ETV Bharat / headlines

ಕೋವಿಡ್​ ದತ್ತಾಂಶ ಪ್ರಚಾರಕ್ಕೆ ಬಳಸಲಾಗುತ್ತಿದೆ: ಕೇಂದ್ರದ ವಿರುದ್ಧ ಪ್ರಿಯಾಂಕಾ ಗಂಭೀರ ಆರೋಪ - ‘ಸಫಾಯಿ ಅಭಿಯಾನ’

‘ಜಿಮೆದಾರ್‌ ಕೌನ್‌?’(ಯಾರು ಜವಾಬ್ದಾರರು?) ಎಂಬ ಅಭಿಯಾನದಡಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘ಜನರ ಜೀವಗಳನ್ನು ಉಳಿಸುವುದಕ್ಕಿಂತ ಪ್ರಧಾನಿ ಮೋದಿ ನಿಮ್ಮ ಘನತೆಯನ್ನು ಕಾಪಾಡುವುದು ಅತಿ ಅವಶ್ಯಕವೇ? ಎಂದು ಪ್ರಶ್ನಿಸಿದ್ದಾರೆ.

ಪ್ರಿಯಾಂಕ ಗಾಂಧಿ
ಪ್ರಿಯಾಂಕ ಗಾಂಧಿ
author img

By

Published : Jun 7, 2021, 4:14 PM IST

ನವದೆಹಲಿ: ಕೇಂದ್ರ ಸರ್ಕಾರವು ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ದತ್ತಾಂಶವನ್ನು ಮುಚ್ಚಿಡುತ್ತಿದ್ದು, ಮೋದಿ ಸರ್ಕಾರವು ಜೀವ ಉಳಿಸುವಂತಹ ಕಾರ್ಯವನ್ನು ಪ್ರಚಾರಕ್ಕಾಗಿ ಬಳಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ.

‘ಜಿಮೆದಾರ್‌ ಕೌನ್‌?’(ಯಾರು ಜವಾಬ್ದಾರರು?) ಎಂಬ ಅಭಿಯಾನದಡಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘ಜನರ ಜೀವಗಳನ್ನು ಉಳಿಸುವುದಕ್ಕಿಂತ ಪ್ರಧಾನಿ ಮೋದಿ ನಿಮ್ಮ ಘನತೆಯನ್ನು ಕಾಪಾಡುವುದು ಅತಿ ಅವಶ್ಯಕವೇ? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಅವರು,‘ ಈ ದತ್ತಾಂಶಗಳನ್ನು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಬೇಕಾಗಿತ್ತು. ಆದರೆ, ಸಾಂಕ್ರಾಮಿಕ ಆರಂಭದಿಂದಲೂ ಕೇಂದ್ರ ಸರ್ಕಾರ, ಈ ದತ್ತಾಂಶಗಳನ್ನು ಪ್ರಚಾರದ ಟೂಲ್‌ ಆಗಿ ಬಳಸುತ್ತಿದೆ. ಜನರು ಜೀವಗಳನ್ನು ಕಳೆದುಕೊಳ್ಳುತ್ತಿದ್ದರೂ, ತಮ್ಮ ರಾಜಕೀಯ ಉದ್ದೇಶಗಳನ್ನು ಪೂರೈಸಲು ದತ್ತಾಂಶಗಳನ್ನು ತಿರುಚಲಾಗುತ್ತಿದೆ’ ಎಂದರು.

ಉತ್ತರ ಪ್ರದೇಶ ಸರ್ಕಾರವು ಕೋವಿಡ್‌ ದತ್ತಾಂಶಗಳಲ್ಲಿ ಏರುಪೇರು ಮಾಡಲು ಆರ್‌ಟಿ – ಪಿಸಿಆರ್‌ ಮತ್ತು ಆ್ಯಂಟಿಜೆನ್‌ ಪರೀಕ್ಷೆಯ ಅಂಕಿ- ಅಂಶವನ್ನು ಒಟ್ಟಾಗಿ ತೋರಿಸುತ್ತಿದೆ. ಆ್ಯಂಟಿಜೆನ್‌ ಪರೀಕ್ಷೆಯು ಅಷ್ಟೊಂದು ವಿಶ್ವಾಸಾರ್ಹವಲ್ಲ ಎಂಬುದು ತಿಳಿದಿರುವ ವಿಷಯ ಎಂದು ಹೇಳಿದರು.

ಗಂಗಾ ನದಿಯ ದಡದಲ್ಲಿ 2,200 ಶವಗಳು ಪತ್ತೆಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಇದಕ್ಕೆ ಸಂಬಂಧಿಸಿದ ಡ್ರೋನ್‌ ದೃಶ್ಯಗಳು ಕೂಡ ವೈರಲ್‌ ಆಗಿತ್ತು. ಆಗ ಉತ್ತರ ಪ್ರದೇಶ ಸರ್ಕಾರವು ಏಕಾಏಕಿ ‘ಸಫಾಯಿ ಅಭಿಯಾನ’ವನ್ನು(ಸ್ವಚ್ಛತಾ ಅಭಿಯಾನ) ಆರಂಭಿಸಿತು. ವಾರಾಣಸಿ, ಗೋರಖ್‌ಪುರ, ಲಖನೌ, ಕಾನ್ಪುರ, ಝಾನ್ಸಿ, ಮೀರತ್‌ನ ಶವಗಾರಗಳು ಮತ್ತು ಸರ್ಕಾರ ನೀಡುತ್ತಿರುವ ಸಾವಿನ ವರದಿಯಲ್ಲಿ ಭಾರಿ ವ್ಯತ್ಯಾಸವಿದೆ ಎಂದು ಅವರು ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.