ETV Bharat / entertainment

ಬಿಗ್​ ಬಾಸ್: ತುಕಾಲಿ ಸಂತೋಷ್​- ಕಾರ್ತಿಕ್​ಗೆ ತಲೆ ಬೋಳಿಸಿಕೊಳ್ಳುವಂತೆ ಸವಾಲು ಹಾಕಿದ ಸಂಗೀತಾ - ಈಟಿವಿ ಭಾರತ ಕನ್ನಡ

BBK10: ಕನ್ನಡದ ಬಿಗ್​ ಬಾಸ್​ ಶೋನ ಏಳನೇ ವಾರದ ಮೊದಲ ಟಾಸ್ಕ್​​ ಪ್ರೋಮೋ ಬಿಡುಗಡೆಯಾಗಿದೆ.

Kannada Bigg Boss season 10 todays promo
ಬಿಗ್​ ಬಾಸ್: ತುಕಾಲಿ ಸಂತೋಷ್​- ಕಾರ್ತಿಕ್​ಗೆ ತಲೆ ಬೋಳಿಸಿಕೊಳ್ಳುವಂತೆ ಸವಾಲು ಹಾಕಿದ ಸಂಗೀತಾ
author img

By ETV Bharat Karnataka Team

Published : Nov 21, 2023, 12:25 PM IST

ಕಿಚ್ಚ ಸುದೀಪ್​ ನಡೆಸಿಕೊಡುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್​ ಬಾಸ್​'. ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ, ಸ್ನೇಹ, ಮನಸ್ತಾಪಗಳ ಮೂಲಕ ಸಿಕ್ಕಾಪಟ್ಟೆ ಮನರಂಜನೆ ಸಲುವಾಗಿ ಕಾರ್ಯಕ್ರಮ ಮನೆ ಮಾತಾಗುತ್ತಿದೆ. ಏಳನೇ ವಾರ ಶುರುವಾಗಿದ್ದು, ಸ್ಪರ್ಧೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಟಫ್​ ಕಾಂಪಿಟೇಶನ್ ಜೊತೆ ಕಷ್ಟದ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. 'ಬಿಗ್​ ಬಾಸ್​' ಪಟ್ಟ ಗೆಲ್ಲಲು ಸ್ಪರ್ಧಿಗಳು ಏನು ಬೇಕಾದರೂ ಮಾಡ್ತಾರೆ ಅನ್ನೋದಕ್ಕೆ ಇಂದಿನ ಸಂಚಿಕೆ ಸಾಕ್ಷಿಯಾಗಲಿದೆ.

ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಾರ್ತಿಕ್​ ಮತ್ತು ತುಕಾಲಿ ಸಂತೋಷ್​ ಅವರ ತಲೆ ಬೋಳಿಸುತ್ತಿರುವ ದೃಶ್ಯ ಕಂಡುಬಂದಿದೆ. ಬಿಗ್​ ಬಾಸ್​ ಮನೆ ಮಂದಿಯನ್ನು 'ಗಜಕೇಸರಿ' ಮತ್ತು 'ಸಂಪತ್ತಿಗೆ ಸವಾಲ್'​ ಎಂಬ ಎರಡು ತಂಡಗಳನ್ನಾಗಿ ಮಾಡಲಾಗಿದೆ. 'ಗಜಕೇಸರಿ' ತಂಡದಲ್ಲಿ ವಿನಯ್​ ಗೌಡ, ನಮ್ರತಾ ಗೌಡ, ಸಂಗೀತಾ ಶೃಂಗೇರಿ, ಸ್ನೇಹಿತ್​​, ಸಿರಿ ಮತ್ತು ಡ್ರೋನ್​ ಪ್ರತಾಪ್​ ಇದ್ದಾರೆ. ಮೈಕಲ್​, ನೀತು, ತನಿಷಾ, ವರ್ತೂರು ಸಂತೋಷ್​, ಕಾರ್ತಿಕ್​ ಮತ್ತು ತುಕಾಲಿ ಸಂತೋಷ್​ 'ಸಂಪತ್ತಿಗೆ ಸವಾಲ್' ತಂಡದಲ್ಲಿ ಇದ್ದಾರೆ.

