ETV Bharat / entertainment

'ಬಿಗ್​ ಬಾಸ್'​ ಟ್ರೋಫಿಗೆ ಮುತ್ತಿಟ್ಟ ರೈತನ ಮಗ: ಪ್ರಶಾಂತ್​ ವಿನ್ನರ್​, ಅಮರ್​ದೀಪ್​ ರನ್ನರ್​ - ಈಟಿವಿ ಭಾರತ ಕನ್ನಡ

Bigg Boss telugu: ಪಲ್ಲವಿ ಪ್ರಶಾಂತ್​ ಅವರು ತೆಲುಗು ಬಿಗ್​ ಬಾಸ್​ ಸೀಸನ್​ 7ರ ವಿನ್ನರ್​ ಆಗಿದ್ದಾರೆ. ಅಮರ್​ದೀಪ್​ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

telugu Bigg boss season 7 winner pallavi prashant runner amardeep
'ಬಿಗ್​ ಬಾಸ್'​ ಟ್ರೋಫಿಗೆ ಮುತ್ತಿಟ್ಟ ರೈತನ ಮಗ: ಪ್ರಶಾಂತ್​ ವಿನ್ನರ್​, ಅಮರ್​ದೀಪ್​ ರನ್ನರ್​
author img

By ETV Bharat Karnataka Team

Published : Dec 18, 2023, 4:26 PM IST

ತೆಲುಗಿನ ರಿಯಾಲಿಟಿ ಶೋ 'ಬಿಗ್​ ಬಾಸ್ ಸೀಸನ್​ 7' ಭಾನುವಾರ ಮುಕ್ತಾಯಗೊಂಡಿದೆ. ರೈತನ ಮಗ ಪಲ್ಲವಿ ಪ್ರಶಾಂತ್​ ಟ್ರೋಪಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 105 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ ಪ್ರಶಾಂತ್​, ಬಿಗ್​ ಬಾಸ್​ ಟೈಟಲ್​ ಗೆದ್ದ ಮೊದಲ 'ಕಾಮನ್​ ಮ್ಯಾನ್​' ಎಂಬ ದಾಖಲೆ ಬರೆದಿದ್ದಾರೆ. ಕಿರುತೆರೆ ನಟ ಅಮರ್​ದೀಪ್ ರನ್ನರ್​ ಅಪ್​ ಆಗಿದ್ದಾರೆ. ಈ ಫಿನಾಲೆ ಕಾರ್ಯಕ್ರಮಕ್ಕೆ ಮಾಸ್​ ಮಹಾರಾಜ ರವಿತೇಜ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ​

ಫಿನಾಲೆಯಲ್ಲಿ ಕಾರ್ಯಕ್ರಮದ ನಿರೂಪಕ ನಾಗಾರ್ಜುನ ಅಕ್ಕಿನೇನಿ ಅವರು ಪ್ರಶಾಂತ್​ ಅವರನ್ನು ವಿಜೇತ ಎಂದು ಅಧಿಕೃತವಾಗಿ ಘೋಷಿಸಿದರು. ಗ್ರ್ಯಾಂಡ್​ ಫಿನಾಲೆಯಲ್ಲಿ ಹಿರಿಯ ನಟ ಶಿವಾಜಿ, ಪಲ್ಲವಿ ಪ್ರಶಾಂತ್​, ಪ್ರಿಯಾಂಕಾ, ಯವರ್​, ಅರ್ಜುನ್​ ಮತ್ತು ಅಮರ್​ದೀಪ್​ ಟಾಪ್​ 6ನಲ್ಲಿ ಇದ್ದರು. ಇವರಲ್ಲಿ ಪ್ರಶಾಂತ್​ ವಿನ್ನರ್​, ಅಮರ್​ದೀಪ್​ ರನ್ನರ್​, ಶಿವಾಜಿ ಮೂರನೇ ಸ್ಥಾನ, ಯವರ್​ ನಾಲ್ಕನೇ ಸ್ಥಾನ, ಪ್ರಿಯಾಂಕಾ ಮತ್ತು ಅರ್ಜುನ್​ ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳನ್ನು ಪಡೆದರು. ಈ ಮೂಲಕ ತೆಲುಗು ಬಿಗ್​ ಬಾಸ್​ ಸೀಸನ್​ 7 ಅಂತ್ಯಗೊಂಡಿತು.

