ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳ ವಶದಲ್ಲಿದ್ದ ಡಿಕೆ ಶಿವಕುಮಾರ್ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿರುವ ಕೋರ್ಟ್, ಅರ್ಜಿ ವಿಚಾರಣೆಯನ್ನು ನಾಳೆಗೆ (ಬುಧವಾರ) ಮುಂದೂಡಿದೆ.
ನ್ಯಾಯಾಲಯದಲ್ಲಿ ನಡೆದ ವಾದ- ಪ್ರತಿವಾದದ ವಿವರ:
ಡಿಕೆಶಿ ಪರ ಅಭಿಷೇಕ್ ಮನುಸಿಂಘ್ವಿ, ಇಡಿ ಪರ ನಟರಾಜ್ ವಾದ ಮಂಡನೆ
* ಆಸ್ಪತ್ರೆಯಲ್ಲಿ ವೈದ್ಯರ ನಿರ್ಧಾರದ ಬಳಿಕ ಮುಂದಿನ ಕ್ರಮ
* ಡಿಕೆಶಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್, ಆಸ್ಪತ್ರೆಯಲ್ಲಿರಲು ಅವಕಾಶ ಮಾಡಿ ಕೊಡುವಂತೆ ಕೋರ್ಟ್ಗೆ ಸಿಂಘ್ವಿ ಮನವಿ
* 23 ವರ್ಷದ ಮಗಳು 108 ಕೋಟಿ ರೂ. ವ್ಯವಹಾರ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವೇ? ಇಡಿ ವಕೀಲರ ಪ್ರಶ್ನೆ
* ಆರೋಪಿಗಳು ಎಲ್ಲರೂ ಸೇರಿ ಕ್ರಿಮಿನಲ್ ಒಳಸಂಚು ಮಾಡಿದ್ದಾರೆ: ನಟರಾಜ್ ವಾದ
* ಬೇರೆ ಬೇರೆ ಸ್ಥಳಗಳು ಡಿಕೆಶಿ ನಿಯಂತ್ರಣದಲ್ಲಿದ್ದವು. 9 ಮಂದಿಗೆ ಸಮನ್ಸ್ ನೀಡಿ ಹೇಳಿಕೆ ಪಡೆದಿದ್ದೇವೆ: ಇಡಿ ವಕೀಲರ ಸ್ಪಷ್ಟನೆ
* ಡಿಕೆಶಿಯ 143 ಕೋಟಿ ರೂ. ವ್ಯವಹಾರ ಮಾಡಿದ್ದಾರೆ. ಲೆಕ್ಕಪತ್ರವಿಲ್ಲದೆ 143 ಕೋಟಿ ರೂ. ವ್ಯವಹಾರ ನಡೆಸಿದ್ದಾರೆ: ನಟರಾಜ್ ಹೇಳಿಕೆ
* 41 ಲಕ್ಷ ರೂ. ಸಿಕ್ಕಿದೆ ಎಂದು ಪ್ರತಿ ಪಾದಿಸುತ್ತಿದ್ದಾರೆ. ಆದರೆ, 8.5 ಕೋಟಿ ರೂ. ಮೇಲೆ ಡಿಕೆಶಿಯ ಪರೋಕ್ಷ ಹಿಡಿತವಿದೆ: ಕೋರ್ಟ್ ಮುಂದೆ ನಟರಾಜ್ ವಾದ
* ಅರ್ಧ ಗಂಟೆಯಲ್ಲಿ ವಿಚಾರಣೆ ಮುಗಿಸಲು ಎಎಸ್ಒಜಿಗೆ ಸೂಚನೆ; ಒಂದು ಗಂಟೆ ಸಮಯ ಕೇಳಿದ ನಟರಾಜ್
* ಡಿಕೆಶಿಗೆ ವೈದ್ಯಕೀಯ ಸೌಲಭ್ಯ ನೀಡಿದ್ದೇವೆ: ಇಡಿ ಪರ ಎಎಸ್ಜಿ ಕೆ.ಎಂ. ನಟರಾಜ್ ವಾದ
* ಸಿಆರ್ಪಿಸಿ ಸೆಕ್ಷನ್ 161 ಅಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಸಿಆರ್ಪಿಸಿ 161 ಅಡಿ ಸಾಕ್ಷಿಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ
* ದೆಹಲಿಯಲ್ಲಿ ಸಿಕ್ಕ ಹಣಕ್ಕೆ ಡಿಕೆಶಿ ಜವಾಬ್ದಾರರಲ್ಲ: ಹಿರಿಯ ವಕೀಲ ಮುಕುಲ್ ರೋಹ್ಟಗಿ