ಇವರಿಗೆ ಬಿಗ್​ ಬಾಸ್​, ಒಂದು ತಂಡ ಎದುರಾಳಿ ತಂಡಕ್ಕೆ ಒಂದಾದ ಮೇಲೆ ಒಂದರಂತೆ ಸವಾಲು ಹಾಕುವ ಟಾಸ್ಕ್​ ಅನ್ನು ನೀಡಿದ್ದಾರೆ. ಅದರ ಭಾಗವಾಗಿ ಸಂಗೀತಾ, ತಮ್ಮ ಅಪೋಸಿಟ್​ ಟೀಂನ ಕಾರ್ತಿಕ್​ ಮತ್ತು ತುಕಾಲಿ ಸಂತೋಷ್ ಅವರು ತಲೆ ಬೋಳಿಸಿಕೊಳ್ಳಬೇಕು ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. ನಂತರದ ದೃಶ್ಯದಲ್ಲಿ ಕಾರ್ತಿಕ್​ ಅವರು, 'ಗೇಮ್​ಗಾಗಿ ಮತ್ತು ತಂಡಕ್ಕಾಗಿ ಏನು ಬೇಕಾದ್ರೂ ಮಾಡ್ತೀನಿ. ಬೋಳಿಸಿಕೊಂಡ್ರೆ ಕೂದಲು ಮತ್ತೆ ಬರುತ್ತೆ' ಎಂದು ಹೇಳಿ ತಲೆ ಬೋಳಿಸಿಕೊಳ್ಳೋಕೆ ತುಕಾಲಿ ಸಂತೋಷ್​ ಜೊತೆ ಕುಳಿತಿದ್ದಾರೆ.

ನಿನ್ನೆಯ ನಾಮಿನೇಷನ್​ ಟಾಸ್ಕ್​ನಲ್ಲಿ ಸಂಗೀತಾ ಅವರು ಕಾರ್ತಿಕ್​ಗೆ ನಾಮಿನೇಷನ್​ ಮಾಡಲು ಅಧಿಕಾರ ಕೊಟ್ಟಿದ್ದರು. ಹಾಗೆಯೇ ಕಾರ್ತಿಕ್​ ಕೂಡ ಸಂಗೀತಾಗೆ ನಾಮಿನೇಷನ್​ ಮಾಡಲು ಅಧಿಕಾರ ನೀಡಿದ್ದರು. ಕಾರ್ತಿಕ್​ ಜೊತೆಗೆ ಫ್ರೆಂಡ್​ ಆಗಿದ್ದ ಸಂಗೀತಾ ಇದೀಗ ಅವರಿಗೆ ತಲೆಬೋಳಿಸಿಕೊಳ್ಳುವ ಸವಾಲು ಹಾಕಿದ್ದಾರೆ. ಕಾರ್ತಿಕ್​ ಅವರು ಇದನ್ನು ಆಟವಾಗಿ ಪರಿಗಣಿಸಿ ಸ್ವೀಕರಿಸಿದ್ದಾರೆ. ಇದನ್ನೆಲ್ಲಾ ದಿಗ್ಮೂಢರಾಗಿ ಬ್ರಹ್ಮಾಂಡ ಗುರೂಜಿ ನೋಡುತ್ತ ಕುಳಿತಿರುವುದು ಪ್ರೋಮೋದಲ್ಲಿ ಸೆರೆಯಾಗಿದೆ.

ಹಾಗಾದ್ರೆ ಏನಾಗ್ತಿದೆ ಬಿಗ್​ ಬಾಸ್​ ಮನೆಯಲ್ಲಿ? ಗೆಲ್ಲುವ ಹಠ ಯಾವ ಅತಿರೇಕಕ್ಕೆ ಸ್ಪರ್ಧಿಗಳನ್ನು ತೆಗೆದುಕೊಂಡು ಹೋಗುತ್ತಿದೆ? ಕಾರ್ತಿಕ್​ ಮತ್ತು ಸಂಗೀತಾ ಸ್ನೇಹ ಮೊದಲಿನಂತೆಯೇ ಮುಂದುವರೆಯುತ್ತದೆಯೇ? ಎಂಬೆಲ್ಲಾ ಕುತೂಹಲಕ್ಕೆ ಉತ್ತರ ತಿಳಿದುಕೊಳ್ಳಲು ಜಿಯೋ ಸಿನಿಮಾದಲ್ಲಿ ನೇರ ಪ್ರಸಾರವಾಗುತ್ತಿರುವ ಬಿಗ್‌ ಬಾಸ್ ಕನ್ನಡವನ್ನು ವೀಕ್ಷಿಸಬಹುದಾಗಿದೆ. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರ ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಬ್ರಹ್ಮಾಂಡ ಗುರೂಜಿ​ ಪ್ರವೇಶ; ಮನೆ ಮಂದಿಗೆ ಅಚ್ಚರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.