ಸೀಸನ್​ ಆರಂಭದಿಂದಲೂ ಪಲ್ಲವಿ ಪ್ರಶಾಂತ್​ ತಮ್ಮ ಗಮನವನ್ನೆಲ್ಲ ಟಾಸ್ಕ್​ಗಳ ಮೇಲೆಯೇ ಕೇಂದ್ರಿಕರಿಸಿದ್ದರು. ಅವರು ತಮ್ಮ ಸಾಮರ್ಥ್ಯವನ್ನು ಮಾತಿನ ಬದಲು ಆಟದಲ್ಲಿ ತೋರಿಸುತ್ತಿದ್ದರು. ತಮ್ಮ ಅದ್ಭುತ ಆಟದಿಂದಲೇ ಎದುರಾಳಿಗಳ ಬೆವರಿಳಿಸುತ್ತಿದ್ದರು. ಆದರೆ, ಪ್ರಶಾಂತ್​ ಟಾಸ್ಕ್​ನಲ್ಲಿ ಸೋತರೆ ಕಣ್ಣೀರಿಡುತ್ತಿದ್ದರು. ಮೊದಲಿಗೆ ಇದು ಸಿಂಪತಿ ಗಿಟ್ಟಿಸಿಕೊಳ್ಳುವ ಚಮಕ್​ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ನಂತರದಲ್ಲಿ ಅದು ಪ್ರಶಾಂತ್​ ಅವರ ಸೂಕ್ಷ್ಮ ಮನಸ್ಸಿನ ಪರಿಚಯವನ್ನು ಮಾಡಿಸಿಕೊಟ್ಟಿತು.

ಯಾರ ಮಾತನ್ನೂ ಲೆಕ್ಕಿಸದೇ ಗೆಲುವಿನತ್ತ ಗಮನ ಹರಿಸಿದ ಪ್ರಶಾಂತ್​ ಕೊನೆಗೂ ಬಯಸಿದ್ದನ್ನು ಸಾಧಿಸಿದರು. ಅವರು ಮೊದಲು ಕೆಲಸಕ್ಕಾಗಿ ಕಾಯುತ್ತಿದ್ದ ಅದೇ ಸ್ಟುಡಿಯೋದಲ್ಲಿ ಹೆಚ್ಚು ಚಪ್ಪಾಳೆಗಳ ನಡುವೆ ಬಿಗ್​ ಬಾಸ್​ 7 ಟ್ರೋಫಿಯನ್ನು ಸ್ವೀಕರಿಸಿದರು. ಮತ್ತೊಂದೆಡೆ, ಅಮರ್​ದೀಪ್​ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಮೊದಲಿನಿಂದಲೂ ಇದ್ದಾರೆ. ಉತ್ತಮ ಆಟದೊಂದಿಗೆ ಫೈನಲ್​​ವರೆಗೆ ಬಂದ ಅವರು ಬಿಗ್​ ಬಾಸ್​ 7ರ ರನ್ನರ್​ ಅಪ್​ ಆಗಿ ಹೊರಹೊಮ್ಮಿದರು.

ವಿನ್ನರ್​ ಟ್ರೋಫಿ ಪಡೆದ ಬಳಿಕ ಮಾತನಾಡಿದ ಪಲ್ಲವಿ ಪ್ರಶಾಂತ್​, "ನನ್ನನ್ನು ಗೆಲ್ಲಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ಇಲ್ಲಿಯವರೆಗೆ ಬರಬೇಕೆಂದು ಸಾಕಷ್ಟು ಕನಸು ಕಂಡಿದ್ದೆ. ಈ ಸ್ಟುಡಿಯೋದಲ್ಲೇ ತುಂಬಾ ಸುತ್ತಾಡಿದ್ದೆ. ಊಟ ಮಾಡದೇ ಇದ್ರೂ ಮನೆಯವರಿಗೆ ತಿಂದೆ ಎಂದು ಸುಳ್ಳು ಹೇಳುತ್ತಿದ್ದೆ. ನಾನೇನು ಬೇಕಾದರೂ ಮಾಡಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ. ನನ್ನ ತಂದೆ ಕೂಡ ನನ್ನನ್ನು ನಂಬಿದ್ದರು. ನೀನು ಮಂದೆ ನಡೆ, ನಾನು ಇದ್ದೇನೆ ಎಂದು ಹೇಳಿದ್ದರು. ಆ ನಂಬಿಕೆಯೇ ನನ್ನನ್ನು ಇಲ್ಲಿಯವರೆಗೆ ಬರುವಂತೆ ಮಾಡಿದೆ" ಎಂದು ಮಾತು ಮುಗಿಸಿದ ಅವರ ಕಣ್ಣಲ್ಲಿ ಆನಂದಭಾಷ್ಪ ಮೂಡಿತ್ತು.

