ETV Bharat / entertainment

ರೋಹಿತ್ ಶೆಟ್ಟಿ ಅವರ ಇಂಡಿಯಾ ಪೊಲೀಸ್ ಫೋರ್ಸ್‌ಗೆ ಟ್ವಿಸ್ಟ್​ ನೀಡಲಿರುವ ವಿಭೂತಿ ಠಾಕೂರ್ - ಇಂಡಿಯಾ ಪೋಲಿಸ್ ಫೋರ್ಸ್' ವೆಬ್ ಸರಣಿ

ವಿಭೂತಿ ಈ ಹಿಂದೆ ಸಾರಾ ಅಲಿ ಖಾನ್ ಮತ್ತು ರಣವೀರ್ ಸಿಂಗ್ ಅಭಿನಯದ 'ಸಿಂಬಾ' ಚಿತ್ರದಲ್ಲಿ ರೋಹಿತ್ ಶೆಟ್ಟಿ ಜೊತೆ ನಟಿಸಿದ್ದಾರೆ. ಸಿಂಬಾ ಚಿತ್ರದ ನಂತರ ಮತ್ತೆ ಅವರೊಂದಿಗೆ ಅಭಿನಯಿಸಿಲು ಅವಕಾಶ ಸಿಗುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.

Vibhuti thakur india police force
ರೋಹಿತ್ ಶೆಟ್ಟಿಯವರ ಇಂಡಿಯಾ ಪೊಲೀಸ್ ಫೋರ್ಸ್‌ಗೆ ಟ್ವಿಸ್ಟ್​ ನೀಡಲಿರುವ ವಿಭೂತಿ ಠಾಕೂರ್
author img

By

Published : May 3, 2022, 7:25 PM IST

ಮುಂಬೈ: ರೋಹಿತ್ ಶೆಟ್ಟಿಯವರ 'ಇಂಡಿಯಾ ಪೋಲಿಸ್ ಫೋರ್ಸ್' ವೆಬ್ ಸರಣಿಯ ಪ್ರಮುಖ ಪಾತ್ರದಲ್ಲಿ ವಿಭೂತಿ ಠಾಕೂರ್ ನಟಿಸಲಿರುವ ವಿಷಯ ಕಾರ್ಯಕ್ರಮದ ಮೂಲಗಳಿಂದ ಮಾಹಿತಿ ಹೊರ ಬಂದಿದೆ. ವಿಭೂತಿ ಅವರು ಈ ಸರಣಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ವಿವೇಕ್ ಒಬೆರಾಯ್ ಮತ್ತು ಶಿಲ್ಪಾ ಶೆಟ್ಟಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ವಿಭೂತಿ ಠಾಕೂರ್ ವೆಬ್​ ಸರಣಿಯಲ್ಲಿ ಅತಿಥಿ ಪ್ರಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಸರಣಿ ಮಹತ್ವದ ಪಾತ್ರ ಇದಾಗಿದ್ದು ಕಥೆಗೆ ತಿರುವು ನೀಡಲಿದೆ ಎನ್ನಲಾಗಿದೆ.

ಈ ವಿಚಾರವಾಗಿ ವಿಭೂತಿಯವರೇ ದೃಢಪಡಿಸಿದ್ದು" ನಾನು ಈ ಸರಣಿ ಮಾಡುತ್ತಿದ್ದೇನೆ ಎಂದು ಮಾತ್ರ ನಾನು ಹೇಳಬಲ್ಲೆ, ಈ ಸಮಯದಲ್ಲಿ ಇದಕ್ಕಿಂತ ಹೆಚ್ಚು ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ".

ವಿಭೂತಿ ಈ ಹಿಂದೆ ಸಾರಾ ಅಲಿ ಖಾನ್ ಮತ್ತು ರಣವೀರ್ ಸಿಂಗ್ ಅಭಿನಯದ 'ಸಿಂಬಾ' ಚಿತ್ರದಲ್ಲಿ ರೋಹಿತ್ ಶೆಟ್ಟಿ ಜೊತೆ ಕೆಲಸ ಮಾಡಿದ್ದಾರೆ. ರೋಹಿತ್ ಸರ್ ಜೊತೆಗೆ ನನಗೆ ಉತ್ತಮ ಸಂಬಂಧವಿದೆ ಮತ್ತು ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಉತ್ತಮ ವಾಗಿರುತ್ತದೆ. ಸಿಂಬಾ ಚಿತ್ರದ ನಂತರ ಮತ್ತೆ ಅವರೊಂದಿಗೆ ಅಭಿನಯಿಸಿಲು ಅವಕಾಶ ಸಿಗುತ್ತಿರುವುದು ಖುಷಿ ತಂದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ದೇವರ​​ ದರ್ಶನಕ್ಕೆ ಹೋಗ್ತಿದ್ದ ತನುಶ್ರೀ ದತ್ತಾ ಕಾರು ಅಪಘಾತ.. ಗಾಯದ ಫೋಟೋ ಹಂಚಿಕೊಂಡ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.