ETV Bharat / entertainment

ಮನುರಂಜನ್ ರವಿಚಂದ್ರನ್ ಅಭಿನಯದ ಹೊಸ ಸಿನಿಮಾ ಮೇ 20ಕ್ಕೆ 'ಪ್ರಾರಂಭ' - ಕನ್ನಡ ಪ್ರಾರಂಭ ಸಿನಿಮಾ

ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನುರಂಜನ್ ರವಿಚಂದ್ರನ್ ನಟನೆಯ 'ಪ್ರಾರಂಭ' ಎಂಬ ಲವ್ ಸ್ಟೋರಿ ಆಧಾರಿತ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

'ಪ್ರಾರಂಭ' ಚಿತ್ರ
'ಪ್ರಾರಂಭ' ಚಿತ್ರ
author img

By

Published : May 18, 2022, 9:06 AM IST

'ಮುಗಿಲ್ ಪೇಟೆ', 'ಸಾಹೇಬ' ಸಿನಿಮಾ ನಂತರ ನಟ ರವಿಚಂದ್ರನ್ ಪುತ್ರ ಮನು‌ರಂಜನ್‌ ರವಿಚಂದ್ರನ್ 'ಪ್ರಾರಂಭ' ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸದ್ಯಕ್ಕೆ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಚಿತ್ರ ಬಿಡುಗಡೆಗೂ ಡೇಟ್ ಫಿಕ್ಸ್ ಆಗಿದೆ.

ಈ ಕುರಿತು ಮಾತನಾಡಿದ ನಟ ಮನುರಂಜನ್ ರವಿಚಂದ್ರನ್, 'ಇದು ನನ್ನ ಅಭಿನಯದ 4ನೇ ಚಿತ್ರ. ಪ್ರೀತಿ ಕೈ ಕೊಟ್ಟರೆ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಅದು ತಪ್ಪು. ನಮಗೂ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ ಹೀಗೆ ಕುಟುಂಬ ಇರುತ್ತದೆ ಎಂಬುದನ್ನು ಯೋಚಿಸಿ ಮುನ್ನಡೆಯಬೇಕು. ಇಂತಹ ಕಥೆ ಪ್ರಾರಂಭದಲ್ಲಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ' ಎಂದರು.

'ಪ್ರಾರಂಭ' ಚಿತ್ರತಂಡ
'ಪ್ರಾರಂಭ' ಚಿತ್ರತಂಡ

ನಿರ್ದೇಶಕ ಮನು ಕಲ್ಯಾಡಿ ಮಾತನಾಡಿ, 'ಮೂರು ವರ್ಷಗಳ ಹಿಂದೆ 'ಪ್ರಾರಂಭ' ಸಿನಿಮಾ ಕೆಲಸ ಆರಂಭವಾಯಿತು. ಎರಡು ವರ್ಷ ಕೋವಿಡ್​ನಿಂದ ಚಿತ್ರೀಕರಣ ವಿಳಂಬವಾಗಿದೆ. ಇದೊಂದು ಯೂತ್ ಲವ್ ಸ್ಟೋರಿ. ಮನುರಂಜನ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಸಿನಿಮಾ ನೋಡಿದವರಿಗೆ ತುಂಬಾ ಕನೆಕ್ಟ್ ಆಗುತ್ತದೆ ಎಂದು ಹೇಳಿದರು.

'ಪ್ರಾರಂಭ' ಚಿತ್ರತಂಡ
'ಪ್ರಾರಂಭ' ಚಿತ್ರತಂಡ

ಮನುರಂಜನ್ ರವಿಚಂದ್ರನ್ ಜೋಡಿಯಾಗಿ ನಟಿ ಕೀರ್ತಿ ಕಲ್ಕೇರಿ ನಟಿಸಿದ್ದು, ಇದೇ 20ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಾರಂಭಿಸುವುದಾಗಿ ವಿತರಕ ವೆಂಕಟ್ ಹೇಳಿದರು.

ಇದನ್ನೂ ಓದಿ: Cannes 2022 Red Carpet: ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ತಾರೆಯರ ರಂಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.