ETV Bharat / entertainment

BBK: ಮನೆ ಮಂದಿಗೆ ಅಮ್ಮಂದಿರ ಕೈ ಅಡುಗೆ... ವರ್ತೂರು ಸಂತೋಷ್​ಗೆ ಅಮ್ಮನೇ ಬಂದ್ರು! - ಈಟಿವಿ ಭಾರತ ಕನ್ನಡ

Bigg Boss Season 10: ಬಿಗ್​ ಬಾಸ್​ ಮನೆ ಮಂದಿಗೆ ದೀಪಾವಳಿ ಸರ್​ಪ್ರೈಸ್​ ಹೇಗಿದೆ ನೋಡಿ..

Bigg Boss Season 10 promo
BBK: ಮನೆ ಮಂದಿಗೆ ಅಮ್ಮಂದಿರ ಕೈಯಡುಗೆ... ವರ್ತೂರ್ ಸಂತೋಷ್​ಗೆ ಅಮ್ಮನೇ ಬಂದ್ರು!
author img

By ETV Bharat Karnataka Team

Published : Nov 13, 2023, 5:42 PM IST

'ಬಿಗ್​ ಬಾಸ್​ ಸೀಸನ್​ 10' ಪ್ರೇಕ್ಷಕರಿಗೆ ಮನರಂಜನೆಯ ಔತಣವನ್ನೇ ನೀಡುತ್ತಿದೆ. ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ ಸ್ನೇಹ, ಮನಸ್ತಾಪ ಜೊತೆಗೆ ಸಿಕ್ಕಾಪಟ್ಟೆ ಮನರಂಜನೆ ಹೀಗೆ ನಾನಾ ವಿಷಯಗಳ ಸಲುವಾಗಿ ಬಿಗ್​ ಬಾಸ್​ ಸಖತ್​ ಸದ್ದು ಮಾಡುತ್ತಿದೆ. ಈ ಮಧ್ಯೆ ವರ್ತೂರು ಸಂತೋಷ್​ ಸೇಫ್​ ಆಗಿದ್ರೂ, ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿರುವುದು ಬಿಗ್​ ಟ್ವಿಸ್ಟ್​ ನೀಡಿದೆ.

  • ಹಬ್ಬದ ಸರ್ಪ್ರೈಸ್! ಎಲ್ಲರಿಗೆ ಅಮ್ಮಂದಿರ ಕೈಯಡುಗೆ... ವರ್ತೂರ್ ಸಂತೋಷ್​ಗೆ ಅಮ್ಮನೇ ಬಂದ್ರು!!

    ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada pic.twitter.com/1XtA8EPwoS

    — Colors Kannada (@ColorsKannada) November 13, 2023 " class="align-text-top noRightClick twitterSection" data=" ">

ಇವೆಲ್ಲದರ ಜೊತೆಗೆ ದೀಪಾವಳಿ ಖುಷಿಯಲ್ಲಿರುವ ಮನೆ ಮಂದಿಗೆ ಬಿಗ್​ ಬಾಸ್​ ಭಾವುಕ ಸರ್​ಪ್ರೈಸ್​ ನೀಡಿದೆ. ಸ್ಪರ್ಧಿಗಳಿಗೆ ಅವರ ಮನೆಯಿಂದ ಅವರಿಗಿಷ್ಟವಾದ ತಿನಿಸುಗಳನ್ನು ತರಿಸಿ ಕೊಡಲಾಗಿದೆ. ಬಾಕ್ಸ್​ನಲ್ಲಿ ಬಂದ ತಮ್ಮಿಷ್ಟದ ತಿನಿಸನ್ನು ಮಾಡಿ ಕಳುಹಿಸಿದ ಮನೆಯವರನ್ನು ನೆನೆದು ಸ್ಪರ್ಧಿಗಳು ಭಾವುಕರಾಗಿದ್ದಾರೆ. ಎಲ್ಲರ ಮನೆಯಿಂದ ತಿಂಡಿ ಬಂದರೂ ಒಬ್ಬ ಸ್ಪರ್ಧಿ ಮನೆಯಿಂದ ಮಾತ್ರ ಬಾಕ್ಸ್ ಬಂದಿರಲಿಲ್ಲ.

