ಕನ್ನಡ ಚಿತ್ರರಂಗದ ಕೇಂದ್ರ ಸ್ಥಾನವಾಗಿರುವ 'ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ'ಯ 64ನೇ ವರ್ಷದ ವಾರ್ಷಿಕ ಚುನಾವಣೆ ನಡೆದಿದ್ದು, ನಿರ್ಮಾಪಕ ಭಾ.ಮಾ.ಹರೀಶ್ಗೆ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾ.ಮಾ.ಹರೀಶ್ ಹಾಗೂ ಸಾ.ರಾ.ಗೋವಿಂದು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಇದನ್ನೂ ಓದಿ: ಈ ಬಾರಿ ಭಾ.ಮಾ ಹರೀಶ್ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಬೇಕು: ನಟಿ ಜಯಮಾಲ
762 ಮತಗಳನ್ನು ಪಡೆಯುವ ಮೂಲಕ ಭಾ.ಮಾ.ಹರೀಶ್ ಜಯಭೇರಿ ಭಾರಿಸಿದ್ದಾರೆ. ಸಾ.ರಾ.ಗೋವಿಂದು 378 ಮತಗಳನ್ನು ಪಡೆದಿದ್ದಾರೆ. ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಜೈ ಜಗದೀಶ್ ಗೆಲುವು ಸಾಧಿಸಿದ್ದು, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಟ, ನಿರ್ಮಾಪಕ ಸುಂದರ್ ರಾಜ್ ಆಯ್ಕೆಯಾಗಿದ್ದಾರೆ.
ವಿತರಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಶಿಲ್ಪ ಶ್ರೀನಿವಾಸ್ ಹಾಗೂ ಗೌರವ ಕಾರ್ಯದರ್ಶಿಯಾಗಿ ಪಾರ್ಥ ಸಾರಥಿ ಆಯ್ಕೆ ಆಗಿದ್ದಾರೆ. ಖಜಾಂಚಿಯಾಗಿ ದುನಿಯಾ ಸಿನಿಮಾ ನಿರ್ಮಾಪಕ ಟಿ.ಪಿ.ಸಿದ್ಧರಾಜು ಆಯ್ಕೆಯಾಗಿದ್ದಾರೆ. ಸೋಮವಾರ ನೂತನ ಅಧ್ಯಕ್ಷರಾಗಿ ಭಾ.ಮಾ ಹರೀಶ್ ಅಧಿಕಾರ ಸ್ವೀಕರಿಸಲಿದ್ದಾರೆ
ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ.. ಯಾರಾಗ್ತಾರೆ ಅಧ್ಯಕ್ಷ?