ಟೂರ್ನಿವಲ್ನ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ANYELP Entertainment ಹಾಗೂ White lotus entertainment ಸಂಸ್ಥೆವತಿಯಿಂದ ಈ ಟೂರ್ನಿವಲ್ (First Indian international celebrity tournament and carnival)aನ್ನು ಆಯೋಜಿಸಲಾಗಿತ್ತು.
ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟನೆಯಾಯಿತು. ಪ್ರಸಿದ್ಧ ಕಲಾವಿದರೊಬ್ಬರ ಭರತನಾಟ್ಯ, ಖ್ಯಾತ ಶ್ರೀಲಂಕಾ ಗಾಯಕಿ ಯೋಹಾನಿ ಅವರ ಗಾಯನ ಹಾಗೂ ಫ್ಯಾಷನ್ ಶೋ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆದವು.
ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯಾನ ಗ್ಯಾಮೇಜ್, ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಟಿ ಪ್ರಿಯಾಂಕ ಉಪೇಂದ್ರ, ಜಾಕಿರ್ ಹುಸೇನ್, ನಟ ರುದ್ರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟ ಅಜಯ್ ರಾವ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
"ಟೂರ್ನಿವಲ್" ಎಂದರೆ ಸೌತ್ ಏಷ್ಯಾ ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯ. ನಮ್ಮ ರಾಜ್ಯದ ಸಿನಿತಾರೆಯರು ಹಾಗೂ ಮಾಲ್ಡೀವ್ಸ್ನ ಸಿನಿತಾರೆಯರ ನಡುವೆ ಫುಟ್ಬಾಲ್ ಟೂರ್ನಮೆಂಟ್ ಆಯೋಜಿಸಲಾಗುವುದು. ಬರೀ ಕ್ರೀಡೆ ಅಷ್ಟೇ ಅಲ್ಲ. ಬೇರೆ ಬೇರೆ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂರು ದೇಶಗಳಲ್ಲೂ ನಡೆಸುವ ಉದ್ದೇಶವಿದೆ. ಇಲ್ಲಿನ ಚಿತ್ರ ಸಹ ಮಾಲ್ಡೀವ್ಸ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಕಾರ್ಯಕ್ರಮಗಳ ಬಗ್ಗೆ "ಟೂರ್ನಿವಲ್" ನ ಮ್ಯಾನೇಜಿಂಗ್ ಡೈರೆಕ್ಟರ್ ಪೂಜಾಶ್ರೀ ವಿವರಣೆ ನೀಡಿದರು.
ಇದನ್ನೂ ಓದಿ: ದಾಖಲೆ ಬರೆದ ಕಾಂತಾರ: ಬಾಕ್ಸ್ ಆಫೀಸ್‌ನಲ್ಲಿ ಒಂದೇ ದಿನ 15 ಕೋಟಿ ರೂಪಾಯಿ ಗಳಿಕೆ
ಈ ಸಂಸ್ಥೆಯವರು ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವರಿಗೆ ಬೇಕಾದ ಸಹಕಾರ ನೀಡಲು ನಾವು ಸಿದ್ಧ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವರಾದ ಇಬ್ರಾಹಿಂ ರಷೀದ್ ಹಾಗೂ ಶ್ರೀಲಂಕಾ ಪ್ರವಾಸೋದ್ಯಮ ಸಚಿವರಾದ ಡಯನಾ ಗ್ಯಾಮೇಜ್ ತಿಳಿಸಿದರು.