ಅದು ವರ್ತೂರು ಸಂತೋಷ್​ ಅವರ ಮನೆಯಿಂದಾಗಿತ್ತು. ಇದನ್ನು ನೋಡಿ ವರ್ತೂರು ಅವರು ದುಃಖದಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆಗಲೇ ಇಡೀ ಮನೆಯವರೆಲ್ಲರೂ ದಂಗಾಗಿ ಬಿಡುವ ಘಟನೆ ನಡೆಯಿತು. ಈ ಘಟನೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸೆರೆಯಾಗಿದೆ. ತೆರೆದ ಬಿಗ್‌ ಬಾಸ್ ಮನೆಯ ಬಾಗಿಲಿಂದ ವರ್ತೂರು ಸಂತೋಷ್ ಅವರ ಅಮ್ಮನೇ ಬುತ್ತಿ ಹಿಡಿದು ನಡೆದುಕೊಂಡು ಬರುತ್ತಿದ್ದರು. ಅವರ ಬಾಯಿಂದ 'ಕಂದ' ಅಂದಾಗಲಂತೂ ಸ್ಪರ್ಧಿಗಳೆಲ್ಲರಿಗೂ ತಮ್ಮ ಅಮ್ಮನೇ ಕರೆದಷ್ಟು ಖುಷಿಪಟ್ಟರು.

ಇದನ್ನೂ ಓದಿ: 34 ಲಕ್ಷ ಮತ ಪಡೆದು ಸೇಫ್​ ಆದ್ರೂ ಹೊರಹೋಗುತ್ತೇನೆಂದ ವರ್ತೂರು ಸಂತೋಷ್: ಕುತೂಹಲ ಮೂಡಿಸಿದ ಕಿಚ್ಚನ ವಾರದ ಕಥೆ!

ವರ್ತೂರು ಸಂತೋಷ್‌ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ನಿನ್ನೆಯಿಂದಲೂ ಹೇಳುತ್ತಿದ್ದಾರೆ. ನಿರ್ಧಾರವನ್ನು ಅವರಿಗೆ ಬಿಟ್ಟು ಕಿಚ್ಚ ಸುದೀಪ್‌ ವೀಕೆಂಡ್‌ ಎಪಿಸೋಡ್ ಮುಗಿಸಿದ್ದಾರೆ. ಇಂದು ಅವರನ್ನು ಮನೆಯವರೆಲ್ಲ ಕನ್ವಿನ್ಸ್ ಮಾಡುತ್ತಿದ್ದಾರೆ ಕೂಡ. ಜೊತೆಗೆ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ನಟಿ ಭ್ಯಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್ ಕೂಡ ಬಂದು ವರ್ತೂರು ಅವರ ಜೊತೆಗೆ ಮಾತನಾಡಿ ಹೋಗಿದ್ದಾರೆ.

ಆದರೆ, ವರ್ತೂರು ಅವರ ನಿರ್ಧಾರ ಏನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಈ ನಡುವೆಯೇ ಅವರ ಅಮ್ಮನೇ ಬಿಗ್‌ ಬಾಸ್ ಮನೆಯೊಳಗೆ ಬಂದಿರುವುದು ಕುತೂಹಲ ಹೆಚ್ಚಿಸಿದೆ. ಜೊತೆಗೆ ಅವರು, 'ನನ್ನ ಆಸೆ ನೆರವೇರಿಸ್ತಾನೆ ನನ್ ಮಗ. ನಾನು ಇದೊಂದು ರಿಕ್ವೆಸ್ಟ್ ಮಾಡ್ಕೊಳ್ತಿದ್ದೀನಿ ನನ್ ಮಗನಲ್ಲಿ' ಎಂದು ನಡುಗುವ ಧ್ವನಿಯಲ್ಲಿ ಹೇಳಿರುವುದು ಪ್ರೋಮೋದಲ್ಲಿ ಸೆರೆಯಾಗಿದೆ.

ವರ್ತೂರು ಸಂತೋಷ್​ ಅವರ ಅಮ್ಮ, ಮಗನಲ್ಲಿ ಮಾಡಿಕೊಂಡ ವಿನಂತಿ ಏನು? ಅದನ್ನು ನೇರವೇರಿಸುವುದಕ್ಕೆ ವರ್ತೂರು ಸಿದ್ಧರಾಗ್ತಾರಾ? ಈ ಎಲ್ಲವನ್ನು ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೋಡಿ ತಿಳಿದುಕೊಳ್ಳಬೇಕು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್​ಗಳನ್ನು ಕಲರ್ಸ್​ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಮನೆಯೊಳಗಿರಲು ಕನ್ವಿನ್ಸ್ ಆಗ್ತಿಲ್ಲ ವರ್ತೂರು ಸಂತೋಷ್; ಬಿಗ್‌ಬಾಸ್​ಗೆ ಸುಷ್ಮಾ ಕೆ ರಾವ್ ಎಂಟ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.