ETV Bharat / entertainment

ರಜಿನಿಕಾಂತ್ 73ನೇ​ ಹುಟ್ಟುಹಬ್ಬಕ್ಕೆ 'ತಲೈವರ್​ 170' ಸಿನಿಮಾದ ಟೈಟಲ್​ ಅನಾವರಣ - ಈಟಿವಿ ಭಾರತ ಕನ್ನಡ

Thalaivar 170: 'ಜೈಲರ್​' ಖ್ಯಾತಿಯ ರಜನಿಕಾಂತ್​ ನಟನೆಯ 170ನೇ ಸಿನಿಮಾದ ಟೈಟಲ್​ ಅನಾವರಣಗೊಂಡಿದೆ.

Rajinikanths 170th movie title revealed
ರಜನಿಕಾಂತ್ 73ನೇ​ ಹುಟ್ಟುಹಬ್ಬಕ್ಕೆ 'ತಲೈವರ್​ 170' ಸಿನಿಮಾದ ಟೈಟಲ್​ ಅನಾವರಣ
author img

By ETV Bharat Karnataka Team

Published : Dec 12, 2023, 9:54 PM IST

ಭಾರತೀಯ ಚಿತ್ರರಂಗದ ಖ್ಯಾತ ನಟ ರಜಿನಿಕಾಂತ್​ ನಟನೆಯ 170ನೇ ಸಿನಿಮಾ ಟೈಟಲ್​ ಅನಾವರಣಗೊಂಡಿದೆ. ಟಿ.ಜೆ ಜ್ಞಾನವೆಲ್​ ಆ್ಯಕ್ಷನ್ ಕಟ್​ ಹೇಳಿರುವ ಈ ಚಿತ್ರದ ಶೂಟಿಂಗ್​ ಈಗಾಗಲೇ ಪ್ರಾರಂಭಗೊಂಡಿದೆ. ಲೈಕಾ ಪ್ರೊಡಕ್ಷನ್ಸ್​ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇಂದು ತಲೈವಾ ಜನ್ಮದಿನದ ಪ್ರಯುಕ್ತ ಚಿತ್ರತಂಡ ಶೀರ್ಷಿಕೆ ಅನಾವರಣಗೊಳಿಸಿದೆ. ಅದಕ್ಕಾಗಿ ಒಂದು ಚಿಕ್ಕ ಟೀಸರ್​ ಅನ್ನು​ ಕೂಡ ಹಂಚಿಕೊಂಡಿದೆ. ಪಕ್ಕಾ ಮಾಸ್​ ಲುಕ್​ನಲ್ಲಿ ತಲೈವಾ ಕಾಣಿಸಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಇಲ್ಲಿಯವರೆಗೆ ಸಿನಿಮಾಗೆ 'ತಲೈವರ್​ 170' ಎಂದು ಶೀರ್ಷಿಕೆ ಇಡಲಾಗಿತ್ತು. ಇಂದು ರಜನಿಕಾಂತ್​ ಜನ್ಮದಿನದ ಹಿನ್ನೆಲೆ ಟೈಟಲ್​ ಅನಾವರಣಗೊಂಡಿದೆ. 'ವೆಟ್ಟೈಯನ್​' (Vettaiyan) ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಜೊತೆಗೆ ಟೈಟಲ್​ ಟೀಸರ್​ ಅನ್ನು ಕೂಡ ಚಿತ್ರತಂಡ ಹಂಚಿಕೊಂಡಿದೆ. ಇದರಿಂದ ರಜನಿಕಾಂತ್​ ಮತ್ತೊಂದು ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. 'ಜೈಲರ್​' ಅದ್ಭುತ ಯಶಸ್ಸು ಕಂಡಿರುವ ಹಿನ್ನೆಲೆ ಅವರ ಅಭಿಮಾನಿಗಳಲ್ಲಿ ಈ ಸಿನಿಮಾದ ಮೇಲೆ ಸಹಜವಾಗಿಯೇ ಕುತೂಹಲ ಮೂಡಿದೆ.