"ನನಗೆ ಶೋ ಗೆದ್ದು ಸಿಕ್ಕಿರುವ ದುಡ್ಡಿನಲ್ಲಿ ರೈತರಿಗೆ 35 ಲಕ್ಷ ರೂಪಾಯಿಗಳನ್ನು ನೀಡುತ್ತೇನೆ. ನಾನು ಈ ಕಾರ್ಯಕ್ರಮಕ್ಕೆ ರೈತರಿಗಾಗಿಯೇ ಬಂದಿದ್ದೇನೆ. ನಾನು ರೈತರ ಪರವೇ ಆಡಿದ್ದೇನೆ. ನನಗೆ ಕೊಟ್ಟಿರುವ ಕಾರನ್ನು ತಂದೆಗೆ ಮತ್ತು ಸಿಕ್ಕಿರುವ ವಜ್ರದ ನೆಕ್ಲೆಸ್​ ಅನ್ನು ತಾಯಿಗೆ ಉಡುಗೊರೆ ರೂಪದಲ್ಲಿ ಕೊಡುತ್ತೇನೆ. ನಾನು ಬಿಗ್​ ಬಾಸ್​ ಬಂದಿದ್ದು ಹಣಕ್ಕಾಗಿ ಅಲ್ಲವೇ ಅಲ್ಲ" ಎಂದು ಮತ್ತೊಮ್ಮೆ ತಮ್ಮ ಮಾತನ್ನು ಪುನರುಚ್ಛರಿಸಿದರು.

ಪ್ರಶಾಂತ್​ ಅವರ ಇಂತಹ ಮಹಾನ್​ ಮನಸ್ಸಿಗೆ ಪ್ರೇಕ್ಷಕರೆಲ್ಲ ಬೆರಗಾಗಿದ್ದಾರೆ. ಅವರು ವಿಜೇತರಾಗಿದ್ದೇ, ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ. ಪ್ರಶಾಂತ್​ ವಿನ್ನರ್​ ಆಗಿದ್ದಕ್ಕೆ ಶಿವಾಜಿ ಅಭಿಮಾನಿಗಳು ಕೂಡ ಸಂಭ್ರಮಿಸುತ್ತಿದ್ದಾರೆ. ಗೆಲುವು ತಮ್ಮದಾಗದಿದ್ದರೂ ಶಿವಾಜಿ ತನ್ನ ಶಿಷ್ಯ ಪಲ್ಲವಿ ಪ್ರಶಾಂತ್​ ವಿಜಯಿಯಾದ ಖುಷಿಯಲ್ಲಿದ್ದಾರೆ. ಪಲ್ಲವಿ ಪ್ರಶಾಂತ್​ ಅವರು ಶೋ ಗೆದ್ದು 35 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಬೆಲೆ ಬಾಳುವ ಮಾರುತಿ ಬ್ರೆಝಾ ಕಾರು ಹಾಗೂ 15 ಲಕ್ಷ ರೂಪಾಯಿ ಮೌಲ್ಯದ ವಜ್ರದ ನೆಕ್ಲೆಸ್​ ಅವರಿಗೆ ಸಿಕ್ಕಿದೆ.

ಇದನ್ನೂ ಓದಿ: ಸಂಗೀತಾ ಫೋಟೋ ಇದ್ದ ಮಡಿಕೆ ಒಡೆದ ಕಾರ್ತಿಕ್! ಬಿಗ್‌ ಬಾಸ್ ಮನೆಮಂದಿಗೆ ಅಚ್ಚರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.