಈವರೆಗೆ 1ಲಕ್ಕೂ ಅಧಿಕ ಮಂದಿ ಕೋವಿಡ್​ಗೆ ಬಲಿ
author img

By

Published : Jul 15, 2021, 7:36 AM IST

ಅರ್ಜೆಂಟೀನಾ: ಕೋವಿಡ್​ ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ಅರ್ಜೆಂಟೀನಾದಲ್ಲಿ 1,00,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ಸುಮಾರು 614 ಜನರು ಕೋವಿಡ್​ಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,00,250ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಕುರಿತು ಪ್ರಕ್ರಿಯಿಸಿರುವ ಜೆರೊಂಟಾಲಜಿಯಲ್ಲಿ ಪರಿಣತಿ ಹೊಂದಿರುವ ಮತ್ತು ಸರ್ಕಾರದ ಸಾಂಕ್ರಾಮಿಕ ರೋಗದ ಸಲಹೆಗಾರರಾದ ಲೂಯಿಸ್ ಕ್ಮೆರಾ, ನಾನು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಇಂತಹ ಪರಿಸ್ಥಿತಿ ಸಂಭವಿಸುತ್ತದೆಯೆಂದು ನಾನು ಭಾವಿಸಿರಲಿಲ್ಲ. ಇದು ಸಂಕಷ್ಟದ ಸಮಯವಾಗಿದೆ. ಲಾಕ್‌ಡೌನ್‌ ಸಮಯದಲ್ಲಿನ ದೋಷಗಳು ಮತ್ತು ವೈರಸ್ ರೂಪಾಂತರಗಳಿಂದ ಹೆಚ್ಚು ಸಾವುಗಳು ಸಂಭವಿಸಿವೆ.

ಮಾರ್ಚ್ ಅಂತ್ಯದಲ್ಲಿ ಕೊರೊನಾ ವೈರಸ್​ನ ಎರಡನೇ ಅಲೆ ಆಕ್ರಮಣಕಾರಿ ರೂಪಾಂತರಗಳೊಂದಿಗೆ ಬಹಬೇಗ ವ್ಯಾಪಿಸಿತು. ಕೋವಿಡ್ ​ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಅರ್ಜೆಂಟೀನಾ ಆರ್ಥಿಕವಾಗಿ ಹೆಣಗಾಡುತ್ತಿತ್ತು. ಜೊತೆಗೆ ಅನೇಕ ನಾಗರಿಕರು ಕ್ವಾರಂಟೈನ್​ ನಿಯಮವನ್ನು ಕಡೆಗಣಿಸಿದರು. ನಂತರ ಕ್ರಿಸ್‌ಮಸ್ ರಜಾದಿನಗಳು ಮತ್ತು ಅರ್ಜೆಂಟೀನಾದ ದಕ್ಷಿಣ ಗೋಳಾರ್ಧದ ಬೇಸಿಗೆ ಕೂಟಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಯಿತು. ಈ ವೇಳೆ ಜನರು ಮಾಸ್ಕ್​ ಧರಿಸದೇ ಒಟ್ಟಿಗೆ ಸಮಯ ಕಳೆದಿದ್ದರಿಂದ ಸೋಂಕು ವ್ಯಾಪಿಸಿತು. ಜೊತೆಗೆ ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಯತ್ನವೂ ಹಿಂದುಳಿದಿದೆ ಎಂದು ಕ್ಮೆರಾ ತಿಳಿಸಿದರು.

ಅಮೆರಿಕದಲ್ಲಿ 6 ಲಕ್ಷದ ಗಡಿ ದಾಟಿದ ಸಾವಿನ ಸಂಖ್ಯೆ

ಅಮೆರಿಕದಲ್ಲಿ ಅತಿಹೆಚ್ಚು ಅಂದರೆ 6,08,000 ಕೋವಿಡ್​ ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ಬ್ರೆಜಿಲ್ 5,36,000, ಭಾರತ 4,11,000, ಮೆಕ್ಸಿಕೊ 2,35,000 ಮತ್ತು ಪೆರುವಿನಲ್ಲಿ 1,95,000 ಮಂದಿ ಸಾವನ್ನಪ್ಪಿದ್ದಾರೆ. ಫ್ರಾನ್ಸ್, ರಷ್ಯಾ, ಬ್ರಿಟನ್, ಇಟಲಿ ಮತ್ತು ಕೊಲಂಬಿಯಾದಲ್ಲಿ ತಲಾ 1,00,000ಕ್ಕೂ ಹೆಚ್ಚು ಸಾವುಗಳನ್ನು ವರದಿಯಾಗಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ಸಂಪನ್ಮೂಲ ಕೇಂದ್ರ ವರದಿ ನೀಡಿದೆ.

ಕೋವಿಡ್​ನಿಂದ ವಿಶ್ವದಾದ್ಯಂತ ಸುಮಾರು 40,52,000 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ತಿಳಿಸಿದೆ. ರೋಗದ ಬಗ್ಗೆ ತಪ್ಪು ಕಲ್ಪನೆಗಳು, ಅಸಮರ್ಪಕ ಪರೀಕ್ಷೆ ಮತ್ತು ಇತರ ಅಂಶಗಳಿಂದಾಗಿ ಸಾವಿನ ಸಂಖ್ಯೆ ಅನೇಕ ದೇಶಗಳಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ.

ಅರ್ಜೆಂಟೀನಾದಲ್ಲಿ 4.6 ದಶಲಕ್ಷಕ್ಕೂ ಹೆಚ್ಚಿನ ಜನರಲ್ಲಿ ಕೊರೊನಾ​ ಪತ್ತೆಯಾಗಿದ್ದು, ಲಸಿಕೆ ಪಡೆಯುವ ಅವಕಾಶ ದೊರೆಯುವ ಮುನ್ನ ಸಾವನ್ನಪ್ಪುತ್ತಿರುವವರಲ್ಲಿ ಅನೇಕರು 40 ರಿಂದ 60 ವರ್ಷ ವಯಸ್ಸಿನವರು. ಜೊತೆಗೆ ಸುಮಾರು ಎರಡು ತಿಂಗಳ ಹಿಂದೆ ಸೋಂಕಿಗೆ ಒಳಗಾಗಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚೋಕ್ಸಿಗೆ ಜಾಮೀನು ಮಂಜೂರು: ಚಿಕಿತ್ಸೆಗಾಗಿ ಆಂಟಿಗುವಾಗೆ ತೆರಳಿದ ಆರೋಪಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.