ರಜಿನಿ ಜೊತೆ ಬಚ್ಚನ್​ ನಟನೆ: 'ವೆಟ್ಟೈಯನ್​' ಸಿನಿಮಾದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಭ್​ ಬಚ್ಚನ್​ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಈ ಇಬ್ಬರು ಸ್ಟಾರ್ಸ್ ಮುಂಬೈ ಶೂಟಿಂಗ್​ ಶೆಡ್ಯೂಲ್​ ಅನ್ನು​ ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ. 1991ರಲ್ಲಿ ಮೂಡಿ ಬಂದ 'ಹಮ್‌'ನಲ್ಲಿ ಕೊನೆ ಬಾರಿಗೆ ತೆರೆ ಹಂಚಿಕೊಂಡಿದ್ದ ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಇಬ್ಬರು ದಿಗ್ಗಜರು ಅಕ್ಟೋಬರ್ 25 ರಂದು ಈ ಪ್ರಾಜೆಕ್ಟ್‌ನ ಕೆಲಸ ಪ್ರಾರಂಭಿಸಿದರು. ಇತ್ತೀಚೆಗೆ ಚಿತ್ರದ ಕುರಿತು ಅಪ್‌ಡೇಟ್ ಹಂಚಿಕೊಂಡಿದ್ದ ನಿರ್ಮಾಪಕರು, ಭಾರತೀಯ ಚಿತ್ರರಂಗದ ಇಬ್ಬರು ದೊಡ್ಡ ತಾರೆಯರನ್ನು ಮತ್ತೆ ಒಂದುಗೂಡಿಸುತ್ತಿರುವ ಈ ಸಿನಿಮಾವು 'ಡಬಲ್​ ಡೋಸ್​ ಆಫ್ ಲೆಜೆಂಡ್ಸ್' ಆಗಲಿದೆ ಎಂದು ತಿಳಿಸಿದ್ದರು.

ಟಿ.ಜೆ ಜ್ಞಾನವೆಲ್ ನಿರ್ದೇಶನದ ಈ ಸಿನಿಮಾ ಅದ್ಭುತ ಮನರಂಜನೆ ಜೊತೆಗೆ ಅರ್ಥಪೂರ್ಣ ಸಂದೇಶವನ್ನೂ ಒಳಗೊಂಡಿರಲಿದೆ ಎಂದು ನಂಬಲಾಗಿದೆ. ಈ ಸಿನಿಮಾ ಬಿಗ್​ ಸ್ಟಾರ್ ಕಾಸ್ಟ್ ಮೂಲಕ ಗಮನ ಸೆಳೆಯುತ್ತಿದೆ. ರಜಿನಿ, ಬಿಗ್ ಬಿ ಅಲ್ಲದೇ, ದಕ್ಷಿಣದ ಬಹುಬೇಡಿಕೆ ತಾರೆಯರಾದ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಕೂಡ ಇದ್ದಾರೆ. ಜವಾನ್​, ಜೈಲರ್​ನಂತಹ ಸೂಪರ್​ ಹಿಟ್​ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಅನಿರುದ್ಧ್​ ರವಿಚಂದರ್ ಈ ಸಿನಿಮಾಗೂ​ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಮೂಲಕ ಸುಭಾಸ್ಕರನ್​ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಚಿತ್ರವು ಮುಂದಿನ ವರ್ಷ ತೆರೆ ಕಾಣುವ ಸಾಧ್ಯತೆಯಿದೆ.

ಇದನ್ನೂ ಓದಿ: ರಜನಿಕಾಂತ್ - ಅಮಿತಾಭ್ ಬಚ್ಚನ್ ಸಿನಿಮಾ: ಮುಂಬೈ ಶೂಟಿಂಗ್​ ಶೆಡ್ಯೂಲ್ ಕಂಪ್ಲೀಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.