* ಪಿಎಂಎಲ್ಎ ಕೇಸ್ ಏಕೆ ಹಾಕಿದ್ದಾರೆ ತಿಳಿಯುತ್ತಿಲ್ಲ. ದೆಹಲಿಯಲ್ಲಿ ಸಿಕ್ಕ ಹಣಕ್ಕೆ ದಾಖಲೆಗಳನ್ನು ಒದಗಿಸಲಾಗಿದೆ. ಆದರೂ ಪಿಎಂಎಲ್ಎ ಅಡಿ ದೂರು ದಾಖಲಿಸಿಕೊಂಡಿದ್ದಾರೆ: ರೋಹ್ಟಗಿ
* ಡಿ.ಕೆ. ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದೆ. ಅವರಿಗೆ ಜಾಮೀನು ನೀಡಲೇಬೇಕು. ಡಿಕೆಶಿ ಪ್ರಕರಣವನ್ನು ಅನುಸೂಚಿತ ಅಪರಾಧವೆಂದು ಪರಿಗಣಿಸುವಂತಿಲ್ಲ: ಮುಕುಲ್ ರೋಹ್ಟಗಿ
* ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದನ ಮಂಡನೆ ಆರಂಭ
* ಪದೇ ಪದೇ ವಿಚಾರಣೆ ಮಾಡುವುದರಿಂದ ನಿಮಗೆ (ಇಡಿ) ಏನು ಸಿಗುತ್ತೆ? ಕೂಡಲೇ ಜಾಮೀನು ನೀಡಿ ಡಿಕೆಶಿಯನ್ನು ಬಿಡುಗಡೆ ಮಾಡಿ: ಮನು ಸಿಂಘ್ವಿ ನ್ಯಾಯಾಲಯದ ಮುಂದೆ ಕೋರಿಕೆ
* ತಂದೆಯ ಮರಣದ ನಂತರ ಆಸ್ತಿ ಮಕ್ಕಳಿಗೆ ಬಂದಿದೆ: ಸಿಂಘ್ವಿ
* ಸೆಕ್ಷೆನ್ 45ರ ಅಡಿ ಪ್ರಾಸಿಕ್ಯೂಷನ್ಗೆ ಜಾಮೀನು ವಿರೋಧಿಸುವ ಅವಕಾಶವಿದೆ: ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶ ಉಲ್ಲೇಖಿಸಿದ ಡಿಕೆಶಿ ಪರ ವಕೀಲ
* ನನ್ನ ಅಳಿಯ ತಮ್ಮ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಅಷ್ಟೇ ಅಲ್ಲ, ನನ್ನ ಅಳಿಯನಿಗೆ ಇದುವರೆಗೂ ಇಡಿ ಸಮನ್ಸ್ ಜಾರಿ ಮಾಡಿಲ್ಲ
* ಬಂಧನಕ್ಕೆ ಪಡೆಯುವುದರಿಂದ ಸತ್ಯ ಹೊರ ಬರುತ್ತದಾ? ಇಲ್ಲಿವರೆಗೂ ಉತ್ತರ ಪಡೆಯಲು ಆಗಿಲ್ಲ ಎಂದು ಹೇಳುತ್ತಿದೆ ಇಡಿ, ಮತ್ತೆ ಕಸ್ಟಡಿಗೆ ಪಡೆದರೆ ಉತ್ತರ ಪಡೆಯಲು ಸಾಧ್ಯವೇ?
* ನನ್ನಿಂದ ಕೇವಲ 41 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. 8.59 ಕೋಟಿ ರೂ. ನನ್ನದಲ್ಲ
* ಇಡಿ ಪೂರ್ವಾಗ್ರಹ ಪೀಡಿತವಾಗಿ ವರ್ತಿಸುತ್ತಿದೆ: ಮನು ಸಿಂಘ್ವಿ ಆರೋಪ
* ನಾವು ಅವರ ಜಾಮೀನು ಅರ್ಜಿಯ ಮನವಿಯನ್ನು ವಿರೋಧಿಸುತ್ತೇವೆ: ಇಡಿ ಪರ ವಕೀಲ ನಟರಾಜ್ ಆಕ್ಷೇಪಣೆ
* 317 ಖಾತೆಗಳು ಇವೆ ಎಂದು ಇಡಿ ಹೇಳುತ್ತಿದೆ. ಆದರೆ, ಡಿಕೆಶಿಗೆ ಸಂಬಂಧಿಸಿದ 20 ಖಾತೆಗಳು ಮಾತ್ರ ಇವೆ. ವಸ್ತುಸ್ಥಿತಿ ಹೀಗಿರುವಾಗ 317 ಖಾತೆಗಳು ಇವೆ ಎಂದು ಹೇಳುವುದು ಎಷ್ಟು ಸರಿ ಸಿಂಘ್ವಿ ಪ್ರಶ್ನೆ
* ಡಿಕೆಶಿ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ ಜಾಮೀನು ಅಗತ್ಯವಾಗಿದೆ ಸಿಂಘ್ವಿ ಸ್ಪಷ್ಟನೆ