ಅವಾಚ್ಯ ಪದ ಬಳಕೆಗೆ ಕಾರಣರಾದ ಚಕ್ರವರ್ತಿ ಚಂದ್ರಚೂಡ್ ಅವರನ್ನು ನಟ ಸುದೀಪ್ ತರಾಟೆಗೆ ತೆಗೆದುಕೊಂಡರು. ವಾರದ ಕಥೆ ಕಿಚ್ಚನ ಜೊತೆ ಪಂಚಾಯಿತಿಯಲ್ಲಿ 'ಪ್ರಶಾಂತ್ ಬಗ್ಗೆ ವೈಷ್ಣವಿ ಹಿಂದೆ ಮಾತನಾಡುತ್ತಾರೆ' ಎಂಬ ವಿಷಯದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮೊನ್ನೆ ನಡೆದ ಮಾತಿನ ಚಕಮಕಿ ಕುರಿತಂತೆ ಚಕ್ರವರ್ತಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ನೀವೇ ವಿಷಯವನ್ನು ಎತ್ತಿರುವುದರಿಂದ ನಾನು ಇದನ್ನು ಹೇಳಲೇಬೇಕಾಗುತ್ತದೆ. ನೀವು ಹೇಳಿದ್ದನ್ನು ಒಪ್ಪಿಕೊಳ್ಳಿ. ಕಣ್ಣಲ್ಲಿ ಕಣ್ಣಿಟ್ಟು ಸುಳ್ಳು ಹೇಳುವುದನ್ನು ಮಾಡಬೇಡಿ. ನೀವು ಮಾತನಾಡಿದ ವಿಡಿಯೋವನ್ನು ಪ್ಲೇ ಮಾಡಬೇಕಾಗುತ್ತದೆ. ಅದು ಯಾವ ಸ್ಪರ್ಧಿಗೂ ಶೋಭೆಯಲ್ಲ ಎಂದು ಕಿಚ್ಚ ಹೇಳಿದರು.
ಈಗ ನನ್ನ ಕಣ್ಣಲ್ಲಿ ಸುಳ್ಳು ಹೇಳಿದ್ರಿ. ವೈಷ್ಣವಿ ವಿಚಾರದಲ್ಲಿ ನೀವು ಸುಳ್ಳು ಹೇಳಿದ್ದೀರಿ. ನೀವು ಮಾತನಾಡಿದ್ದು ವೈಷ್ಣವಿ ವ್ಯಕ್ತಿತ್ವಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿತ್ತು. ಪ್ರಶಾಂತ್ ಹಾಗೂ ವೈಷ್ಣವಿ ನಡುವೆ ಉತ್ತಮ ಬಾಂಧವ್ಯವಿದೆ. ಆದರೆ ನೀವು ಹೇಳಿದ ವಿಷಯವನ್ನು ಪ್ರಶಾಂತ್ ಕ್ಲಾರಿಟಿ ಮಾಡಿಕೊಳ್ಳದೆ, ತಲೆಯಲ್ಲಿಟ್ಟುಕೊಂಡು ವೈಷ್ಣವಿ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಮೂಡಿಸಿಕೊಳ್ಳುವುದು ಸರಿ ಇಲ್ಲ. ಹೀಗಾಗಿ, ಕೇಳಿದ್ದು ಸರಿ ಆದರೆ, ನೀವು ಅಸಹ್ಯವನ್ನು ಕೇಳಬೇಡ ಗಾಡ್ ಪ್ರಾಮಿಸ್ ಎಂದಿದ್ದೀರಿ.ಆದರೂ, ನೀವು ವಾದ ಮಾಡುವ ಸಂದರ್ಭದಲ್ಲಿ ಬಳಸಿದ ಶಬ್ದಗಳಿಗೆ ಬಿಗ್ ಬಾಸ್ ಬೀಪ್ ಸೌಂಡ್ ಹಾಕಿದ್ದರು. ಕಾರ್ಯಕ್ರಮವನ್ನು ಮನೆ ಮಂದಿ ಕುಳಿತು ನೋಡುತ್ತಿರುತ್ತಾರೆ. ಇನ್ನೊಮ್ಮೆ ಇಂತಹ ತಪ್ಪು ನಡೆಯಬಾರದು ಎಂಬ ಉದ್ದೇಶದಿಂದ ಇದನ್ನು ಹೇಳಿದ್ದೇನೆಂದು ಚಕ್ರವರ್ತಿಯವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು.